ಇದು 24/7 ದೇವಸ್ಥಾನ! ಊರಕಾಯೋ ಮಾರಮ್ಮನಿಗೆ ಪೂಜಾರಿಗಳೇ ಬೇಕಿಲ್ಲ, ಭಕ್ತರೇ ಎಲ್ಲಾ..

ಮಾಲೂರು: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಗಾದೆ ಮಾತಿದೆ. ಇದರರ್ಥ ದೇವರನ್ನಷ್ಟೇ ಒಲಿಸಿಕೊಂಡರೆ ಸಾಲದು, ದೇವರು ಕೊಟ್ಟ ವರ ಸಿಗಬೇಕಾದರೆ ಪೂಜಾರಿಯನ್ನೂ ಒಲಿಸಿಕೊಳ್ಳಬೇಕು ಅಂತಾ. ಆದ್ರೆ ಅಂಥಾ ಅವಶ್ಯತೆಯೇ ಇಲ್ಲದ ಅದೃಷ್ಟವಂತರೂ ಇದ್ದಾರೆ ಅಂದ್ರೆ ನಂಬಲಿಕ್ಕಿಲ್ಲ ಅಲ್ಲವೇ. ನಂಬಲೇಬೇಕು ಯಾಕಂದ್ರೆ ಅಂಥಾ ಅದೃಷ್ಟ ಇರೋದು ನಮ ರಾಜ್ಯದ ಚಿನ್ನದ ನಾಡು ಕೋಲಾರ ಜಿಲ್ಲೆಯ ಭಕ್ತರಿಗೆ. ದೇವಿ ಮತ್ತು ಭಕ್ತರ ನಡುವೆ ಪೂಜಾರಿಗಿಲ್ಲ ಅವಕಾಶ ಹೌದು, ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ದೇವರು ಹಾಗೂ […]

ಇದು 24/7 ದೇವಸ್ಥಾನ! ಊರಕಾಯೋ ಮಾರಮ್ಮನಿಗೆ ಪೂಜಾರಿಗಳೇ ಬೇಕಿಲ್ಲ, ಭಕ್ತರೇ ಎಲ್ಲಾ..
Follow us
Guru
| Updated By: ಸಾಧು ಶ್ರೀನಾಥ್​

Updated on:Jun 20, 2020 | 8:41 AM

ಮಾಲೂರು: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಗಾದೆ ಮಾತಿದೆ. ಇದರರ್ಥ ದೇವರನ್ನಷ್ಟೇ ಒಲಿಸಿಕೊಂಡರೆ ಸಾಲದು, ದೇವರು ಕೊಟ್ಟ ವರ ಸಿಗಬೇಕಾದರೆ ಪೂಜಾರಿಯನ್ನೂ ಒಲಿಸಿಕೊಳ್ಳಬೇಕು ಅಂತಾ. ಆದ್ರೆ ಅಂಥಾ ಅವಶ್ಯತೆಯೇ ಇಲ್ಲದ ಅದೃಷ್ಟವಂತರೂ ಇದ್ದಾರೆ ಅಂದ್ರೆ ನಂಬಲಿಕ್ಕಿಲ್ಲ ಅಲ್ಲವೇ. ನಂಬಲೇಬೇಕು ಯಾಕಂದ್ರೆ ಅಂಥಾ ಅದೃಷ್ಟ ಇರೋದು ನಮ ರಾಜ್ಯದ ಚಿನ್ನದ ನಾಡು ಕೋಲಾರ ಜಿಲ್ಲೆಯ ಭಕ್ತರಿಗೆ.

ದೇವಿ ಮತ್ತು ಭಕ್ತರ ನಡುವೆ ಪೂಜಾರಿಗಿಲ್ಲ ಅವಕಾಶ ಹೌದು, ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ದೇವರು ಹಾಗೂ ಭಕ್ತರ ಮಧ್ಯೆ ಪೂಜಾರಿಯೇ ಇಲ್ಲಾ. ದೇವಾಲಯಕ್ಕೆ ಬಾಗಿಲು ಇಲ್ಲಾ, ಅರ್ಚನೆಯೂ ಇಲ್ಲಾ. ಅಭಿಷೇಕವೂ ಇಲ್ಲಾ. ಆ ದೇವಿಗೆ ಅಲ್ಲಿಗೆ ಬರುವ ಭಕ್ತರೇ ಪೂಜಾರಿಗಳು. ಅವರ ಕೋರಿಕೆಯೇ ಮಂತ್ರ. ಬೇಡಿಕೆಗಳೇ ಅರ್ಚನೆ. ಯಾಕಂದ್ರೆ ಇದೊಂದು ವಿಭಿನ್ನ ಹಾಗೂ ವಿಶಿಷ್ಟ ದೇವಾಲಯ.

ಊರ ಮಧ್ಯದಲ್ಲಿರುವ ಈ ಬೃಹತ್​ ದೇವಾಲಯದಲ್ಲಿ ಭಕ್ತರೆ ದೇವರ ಮುಂದೆ ಸಾಲು ಗಟ್ಟಿ ನಿಂತು ತಾವೇ ಪೂಜೆ ಮಾಡುರೆ. ಕೈಮುಗಿದು ಕುಳಿತು ತಮ್ಮ ಕಷ್ಟಗಳನ್ನು ದೇವಿಗೆ ಹೇಳಿಕೊಳ್ಳುತ್ತಾರೆ. ಇಂಥ ದೃಶ್ಯಗಳು ಸಿಗೋ ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ, ಇದೊಂದು ನಿಜಕ್ಕೂ ವಿಭಿನ್ನ, ವಿಶಿಷ್ಟ ಹಾಗೂ ಅಪರೂಪದ ದೇವಾಲಯ.

ದೇವಾಲಯಕ್ಕೆ ಬಾಗಿಲೇ ಇಲ್ಲಾ, 24 ಗಂಟೆಯೂ ದರುಶನ ಸಾಮಾನ್ಯವಾಗಿ ಎಲ್ಲಾ ದೇವಾಲಯಕ್ಕಿರುವಂತೆ ಈ ಮಾಲೂರು ಮಾರಮ್ಮ ದೇವಾಲಯಕ್ಕೆ ಬಾಗಿಲೂ ಇಲ್ಲಾ, ಪೂಜಾರಿಯೂ ಇಲ್ಲಾ. ಇಲ್ಲಿಗೆ ಬರುವ ಭಕ್ತರೇ ಪೂಜಾರಿಗಳು. ಭಕ್ತರೇ ಈ ದೇವರನ್ನು ಮುಟ್ಟಿ ನಮಸ್ಕಾರ ಮಾಡಿಕೊಂಡು ತಮಗಿಷ್ಟ ಬಂದ ರೀತಿಯಲ್ಲಿ ಪೂಜೆ ಸಲ್ಲಿಸಿ, ತಮ್ಮಿಷ್ಟಾರ್ಥಗಳನ್ನು ಈಡೇರಿಸೆಂದು ತಾಯಿ ಮಾರಮ್ಮನಲ್ಲಿ ಬೇಡಿಕೊಳ್ಳುತ್ತಾರೆ.

ಈ ದೇವಾಲಯದ ಮತ್ತೊಂದು ವಿಶೇಷ ಅಂದ್ರೆ ಈ ದೇವಾಲಯದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಪೂಜೆ ನಡೆಯುತ್ತಲೇ ಇರುತ್ತದೆ. ಒಬ್ಬರಲ್ಲ ಒಬ್ಬ ಭಕ್ತರು ದಿನದ ಎಲ್ಲಾ ಸಮಯದಲ್ಲೂ ಬಂದು ದೇವಿಗೆ ಪೂಜೆ ಸಲ್ಲಿಸಿ ಹೋಗುತ್ತಲೇ ಇರುತ್ತಾರೆ. ಈ ಮೂಲಕ ಮಾಲೂರು ಮಾರಮ್ಮ ಶಕ್ತಿಶಾಲಿ ಹಾಗೂ ಜನರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿಯಾಗಿದ್ದಾಳೆ.

ಜನರು ಆಸ್ಪತ್ರೆಗೆ ಹೋಗೋ ಮೊದಲು ಈ ದೇವಾಲಯಕ್ಕೆ ಬರ್ತಾರೆ! ಇನ್ನು ಮಾಲೂರಿನ ಜನರು ಮಕ್ಕಳಿಗೆ ಜ್ವರ ಬಂದ್ರೆ ಮೊದಲು ಮಾರಮ್ಮ ದೇವಾಲಯಕ್ಕೆ ಬರ್ತಾರೆಯೇ ವಿನಃ ಆಸ್ಪತ್ರೆಗೆ ಹೋಗಲ್ವಂತೆ. ಅಷ್ಟರ ಮಟ್ಟಿಗೆ ಈ ಮಾರಮ್ಮನ ಮೇಲೆ ಜನಕ್ಕೆ ನಂಬಿಕೆ. ಮನೆಯಲ್ಲೇ ಆಗಲಿ ಊರಲ್ಲೇ ಆಗಲಿ, ಏನಾದ್ರು ಕೆಲಸ ಮಾಡಬೇಕಂದ್ರೆ ಮೊದಲು ಈ ಮಾರಮ್ಮನಿಗೆ ಪೂಜೆ ಸಲ್ಲಿಸಿ ನಂತರ ತಮ್ಮ ಕೆಲಸ ಆರಂಭಿಸೋದು ಮಾಲೂರು ಜನರ ವಾಡಿಕೆ.

ಮಾಲೂರು ಮಾರಮ್ಮನ ದೇವಸ್ಥಾನಕ್ಕಿದೆ ನೂರಾರು ವರ್ಷ ಇತಿಹಾಸ ಈ ಮಾರಮ್ಮನಿಗೆ ನೂರಾರು ವರ್ಷಗಳ ಇತಿಹಾಸ ಇದೆ. ಸುಮಾರು ವರ್ಷಗಳ ಹಿಂದೆ ಮಾಲೂರಿನ ಇರ್ದೆರಾಮ್​ಸಿಂಗ್​ ಎಂಬುವರಿಗೆ ಮಾರಮ್ಮ ದೇವಿ ಕನಸಲ್ಲಿ ಬಂದಿದ್ದಳಂತೆ. ಹಾಗೇ ಕನಸಲ್ಲಿ ಬಂದ ಮಾರಮ್ಮ ತನ್ನ ಎರಡು ವಿಗ್ರಹಗಳು ಊರ ಕಲ್ಯಾಣಿಯಲ್ಲಿವೆ. ಅವನ್ನು ತೆಗೆದು ದೇವಾಲಯ ನಿರ್ಮಾಣ ಮಾಡುವಂತೆ ಹೇಳಿದ್ದಳಂತೆ. ಆ ಪ್ರಕಾರ ಕಲ್ಯಾಣಿಯಲ್ಲಿ ಸಿಕ್ಕ ಮಾರಮ್ಮ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ.

ಸರ್ವಜನಾಂಗದ ಭಕ್ತರ ತಾಯಿ ಮಾರಮ್ಮ ಎಲ್ಲಾ ಜನಾಂಗದ ಮತ್ತು ಸಮುದಾಯದ ಸಾವಿರಾರು ಜನರು ನಿತ್ಯ ಬಂದು ಇಲ್ಲಿ ಪೂಜೆ ಸಲ್ಲಿಸೋದು ದೇವಾಲಯದ ವಿಶೇಷ. ಹಾಗೇನೇ ಭಕ್ತರ ಇಷ್ಟಗಳನ್ನು ಈಡೇರಿಸುವ ಮೂಲಕ ಮಾಲೂರು ಪಟ್ಟಣದ ಜನರು ಆರಾಧ್ಯ ವೈವವಾಗಿರುವ ಮಾರಮ್ಮ ದೇವಿಯ ಶಕ್ತಿ ಅಪಾರ. ಹೀಗಾಗಿಯೇ ದೇವಾಲಯ ನಿರ್ವಹಣಾ ಕಮಿಟಿಯಲ್ಲಿ ಸುಮಾರು ಕೋಟ್ಯಾಂತರ ರೂಪಾಯಿ ಹಣ ಸಂಗ್ರಹವಾಗಿದೆ. ಆದ್ರೆ ದೇವರಿಗೆ ತಕ್ಕ ಭಕ್ತರಂತೆ ಕಮಿಟಿಯೂ ಕೂಡಾ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿರೋದು ಕೂಡಾ ವಿಶೇಷ -ರಾಜೇಂದ್ರ ಸಿಂಹ

Published On - 8:36 am, Sat, 20 June 20

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?