ಸೆಲ್ಫಿ: ಕಾಲು ಜಾರಿ ಹೇಮಾವತಿಗೆ ಬಲಿಯಾದ ಬೆಂಗಳೂರಿನ ಯುವ-ನವಜೋಡಿ
ಸಕಲೇಶಪುರ: ಹೇಮಾವತಿ ನದಿಯಲ್ಲಿ ಮುಳುಗಿ ನವದಂಪತಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಾಲಿ ಗ್ರಾಮದಲ್ಲಿ ನಡೆದಿದೆ. ಅರ್ಥೇಶ್(27), ಕೃತಿಕಾ(23) ನೀರುಪಾಲಾದ ನವದಂಪತಿ. 2 ತಿಂಗಳ ಹಿಂದಷ್ಟೇ ಅರ್ಥೇಶ್, ಕೃತಿಕಾ ವಿವಾಹವಾಗಿತ್ತು. ಮೃತ ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ದಂಪತಿ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿಗೆ ಬಂದಿದ್ದರು. ಮನೆಯಿಂದ ನಿನ್ನೆ ಸಂಜೆ ಬೈಕ್ನಲ್ಲಿ ತೆರಳಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ […]
ಸಕಲೇಶಪುರ: ಹೇಮಾವತಿ ನದಿಯಲ್ಲಿ ಮುಳುಗಿ ನವದಂಪತಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆನ್ನಾಲಿ ಗ್ರಾಮದಲ್ಲಿ ನಡೆದಿದೆ. ಅರ್ಥೇಶ್(27), ಕೃತಿಕಾ(23) ನೀರುಪಾಲಾದ ನವದಂಪತಿ.
2 ತಿಂಗಳ ಹಿಂದಷ್ಟೇ ಅರ್ಥೇಶ್, ಕೃತಿಕಾ ವಿವಾಹವಾಗಿತ್ತು. ಮೃತ ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ದಂಪತಿ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿಗೆ ಬಂದಿದ್ದರು. ಮನೆಯಿಂದ ನಿನ್ನೆ ಸಂಜೆ ಬೈಕ್ನಲ್ಲಿ ತೆರಳಿದ್ದಾರೆ.
ರಸ್ತೆಯಲ್ಲಿ ಹೋಗುವಾಗ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published On - 11:25 am, Fri, 8 May 20