ಚಿಕ್ಕಬಳ್ಳಾಪುರ ಆಸ್ಪತ್ರೆಯ ಅವ್ಯವ್ಯಸ್ಥೆ ಬಗ್ಗೆ ಸಚಿವರ ಬೆಂಬಲಿಗನಿಂದಲೇ ಆರೋಗ್ಯ ಸಚಿವರಿಗೆ ಪತ್ರ

ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ಗಳು ಬಳಕೆ ಮಾಡುತ್ತಿಲ್ಲ. ಹೀಗಾಗಿ ತಾಲೂಕು ಆಸ್ಪತ್ರೆಯ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಅವರ ಬೆಂಬಲಿಗ ಪತ್ರ ಬರೆದಿದ್ದಾರೆ. ಗೌರಿಬಿದನೂರು ತಾಲೂಕು ಆಸ್ಪತ್ರೆಯಲ್ಲಿರುವ ವೆಂಟಿಲೇಟರ್​ಗಳ ಬಳಕೆ ಮಾಡುತ್ತಿಲ್ಲ. ಇದರಿಂದ ಉಸಿರಾಟ ಸಮಸ್ಯೆ ಇರುವ ಕೊರೊನಾ ಸೋಂಕಿತರು ಪರದಾಟ ಪಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಆಸ್ಪತ್ರೆಯ ಅವ್ಯವ್ಯಸ್ಥೆ ಬಗ್ಗೆ ಸಚಿವರ ಬೆಂಬಲಿಗನಿಂದಲೇ ಆರೋಗ್ಯ ಸಚಿವರಿಗೆ ಪತ್ರ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಾಲೂಕು ಆಸ್ಪತ್ರೆ ಅವ್ಯವ್ಯಸ್ಥೆ ಬಗ್ಗೆ ಪತ್ರ
Follow us
sandhya thejappa
|

Updated on: May 22, 2021 | 9:51 AM

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ಚಿಕಿತ್ಸೆ ಬಗ್ಗೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ರಾಜ್ಯದ ಕೆಲ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸೋಂಕಿತರು ಸಾವನ್ನಪ್ಪುತ್ತಿದ್ದರೆ, ಇನ್ನು ಕೆಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಉಪಕರಣಗಳು ಇಲ್ಲದೆ ಮೃತಪಡುತ್ತಿದ್ದಾರೆ. ಅಲ್ಲದೆ ಎಲ್ಲವೂ ಲಭ್ಯವಿದ್ದರೂ ಆಸ್ಪತ್ರೆ ಸಿಬ್ಬಂದಿಯ ಬೇಜಾವಾಬ್ದಾರಿಯಿಂದ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಹಲವು ಆರೋಪಗಳು ಕೇಳಿಬಂದಿದೆ. ಸರ್ಕಾರ ಕೂಡಾ ಈ ಬಗ್ಗೆ ಗಮನ ಹರಿಸುತ್ತಲೇ ಇದೆ. ಆದರೆ ಆರೋಗ್ಯ ಸಚಿವ ತವರೂರಲ್ಲೇ ವೆಂಟಿಲೇಟರ್ ಸಮಸ್ಯೆ ಸದ್ಯ ದೊಡ್ಡ ಮಟ್ಟದಾಗಿ ಕಾಡುತ್ತಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ಗಳು ಬಳಕೆ ಮಾಡುತ್ತಿಲ್ಲ. ಹೀಗಾಗಿ ತಾಲೂಕು ಆಸ್ಪತ್ರೆಯ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಅವರ ಬೆಂಬಲಿಗ ಪತ್ರ ಬರೆದಿದ್ದಾರೆ. ಗೌರಿಬಿದನೂರು ತಾಲೂಕು ಆಸ್ಪತ್ರೆಯಲ್ಲಿರುವ ವೆಂಟಿಲೇಟರ್​ಗಳ ಬಳಕೆ ಮಾಡುತ್ತಿಲ್ಲ. ಇದರಿಂದ ಉಸಿರಾಟ ಸಮಸ್ಯೆ ಇರುವ ಕೊರೊನಾ ಸೋಂಕಿತರು ಪರದಾಟ ಪಡುತ್ತಿದ್ದಾರೆ. ಪಿ.ಎಂ.ಕೇರ್ ಫಂಡ್​ನಿಂದ ಖರೀದಿಸಿರುವ ವೆಂಟಿಲೇಟರ್​ಗಳು ವ್ಯರ್ಥವಾಗಿವೆ ಎಂದು ಸಚಿವರ ಬೆಂಬಲಿಗರಾದ ಬಿ.ಜಿ ವೇಣುಗೋಪಾಲ ರೆಡ್ಡಿ ಪತ್ರ ಬರೆದಿದ್ದಾರೆ.

10 ಆಕ್ಸಿಜನ್ ರೆಗ್ಯುಲೇಟರ್​ಗಳ ದೇಣಿಗೆ ತಾಲೂಕು ಆಸ್ಪತ್ರೆಗೆ ಗೌರಿಬಿದನೂರು ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ 10 ಆಕ್ಸಿಜನ್ ರೆಗ್ಯುಲೇಟರ್​ಗಳ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದ್ದು ಇನ್ಸ್​​ಪೆಕ್ಟರ್​ ಶಶಿಧರ್ ಎಂದು ತಿಳಿದುಬಂದಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ ಗೌರಿಬಿದನೂರು ಪೊಲೀಸ್ ಇನ್ಸ್​​ಪೆಕ್ಟರ್ ನೀಡಿರುವ 10 ಆಕ್ಸಿಜನ್ ರೆಗ್ಯುಲೇಟರ್​ಗಳ ದೇಣಿಗೆಯಿಂದ ಕೊರೊನಾ ಸೋಂಕಿತರಿಗೆ ಅನುಕೂಲವಾಗುತ್ತದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ರೆಗ್ಯುಲೇಟರ್​ಗಳ ಕೊರತೆ ಕಂಡುಬಂದಿತ್ತು. ಹೀಗಾಗಿ ಪೊಲೀಸ್ ಶಶಿಧರ್ ಸಹಾಯ ಮಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ತಡೆಗೆ 4 ದಿನ ಲಾಕ್​ಡೌನ್​ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ 3ನೇ ದಿನ ಸಂಪೂರ್ಣ ಸ್ತಬ್ಧವಾಗಿದೆ. ಕೇವಲ ಹಾಲು ಮಾರಾಟಕ್ಕೆ ಮಾತ್ರ ಅವಕಾಶವಿದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ದಿನಸಿ ತರಕಾರಿ ಸಂತೆ ಮಾರುಕಟ್ಟೆಗಳು ಸೇರಿ ಸಂಪೂರ್ಣ ಬಂದ್ ಆಗಿದ್ದು, ಜನರು ಅನಗತ್ಯವಾಗಿ ಮನೆಯಿಂದ ಆಚೆ ಬರದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಇದನ್ನೂ ಓದಿ

ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ ದಯವಿಟ್ಟು ನಮ್ಮ ತಂದೆಯನ್ನು ಉಳಿಸಿ; ಕಣ್ಣೀರಿಡುತ್ತಾ ವಿಡಿಯೋ ಮಾಡಿದ ಯುವಕ

ಕೊಹ್ಲಿ ನಿನಗೆ ಮಾದರಿಯಾಗಲಿ; ಕೊರೊನಾದಿಂದ ತಾಯಿಯನ್ನು ಕಳೆದುಕೊಂಡ ಪ್ರಿಯಾ ಪುನಿಯಾಗೆ ತಂದೆಯ ಸಾಂತ್ವನ

(minister supporter has written to Dr K Sudhakar about the situation in Chikballapur hospital)