ಉತ್ತಮ ಊಟ, ಸೂಕ್ತ ಚಿಕಿತ್ಸೆನೀಡುತ್ತಿಲ್ಲ: ಕೋವಿಡ್ ಸೆಂಟರ್​ನಲ್ಲಿ ಸೋಂಕಿತರ ಪರದಾಟ

ಗದಗ: ಕಳೆದ ನಾಲ್ಕೈದು ತಿಂಗಳಿನಿಂದ ಜನ ಜೀವನವನ್ನು ಬುಡಮೇಲು ಮಾಡಿರುವ ಕೊರೊನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಇದರ ಜೊತೆಗೆ ಸರ್ಕಾರದ ಅವ್ಯವಸ್ಥೆ, ಆಸ್ಪತ್ರೆಗಳ ನಿರ್ಲಕ್ಷ್ಯ ಎಲ್ಲವು ಮುಂದುವರೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಊಟ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರು ಆರೋಪಿಸಿದ್ದಾರೆ. ಇದರಿಂದ ನೊಂದು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಉತ್ತಮ ಊಟ, ಸೂಕ್ತ ಚಿಕಿತ್ಸೆಯನ್ನು ನೀಡಿ. ಇಲ್ಲದಿದ್ದರೆ […]

ಉತ್ತಮ ಊಟ, ಸೂಕ್ತ ಚಿಕಿತ್ಸೆನೀಡುತ್ತಿಲ್ಲ: ಕೋವಿಡ್ ಸೆಂಟರ್​ನಲ್ಲಿ ಸೋಂಕಿತರ ಪರದಾಟ

Updated on: Aug 23, 2020 | 9:01 AM

ಗದಗ: ಕಳೆದ ನಾಲ್ಕೈದು ತಿಂಗಳಿನಿಂದ ಜನ ಜೀವನವನ್ನು ಬುಡಮೇಲು ಮಾಡಿರುವ ಕೊರೊನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಇದರ ಜೊತೆಗೆ ಸರ್ಕಾರದ ಅವ್ಯವಸ್ಥೆ, ಆಸ್ಪತ್ರೆಗಳ ನಿರ್ಲಕ್ಷ್ಯ ಎಲ್ಲವು ಮುಂದುವರೆದಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಊಟ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರು ಆರೋಪಿಸಿದ್ದಾರೆ. ಇದರಿಂದ ನೊಂದು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ಉತ್ತಮ ಊಟ, ಸೂಕ್ತ ಚಿಕಿತ್ಸೆಯನ್ನು ನೀಡಿ. ಇಲ್ಲದಿದ್ದರೆ ನಮ್ಮನ್ನು ಬಿಟ್ಟುಬಿಡಿ ಮನೆಗೆ ಹೋಗುತ್ತೇವೆ ಎಂದು ಸೋಂಕಿತರು ಆಗ್ರಹಿಸಿದ್ದಾರೆ.