
ಬೆಂಗಳೂರು: ಕಿಸಾನ್ ಸಂಘರ್ಷ ಸಮಿತಿ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಲಾರಿ ಮಾಲೀಕರ ಸಂಘವು ಭಾರತ್ ಬಂದ್‌ಗೆ ಬೆಂಬಲ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
6-6ರವರೆಗೆ 4.50 ಲಕ್ಷ ಲಾರಿಗಳ ಓಡಾಟ ಸ್ಥಗಿತ
ಹೊರರಾಜ್ಯದಿಂದ ಬರುವ ಲಾರಿಗಳು ಗಡಿಯಲ್ಲೇ ಇರುತ್ತವೆ. ಸೆ.25ರಂದು ರಾಜ್ಯದೊಳಗೆ ಲಾರಿಗಳು ಪ್ರವೇಶ ಮಾಡಲ್ಲ. ರೈತರ ಪ್ರತಿಯೊಂದು ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
Published On - 10:07 am, Wed, 23 September 20