ಬೆಂಗಳೂರು ಸ್ತಬ್ಧ: ಆಟೋ, ಟ್ಯಾಕ್ಸಿಗಳು ರಸ್ತೆಗೆ ಇಳಿಯಲೇ ಇಲ್ಲ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದಲ್ಲಿ ಕ್ಷಣ ಕ್ಷಣಕ್ಕೂ ಹೋರಾಟ ಕಾವೇರುತ್ತಿದೆ. ನಗರದ ವಿವಿಧೆಡೆ ರೈತಪರ ಹೋರಾಟಗಾರರು ಜಮಾಯಿಸುತ್ತಿದ್ದಾರೆ. ಮೈಸೂರು ಬ್ಯಾಂಕ್ ಟೌನ್ಹಾಲ್ ಬಳಿ ಪ್ರತಿಭಟನಾಕಾರರು ಸೇರುತ್ತಿದ್ದಾರೆ. ಅನ್ನದಾತರ ಕಿಚ್ಚಿಗೆ ರಾಜಧಾನಿ ಬೆಂಗಳೂರು ಸ್ತಬ್ಧವಾಗುತ್ತಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಪ್ರಮುಖ ಜಂಕ್ಷನ್ಗಳಲ್ಲಿ ರೈತರಿಂದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ಗಳು ಓಡಾಡ್ತಿದ್ರೂ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಸಂಚಾರ ನಡೆಸುತ್ತಿವೆ. […]

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದಲ್ಲಿ ಕ್ಷಣ ಕ್ಷಣಕ್ಕೂ ಹೋರಾಟ ಕಾವೇರುತ್ತಿದೆ. ನಗರದ ವಿವಿಧೆಡೆ ರೈತಪರ ಹೋರಾಟಗಾರರು ಜಮಾಯಿಸುತ್ತಿದ್ದಾರೆ. ಮೈಸೂರು ಬ್ಯಾಂಕ್ ಟೌನ್ಹಾಲ್ ಬಳಿ ಪ್ರತಿಭಟನಾಕಾರರು ಸೇರುತ್ತಿದ್ದಾರೆ. ಅನ್ನದಾತರ ಕಿಚ್ಚಿಗೆ ರಾಜಧಾನಿ ಬೆಂಗಳೂರು ಸ್ತಬ್ಧವಾಗುತ್ತಿದೆ.
ಬೆಂಗಳೂರಿನ ಪ್ರಮುಖ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಪ್ರಮುಖ ಜಂಕ್ಷನ್ಗಳಲ್ಲಿ ರೈತರಿಂದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ಗಳು ಓಡಾಡ್ತಿದ್ರೂ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಸಂಚಾರ ನಡೆಸುತ್ತಿವೆ. ಬೆಂಗಳೂರಲ್ಲಿ ಆಟೋ, ಟ್ಯಾಕ್ಸಿಗಳಂತೋ ಬೀದಿಗೆ ಇಳಿಯಲೇ ಇಲ್ಲ. ಹೋಟೆಲ್ಗಳು ಓಪನ್ ಇದ್ರೂ ಗ್ರಾಹಕರಿಲ್ಲದೆ ಬಿಕೋ ಅಂತಿವೆ.
Published On - 8:58 am, Mon, 28 September 20