‘ನಮ್ಮ ಜಿಲ್ಲೆ-ನಮ್ಮ ಹೆಮ್ಮೆ: ಇದುವರೆಗೂ ಕೊರೊನಾ ಕ್ರಿಮಿಯನ್ನ ಒಳಕ್ಕೆ ಬಿಟ್ಕೊಂಡಿಲ್ಲ’

ಶಿವಮೊಗ್ಗ: ಮಳೆನಾಡು ಭಾಗದ ಶಿವಮೊಗ್ಗ ಸದಾ ಹಸಿರಿನಿಂದ ನಳನಳಿಸುತ್ತಿರುತ್ತದೆ. ಹಸಿರು ಆದ್ರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಅಂದ್ರೆ ಹಸಿರು ಅಂತಿದೆ. ಇದಕ್ಕೆ ಕೋಡು ಮೂಡುವಂತೆ ಈಗ ಕೊರೊನಾ ಕ್ರಿಮಿಯ ಅಟ್ಟಹಾಸದ ಕಾಲದಲ್ಲಿ ಸಹ ಶಿವಮೊಗ್ಗ ಜಿಲ್ಲೆ ಹಸಿರು ಹಸಿರಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಡಿ ಬಿಗಿ ಮಾಡಲಾಗಿದೆ. ಜಿಲ್ಲೆಗೆ ವಿವಿಧ ಅಡ್ಡ ರಸ್ತೆಯಿಂದ ಬರುವ ಜನರನ್ನೂ […]

‘ನಮ್ಮ ಜಿಲ್ಲೆ-ನಮ್ಮ ಹೆಮ್ಮೆ: ಇದುವರೆಗೂ ಕೊರೊನಾ ಕ್ರಿಮಿಯನ್ನ ಒಳಕ್ಕೆ ಬಿಟ್ಕೊಂಡಿಲ್ಲ’
ಕೆ.ಎಸ್ .ಈಶ್ವರಪ್ಪ
ಸಾಧು ಶ್ರೀನಾಥ್​

Updated on: May 08, 2020 | 12:57 PM

ಶಿವಮೊಗ್ಗ: ಮಳೆನಾಡು ಭಾಗದ ಶಿವಮೊಗ್ಗ ಸದಾ ಹಸಿರಿನಿಂದ ನಳನಳಿಸುತ್ತಿರುತ್ತದೆ. ಹಸಿರು ಆದ್ರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಅಂದ್ರೆ ಹಸಿರು ಅಂತಿದೆ. ಇದಕ್ಕೆ ಕೋಡು ಮೂಡುವಂತೆ ಈಗ ಕೊರೊನಾ ಕ್ರಿಮಿಯ ಅಟ್ಟಹಾಸದ ಕಾಲದಲ್ಲಿ ಸಹ ಶಿವಮೊಗ್ಗ ಜಿಲ್ಲೆ ಹಸಿರು ಹಸಿರಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಡಿ ಬಿಗಿ ಮಾಡಲಾಗಿದೆ. ಜಿಲ್ಲೆಗೆ ವಿವಿಧ ಅಡ್ಡ ರಸ್ತೆಯಿಂದ ಬರುವ ಜನರನ್ನೂ ನಿಲ್ಲಿಸಲಾಗಿದೆ. ಪೊಲೀಸರ ಕಣ್ತಪ್ಪಿಸಿ ಏನಾದ್ರು ಜನ ಬಂದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ರಾಜ್ಯ ಸರಕಾರದ ನೀತಿ, ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್​ಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಅಲ್ಲದೆ ಈಗಾಗಲೇ ಎಲ್ಲರಿಗೂ ಜಾಬ್ ಕಾರ್ಡ್ ನೀಡಲಾಗಿದೆ. ನಿರೀಕ್ಷೆಗೆ ಮೀರಿ ಕೂಲಿ ಕಾರ್ಮಿಕರು ಬರುತ್ತಿದ್ದಾರೆ. ಯಾರಿಗೆಲ್ಲ ಜಾಬ್ ಕಾರ್ಡ್ ಸಿಕ್ಕಿಲ್ಲ ಅವರಿಗೆ ಜಾಬ್ ಕಾರ್ಡ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲಸ ಮಾಡಿದ 15 ದಿನದಲ್ಲಿ ಅವರ ಖಾತೆಗೆ ಕೂಲಿ ಹಣ ಜವಾವಣೆಯಾಗುತ್ತೆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಅರ್ಜಿ ಹಾಕಿದ್ರೂ ಅವರಿಗೂ ಜಾಬ್ ಕಾರ್ಡ್ ನೀಡಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ.

Published On - 12:07 pm, Fri, 8 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us