Yoga in Hampi: ಹಂಪಿಯಲ್ಲಿ ಯೋಗ ಮಾಡಿ ಬೆನ್ನು ನೋವು, ಮೈ ಕೈ ನೋವು ಬಂದಿದೆ ಎಂದ ಮಂಜಮ್ಮ ಜೋಗತಿ!

Padmashree manjamma jogati: ಯೋಗದಿಂದ ಬೆನ್ನು ನೋವು ಬಂದಿದೆ. ಆದರೆ ಕಳೆದ ಮೂರು ವರ್ಷದಿಂದ ನಾನು ನಾನಾ ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿರುವೆ. ಹಾಗಾಗಿ ವಾಕಿಂಗ್ ಸಹ ಮಾಡಲು ಆಗುತ್ತಿಲ್ಲ. ಇಂದು ಯೋಗದಲ್ಲಿ ಏಕಾಏಕಿ ಪಾಲ್ಗೊಂಡೆ. ಅದು ಖುಷಿ ಕೊಟ್ತು. ಹಾಗೆಯೇ ಕಷ್ಟನೂ ಆಗ್ತಿದೆ ಈಗ ಎಂದು ಮಂಜಮ್ಮ ಜೋಗತಿ ಹೇಳಿದ್ದಾರೆ.

Yoga in Hampi: ಹಂಪಿಯಲ್ಲಿ ಯೋಗ ಮಾಡಿ ಬೆನ್ನು ನೋವು, ಮೈ ಕೈ ನೋವು ಬಂದಿದೆ ಎಂದ ಮಂಜಮ್ಮ ಜೋಗತಿ!
ಹಂಪಿಯಲ್ಲಿ ಯೋಗ ಮಾಡಿ ಬೆನ್ನು ನೋವು, ಮೈ ಕೈ ಕೀಲು ನೋವು ಬಂದಿದೆ ಎಂದ ಮಂಜಮ್ಮ ಜೋಗತಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 21, 2022 | 7:27 PM

ವಿಜಯನಗರ: ಐತಿಹಾಸಿಕ ಹಂಪಿಯಲ್ಲಿ ಇಂದು ಅಪರೂಪದ ಇತಿಹಾಸವೇ ನಿರ್ಮಾಣವಾಗಿದೆ. ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಸಾರಥ್ಯದಲ್ಲಿ ಸಾವಿರಾರು ಮಂದಿ ವಿಜಯನಗರದ ಹಂಪಿ ಮುಖ್ಯ ರಸ್ತೆಯಲ್ಲಿ (Hampi) ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಮಾಡಿ, ಉಲ್ಲಸಿತರಾಗಿದ್ದಾರೆ. ಆದರೆ ಇದು ಅಭ್ಯಾಸ ಇರುವವರಿಗೆ ಮತ್ತಷ್ಟು ಚೇತೋಹಾರಿ ಸರಿ. ಆದರೆ ಅಭ್ಯಾಸವೇ ಇಲ್ಲದವರು ಯೋಗ ಮಾಡಿದರೆ ಕಷ್ಟ, ಕಸಿವಿಸಿ ಅನುಭವಿಸಬೇಕಾದೀತು. ಈ ಮಧ್ಯೆ ಇಂದು ಹಂಪಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗದಲ್ಲಿ ಮಂಜಮ್ಮ ಪ್ರದಶ್ಮೀ ಪುರಸ್ಕೃತೆ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ (Padmashree Manjamma Jogati) ಸಹ ಯೋಗ ಮಾಡಿದರು. ಸಚಿವ ಜೋಶಿ ಎದುರು ಫುಲ್ ಜೋಷ್ ನಲ್ಲಿ ಯೋಗ ಮಾಡಿದ ಮಂಜಮ್ಮ ಜೋಗತಿ ಅವರು ಆನಂತರ ಯೋಗ ಮಾಡಿ ಬೆನ್ನು ನೋವು ಬಂತೂ.. ಮೈ ಕೈ ಕೀಲು ನೋವು ಬಂದಿದೆ ಎಂದು ಅಲವತ್ತುಕೊಂಡಿದ್ದಾರೆ!

ಯೋಗದಿಂದ ಬೆನ್ನು ನೋವು ಬಂದಿದೆ. ಆದರೆ ಕಳೆದ ಮೂರು ವರ್ಷದಿಂದ ನಾನು ನಾನಾ ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿರುವೆ. ಹಾಗಾಗಿ ವಾಕಿಂಗ್ ಸಹ ಮಾಡಲು ಆಗುತ್ತಿಲ್ಲ. ಇಂದು ಯೋಗದಲ್ಲಿ ಏಕಾಏಕಿ ಪಾಲ್ಗೊಂಡೆ. ಅದು ಖುಷಿ ಕೊಟ್ತು. ಹಾಗೆಯೇ ಕಷ್ಟನೂ ಆಗ್ತಿದೆ ಈಗ ಎಂದು ಮಂಜಮ್ಮ ಜೋಗತಿ ಹೇಳಿದ್ದಾರೆ.

ಇವತ್ತು ಸೀರೆ ಬೇರೆ ಉಟ್ಟುಕೊಂಡು ಬಂದಿದ್ದೇನೆ. ಸೀರೆ ಉಟ್ಟಿದ್ರಿಂದ ಯೋಗ ಮಾಡಲು ಕಷ್ಟ ಆಯ್ತು. ಇನ್ನುಂದೆ ಯೋಗ ಕಲಿಯುವ ಮನಸ್ಸಿದೆ. ಯಾರಾದರೂ ಯೋಗ ಕಲಿಸಿದ್ರೆ ಯೋಗ ಕಲಿಯುತ್ತೇನೆ ಎಂದು ಮಂಜಮ್ಮ ಜೋಗತಿ ತಿಳಿಸಿದ್ದಾರೆ.

ಪ್ರಾಚೀನ ಹಂಪಿಯಲ್ಲಿ ಅವಿಸ್ಮರಣೀಯ ಯೋಗಾಸನ: ಪ್ರಲ್ಹಾದ ಜೋಶಿ, ಸಚಿವ ಆನಂದ ಸಿಂಗ್ ಸೇರಿ ಅನೇಕರು ಭಾಗಿ

ವಿಶ್ವಕ್ಕೇ ಆರೋಗ್ಯದ ಮಹತ್ವ ತಿಳಿಸುವ, ಭಾರತದ ಪ್ರಾಚೀನ ಪರಂಪರೆಯನ್ನು ತಿಳಿಸುವ ವಿಶೇಷ ಯೋಗ ದಿನ ವಿಶ್ವದ ಅತ್ಯಪೂರ್ವವಾಗಿ ಪಾರಂಪರಿಕ ನಗರ, ಹಂಪಿಯಲ್ಲಿ(Yoga in Hampi) ನಡೆಯಿತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಡಿಕೆಗೆ ಸಿರಿ ಧಾನ್ಯ ಸುರಿದು ಯೋಗ ದಿನಕ್ಕೆ ಚಾಲನೆ ನೀಡಿದ್ದಾರೆ. ಈ  ಮೂಲಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಯುನೆಸ್ಕೋ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದ ಹಂಪೆ, ವಿಶ್ವ ಯೋಗ ದಿನಾಚರಣೆ(International Yoga Day 2022) ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದೆ.

ಜೂನ್ 21ರ ವಿಶ್ವ ಯೋಗ ದಿನಾಚರಣೆ ನಿಮಿತ್ತ ದೇಶಾದ್ಯಂತ 75 ಪ್ರಮುಖ ಐತಿಹಾಸಿಕ, ಪಾರಂಪರಿಕ ಪ್ರದೇಶಗಳಲ್ಲಿ ಯೋಗ ದಿನಾಚರಣೆ ವಿಶೇಷವಾಗಿ ನಡೆದಿದ್ದು, ಹಂಪಿಯೂ ಈ ದಾಖಲೆಯಲ್ಲಿ ಸೇರಿಕೊಂಡಿದೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ನಿಮಿತ್ತ ದೇಶದ 75 ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ, ವಿಶ್ವಕ್ಕೆ ಯೋಗದ ಮಹತ್ವವನ್ನು ಹೇಳಿದ ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡಬೇಕು. ಈ ಮೂಲಕ ವಿಶೇಷ ಸಂದೇಶವನ್ನು ರವಾನಿಸಬೇಕು ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿತ್ತು. ಇದಕ್ಕಾಗಿ ಈ ಹಿಂದಿನ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರಮುಖ ಸ್ಥಳಗಳಲ್ಲಿ ಯೋಗ ದಿನವನ್ನು ಆಚರಿಸುವಂತೆ, ಯೋಗ ದಿನಾಚರಣೆ ಮತ್ತು ಯೋಗ ನಡೆಸುವ ಸ್ಥಳಗಳ ಬಗ್ಗೆ ಎಲ್ಲೆಡೆ ಪ್ರಚಾರ ನಡೆಸುವಂತೆ ಕರೆ ದೇಶವಾಸಿಗಳಿಗೆ ನೀಡಿದ್ದರು. ಅದರಂತೆ ವಿಶ್ವಪ್ರಸಿದ್ಧ ಹಂಪೆಯಲ್ಲೂ ಯೋಗ ದಿನ ನಡೆದಿದೆ.

ಬಾಣಸಿಗರ ಕೈ ರುಚಿಗೆ ಮನಸೋತ ಪ್ರಧಾನಿ, ಖುದ್ದು ಬಾಣಸಿಗರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ ಮೋದಿ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Tue, 21 June 22