ಇದೇನಾ ಕಟ್ಟುನಿಟ್ಟಿನ ಗೈಡ್​ಲೈನ್ಸ್​? ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕಾಲೇಜುಗಳ ನಿರ್ಲಕ್ಷ್ಯದ ಆಟ

|

Updated on: Jun 18, 2020 | 3:06 PM

ಮಂಗಳೂರು: ಕೊರೊನಾ ಮಹಾಮಾರಿಯಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯು ಪರೀಕ್ಷೆ ಇಂದು ನಡೆಯಲಿದೆ. ಇದಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿ ಭರ್ಜರಿ ತಯಾರಿ ನಡೆದಿದೆ. ಕಾಲೇಜುಗಳಿಗೆ ಕೆಮಿಕಲ್ ಸಿಂಪಡಣೆ, ಸಾಮಾಜಿಕ ಅಂತರ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಮಂಗಳೂರಿನ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಪಿಯುಸಿ ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರ ಮರೆತಿದ್ದಾರೆ. ಗುಂಪು ಗುಂಪಾಗಿ ನೂರಾರು ವಿದ್ಯಾರ್ಥಿಗಳು ನಿಂತು ಮಾತನಾಡುತ್ತಿದ್ದಾರೆ. ಕೇರಳ ಗಡಿ ಭಾಗ ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಾಮಾಜಿಕ ಅಂತರವೇ ಇಲ್ಲ. ಪರೀಕ್ಷೆ […]

ಇದೇನಾ ಕಟ್ಟುನಿಟ್ಟಿನ ಗೈಡ್​ಲೈನ್ಸ್​? ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕಾಲೇಜುಗಳ ನಿರ್ಲಕ್ಷ್ಯದ ಆಟ
Follow us on

ಮಂಗಳೂರು: ಕೊರೊನಾ ಮಹಾಮಾರಿಯಿಂದ ಮುಂದೂಡಲಾಗಿದ್ದ ದ್ವಿತೀಯ ಪಿಯು ಪರೀಕ್ಷೆ ಇಂದು ನಡೆಯಲಿದೆ. ಇದಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿ ಭರ್ಜರಿ ತಯಾರಿ ನಡೆದಿದೆ. ಕಾಲೇಜುಗಳಿಗೆ ಕೆಮಿಕಲ್ ಸಿಂಪಡಣೆ, ಸಾಮಾಜಿಕ ಅಂತರ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಮಂಗಳೂರಿನ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ.

ಪಿಯುಸಿ ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರ ಮರೆತಿದ್ದಾರೆ. ಗುಂಪು ಗುಂಪಾಗಿ ನೂರಾರು ವಿದ್ಯಾರ್ಥಿಗಳು ನಿಂತು ಮಾತನಾಡುತ್ತಿದ್ದಾರೆ. ಕೇರಳ ಗಡಿ ಭಾಗ ತಲಪಾಡಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಾಮಾಜಿಕ ಅಂತರವೇ ಇಲ್ಲ. ಪರೀಕ್ಷೆ ಬರೆಯಲು ಆಗಮಿಸಿರೋ ನೂರಾರು ವಿದ್ಯಾರ್ಥಿಗಳಿಗೆ ತಲಪಾಡಿ ಮರಿಯಾಶ್ರಮ ಸಂಸ್ಥೆ ಬಳಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಆಯಾ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಸರ್ಕಾರಿ ಬಸ್ ವ್ಯವಸ್ಥೆ ಇದೆ. ಆದರೆ ಅಲ್ಲಿ ಸಾಮಾಜಿಕ ಅಂತರವನ್ನೇ ಮರೆತು ವಿದ್ಯಾರ್ಥಿಗಳು ಗುಂಪುಗೂಡಿದ್ದರು ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ. ಕೇರಳ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳು, ರಾಜ್ಯಗಳಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದು, ಆತಂಕ ಶುರುವಾಗಿದೆ.

ರಾಜ್ಯಾದ್ಯಂತ ಇಂದು ನಡೆಯುತ್ತಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಕೇಂದ್ರಗಲಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ರಾಜ್ಯದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ. ಶಿಕ್ಷಣ ಇಲಾಖೆ ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳು ಗುಂಪಾಗಿ ನಿಂಲ್ಲುತ್ತಿದ್ದಾರೆ. ಮೈಸೂರು, ಮಂಗಳೂರು, ಯಾದಗಿರಿ, ಹಾಸನ, ಬೆಳಗಾವಿ, ರಾಯಚೂರು, ರಾಮನಗರ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಕೋಲಾರ ಸೇರಿದಂತೆ ರಾಜ್ಯದ ಹಲವೆಡೆ ಸಿಬ್ಬಂದಿ ಬೇಜವಾಬ್ದಾರಿ ವಿರುದ್ಧ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Published On - 9:01 am, Thu, 18 June 20