ಕರ್ನಾಟಕದ ಇಬ್ಬರು ‘ಕೈ’ ನಾಯಕರಿಗೆ ಎಐಸಿಸಿ ಸ್ಥಾನ ಸಾಧ್ಯತೆ
ಬೆಂಗಳೂರು: ಕರ್ನಾಟಕದ ಇಬ್ಬರು ‘ಕೈ’ ನಾಯಕರಿಗೆ ಎಐಸಿಸಿ ಸ್ಥಾನ ಸಿಗುವ ಸಾಧ್ಯತೆಇದೆ. ಇಬ್ಬರಿಗೆ ಎಐಸಿಸಿಯಲ್ಲಿ ಪ್ರಮುಖ ಹುದ್ದೆ ನೀಡಲು ಹೈಕಮಾಂಡ್ ಉತ್ಸುಕರಾಗಿದ್ದಾರೆ. ಎಐಸಿಸಿ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ ಹೆಸರು ಕೇಳಿ ಬಂದಿದೆ. ಹೆಚ್.ಕೆ.ಪಾಟೀಲ್‌ಗೆ ಸಿಡಬ್ಲ್ಯುಸಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಹೈಕಮಾಂಡ್ H.K.ಪಾಟೀಲ್‌ಗೆ AICCಪ್ರಧಾನ ಕಾರ್ಯದರ್ಶಿ ಆಫರ್ ನೀಡಿತ್ತು. ಆಗ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ರಾಜ್ಯ ರಾಜಕಾರಣದಲ್ಲಿ ಮುಂದುವರಿಯಲು ಅಸಕ್ತಿ ತೋರಿದ್ದರು. ಈಗ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ಥಾನಕ್ಕೆ ಹೆಚ್‌ಕೆಪಿ ಹೆಸರು ಕೇಳಿ […]

ಬೆಂಗಳೂರು: ಕರ್ನಾಟಕದ ಇಬ್ಬರು ‘ಕೈ’ ನಾಯಕರಿಗೆ ಎಐಸಿಸಿ ಸ್ಥಾನ ಸಿಗುವ ಸಾಧ್ಯತೆಇದೆ. ಇಬ್ಬರಿಗೆ ಎಐಸಿಸಿಯಲ್ಲಿ ಪ್ರಮುಖ ಹುದ್ದೆ ನೀಡಲು ಹೈಕಮಾಂಡ್ ಉತ್ಸುಕರಾಗಿದ್ದಾರೆ. ಎಐಸಿಸಿ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ ಹೆಸರು ಕೇಳಿ ಬಂದಿದೆ.
ಹೆಚ್.ಕೆ.ಪಾಟೀಲ್‌ಗೆ ಸಿಡಬ್ಲ್ಯುಸಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಹೈಕಮಾಂಡ್ H.K.ಪಾಟೀಲ್‌ಗೆ AICCಪ್ರಧಾನ ಕಾರ್ಯದರ್ಶಿ ಆಫರ್ ನೀಡಿತ್ತು. ಆಗ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ರಾಜ್ಯ ರಾಜಕಾರಣದಲ್ಲಿ ಮುಂದುವರಿಯಲು ಅಸಕ್ತಿ ತೋರಿದ್ದರು. ಈಗ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ಥಾನಕ್ಕೆ ಹೆಚ್‌ಕೆಪಿ ಹೆಸರು ಕೇಳಿ ಬಂದಿದೆ.
ಇನ್ನು ಹಾಲಿ ಸದಸ್ಯ ಕೆ.ಹೆಚ್.ಮುನಿಯಪ್ಪಗೆ ಪರ್ಯಾಯ ಸ್ಥಾನ ಸಿಗುವ ಸಾಧ್ಯತೆ ಇದೆ. CWC ಬದಲಿಗೆ ಎಸ್ಸಿ ವಿಭಾಗ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಥವಾ ದಕ್ಷಿಣ ರಾಜ್ಯ ಉಸ್ತುವಾರಿಯಾಗಿ ನೇಮಿಸುವ ಸಾಧ್ಯತೆ ಇದೆ.




