ಭಾರತದಲ್ಲಿ ರೂಪಾಂತರ ವೈರಸ್ ವಿರುದ್ಧ ಎರಡು ಡೋಸ್ ಲಸಿಕೆ ಮಾತ್ರ ಬಲವಾದ ರಕ್ಷಣೆ ಒದಗಿಸಬಲ್ಲದು: ವರದಿ

ಭಾರತದಲ್ಲಿ ರೂಪಾಂತರ ವೈರಸ್ ವಿರುದ್ಧ ಎರಡು ಡೋಸ್ ಲಸಿಕೆ ಮಾತ್ರ ಬಲವಾದ ರಕ್ಷಣೆ ಒದಗಿಸಬಲ್ಲದು: ವರದಿ
ಕೊವಿಡ್​ ವ್ಯಾಕ್ಸಿನ್

ಆಕ್ಸಫರ್ಡ್- ಆಸ್ಟ್ರಜೆನಿಕಾ ಮತ್ತು ಫೈಜರ್ ಬಯೋಎನ್​ಟೆಕ್ ವ್ಯಾಕ್ಸಿನ್​ಗಳ ಡಾಟಾದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಇವೆರಡು ಲಸಿಕೆಗಳ ಒಂದು ಡೋಸ್ B.1.1.7 ವೈರಸ್ ವಿರುದ್ಧ ಶೇಕಡಾ 51 ರಷ್ಟು ರಕ್ಷಣೆ ಒದಗಿಸಿವೆ ಮತ್ತು ಎರಡು ಡೋಸ್​ಗಳು ಶೇಕಡಾ 87ರಷ್ಟು ರಕ್ಷಣೆ ನೀಡಿವೆ.

Arun Belly

|

May 23, 2021 | 12:21 AM

ಯುನೈಟೆಡ್​ ಕಿಂಗಡಮ್​ ಸರ್ಕಾರ ನಡೆಸಿದ ಸಮೀಕ್ಷೆಯೊಂದರ ಆಧಾರದ ಮೇಲೆ ಭಾರತದ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾದ ಕೊರೊನಾದ ರೂಪಾಂತರಿ ವೈರಸ್ ವಿರುದ್ಧ ರಕ್ಷಣೆ ಸಿಗಬೇಕಾದರೆ ಕೊವಿಡ್​ ಲಸಿಕೆಯ ಎರಡು ಡೋಸ್​ಗಳನ್ನು ತೆಗೆದುಕೊಳ್ಳಲೇ ಬೇಕು. ಬಿ.1.617.2 ವೈರಸ್ ವಿರುದ್ಧ ಕೊವಿಡ್ ಲಸಿಕೆ ಪರಿಣಾಮಕಾರಿಯಾಗಬಲ್ಲದೆ ಎನ್ನುವ ಆತಂಕ ವಿಶ್ವದಾದ್ಯಂತ ಆರೋಗ್ಯ ತಜ್ಞರನ್ನು ಕಾಡುತ್ತಿದೆ. ಬ್ರಿಟನ್​​ನಲ್ಲಿ ಬಿ.1.1.7 ರೂಪಾಂತರಿ ವೈರಸ್ ನಂತರ ಇದೇ ಹೆಚ್ಚು ಆತಂಕವನ್ನು ಸೃಷ್ಟಿಸಿದೆ. ಈ ದೇಶದಲ್ಲಿ ಮೇ 12 ರವರೆಗೆ ಬಿ.1.617.2 ವೈರಸ್​ನ 3,424 ಪ್ರಕರಣಗಳು ವರದಿಯಾಗಿವೆ

ಶುಕ್ರವಾರದಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಸರ್ಕಾರದ ನ್ಯೂ ಅಂಡ್ ಎಮರ್ಜಿಂಗ್, ವೈರಸ್ ಥ್ರೆಟ್ಸ್ ಅಡ್ವೈಸರಿ ಗ್ರೂಪ್​ಗೆ (ಎನ್​ಇಆರ್​ವಿಟಿಎಜಿ) ನೀಡಿರುವ ಸಲಹೆ ಅನ್ವಯ ಬಿ.1.617.2 ರೂಪಾಂತರಿ ವೈರಸ್ ಸೋಂಕಿಗೆ ಎರಡು ಡೋಸ್ ಲಸಿಕೆ ನೀಡಿದರೆ ಮಾತ್ರ ಅದು ಶೇಕಡಾ 81ರಷ್ಟ್ಟು ರಕ್ಷಣೆ ಒದಗಿಸುತ್ತದೆ. ಕೋವಿಡ್ ಲಸಿಕೆಯ ಒಂದು ಡೋಸ್ ಕೇವಲ ಶೇ 33ರಷ್ಟು ರಕ್ಷಣ ಮಾತ್ರ ಒದಗಿಸಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ

ಆಕ್ಸಫರ್ಡ್- ಆಸ್ಟ್ರಜೆನಿಕಾ ಮತ್ತು ಫೈಜರ್ ಬಯೋಎನ್​ಟೆಕ್ ವ್ಯಾಕ್ಸಿನ್​ಗಳ ಡಾಟಾದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಇವೆರಡು ಲಸಿಕೆಗಳ ಒಂದು ಡೋಸ್ B.1.1.7 ವೈರಸ್ ವಿರುದ್ಧ ಶೇಕಡಾ 51 ರಷ್ಟು ರಕ್ಷಣೆ ಒದಗಿಸಿವೆ ಮತ್ತು ಎರಡು ಡೋಸ್​ಗಳು ಶೇಕಡಾ 87ರಷ್ಟು ರಕ್ಷಣೆ ನೀಡಿವೆ. ಅದರರ್ಥ ಬಿ.1.617.2 ವಿರುದ್ಧ ಕೊವಿಡ್​ ಲಸಿಕೆಯ ಒಂದು ಡೋಸ್ ಯುಕೆಯಲ್ಲಿ ಮೊದಲು ಪತ್ತೆಯಾದ ರೂಪಾಂತರಿ ವಿರುದ್ಧ ಒದಗಿಸುವ ರಕ್ಷಣೆಗೆ ಹೋಲಿಸಿದರೆ ಶೇಕಡಾ 35 ಕಡಿಮೆ ರಕ್ಷಣೆಯನ್ನು ನೀಡುತ್ತದೆ.

ಹೊಸ ವಿಶ್ಲೇಷಣೆಯನ್ನು ಗುರುವಾರದಂದು ಉಲ್ಲೇಖಿಸಿದ ಪಹೆಚ್​​ಇ, ಆಕ್ಸಫರ್ಡ್-ಆಸ್ಟ್ರಜೆನಿಕಾಸ ಎರಡು ಡೋಸ್​ಗಳು ರೋಗಲಕ್ಷಣದ ಕಾಯಿಲೆ ವಿರುದ್ಧ ಶೇಕಡಾ 85-90ರಷ್ಟು ರಕ್ಷಣೆ ಒದಗಿಸುತ್ತವೆ ಎಂದು ಹೇಳಿತ್ತು. ಬ್ರಿಟನ್ನಿನ ಆರೋಗ್ಯ ಕಾರ್ಯದರ್ಶಿ ಮ್ಯಾಟ್​ ಹನೋಕ್ ಅವರು, ವ್ಯಾಕ್ಸಿನ್​ಗಳು ಜೀವವನ್ನು ಉಳಿಸುವುದರ ಜೊತೆಗೆ ಜನರಿಗೆ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆಯುತ್ತವೆ ಎಂದು ಹೇಳಿದರು. ಆದರೆ ಯುಕೆ ಆರೋಗ್ಯ ಏಜನ್ಸಿಯು ಬಿ.1.617.2 ರೂಪಾಂತರಿ ವೈರಸ್ ವಿರುದ್ಧ ವ್ಯಾಕ್ಸಿನ್ ಎಷ್ಟು ಪರಣಾಮಕಾರಿಯಾಗಿದೆ ಎನ್ನುವುದನ್ನು ಹೇಳಿಲ್ಲ,

‘ಪಬ್ಲಿಕ್ ಹೆಲ್ತ್ ಇಂಗ್ಲೆಂಡ್​ನ ವಿಜ್ಞಾನಿಗಳು ಬಿ.1.617.2 ರೂಪಾಂತರಿ ವೈರಸ್ ವಿರುದ್ಧ ಲಸಿಕೆ ಬೀರಲಿರುವ ಪರಿಣಾಮವನ್ನು ಅವಲೋಕಿಸುತ್ತಿದ್ದಾರೆ. ಈ ಅಧ್ಯಯನದ ಫಲಿತಾಂಶವನನ್ನು ನಾವು ಆದಷ್ಟು ಬೇಗ ಪ್ರಕಟಿಸಲಿದ್ದೇವೆ,’ ಎಂದು ಪಿಹೆಚ್​​ಇ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

ಏತನ್ಮಧ್ಯೆ, ಭಾರತದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್​ ಸೇರಿದಂತೆ ಹೊಸ ರೂಪಾಂತರಿ ವೈರಸ್​ಗಳ ಹರಡುವಿಕೆಯು ಕಳವಳಕಾರಿ ಅಂಶವಾಗಿದೆ ಯಾಕೆಂದರೆ, ಇವು ಲಸಿಕೆ ಒದಗಿಸುವ ರೋಗನಿರೋಧಕ ಶಕ್ತಿಯನ್ನು ಮೆಟ್ಟಿ ನಿಲ್ಲಬಹುದಾದ ಚಾನ್ಸ್ ಇದೆ ಎಂದು ಒಬ್ಬ ವೈರಾಲೊಜಿಸ್ಟ್​ ಎಚ್ಚರಿಸಿದ್ದಾರೆ. ಬಿಬಿಸಿ ಬ್ರೇಕ್​ಫಾಸ್ಟ್ ಕಾರ್ಯಕ್ರಮದಲ್ಲಿ ಮಾತಾಡಿದ ಡಾ ಕ್ರಿಸ್ ಸ್ಮಿತ್​ ಅವರು, ‘ಬ್ರಿಟನ್​ನಲ್ಲಿ ಇನ್ನೂ ಬಹಳಷ್ಟು ಜನ ಲಸಿಕೆ ಪಡೆಯಬೇಕಿರುವುರಿಂದ ರೂಪಾಂತರಿ ವೈರಸ್​ಗಳ ಸೋಂಕಿನ ಪ್ರಕರಣಗಳನ್ನು ಹೆಚ್ಚಿಸಬಹುದು,’ ಎಂದರು ರೂಪಾಂತರಿಗಳ ಸಂಖ್ಯೆ ಜಾಸ್ತಿಯಾದಂತೆ ಲಸಿಕೆಗಳ ಪ್ರಭಾವ ಕಡಿಮೆಯಾಗುವುದನ್ನು ನಾವು ಕಾಣಬಹುದು,’ ಎಂದು ಸ್ಮಿತ್ ಹೇಳಿದರು.

ಆಕ್ಸಫರ್ಡ್- ಆಸ್ಟ್ರಜೆನಿಕಾ ಲಸಿಕೆಯ ಭಾರತೀಯ ಆವೃತ್ತಿಯ ಅಗಿರುವ ಕೋವಿಷೀಲ್ಡ್ ಲಸಿಕೆ ಎರಡು ಡೋಸ್​ಗಳ ನಡುವಿನ ಆಂತರವನ್ನು ಭಾರತ ಸರ್ಕಾರವು ಇತ್ತೀಚಿಗೆ 12-16 ವಾರಗಳಿಗೆ ಹೆಚ್ಚಿಸಿದೆ. ನೈಜ್ಯ ಬದುಕಿನ ಪುರಾವೆಗಳ ಆಧಾರದಲ್ಲಿ ಅದರಲ್ಲೂ ವಿಶೇಷವಾಗಿ ಯುಕೆಯಲ್ಲಿ ದೊರೆತಿರುವ ಮಾಹಿತಿಯನ್ವಯ ಕೋವಿಷೀಲ್ಡ್ ಎರಡು ಡೋಸಿನ ಅಂತರವನ್ನು 12-16 ವಾರಗಳಗೆ ಹೆಚ್ಚಿಸುವ ಸಮ್ಮತಿಗೆ ಬರಲಾಯಿತು,’ ಎಂದು ಭಾರತದ ಅರೋಗ್ಯ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ: ಎರಡು ಬೇರೆ ಬೇರೆ ಕೊರೊನಾ ಲಸಿಕೆಗಳನ್ನು ಪಡೆಯುವುದು ಹೆಚ್ಚು ಪರಿಣಾಮಕಾರಿ; ಸ್ಪ್ಯಾನಿಶ್ ಅಧ್ಯಯನದ ಪ್ರಾಥಮಿಕ ವರದಿ

Follow us on

Most Read Stories

Click on your DTH Provider to Add TV9 Kannada