ಆ ಜೋಡೆತ್ತುಗಳನ್ನು 8 ಲಕ್ಷಕ್ಕೆ ಮಾರಿದ್ದರು, ಮತ್ತೆ 17 ಲಕ್ಷ ಕೊಟ್ಟು ಖರೀದಿಸಿದರು! ಏನಿದರ ವಿಶೇಷ?

ಬಾಗಲಕೋಟೆ: ಒಂದಲ್ಲ ಎರಡಲ್ಲ ಬರೊಬ್ಬರಿ 17 ಲಕ್ಷಕ್ಕೆ ಜೋಡೆತ್ತುಗಳು ಮಾರಾಟವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ‍ ಇಂತಹ ದಾಖಲೆಯ ಅಪರೂಪದ ವ್ಯಾಪಾರ ನಡೆದಿದೆ. ಗ್ರಾಮದ ಸಂಗಪ್ಪ ಮುಗಳಖೋಡ ಎಂಬುವವರ ಜೋಡೆತ್ತುಗಳು 17 ಲಕ್ಷಕ್ಕೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಇದೇ ಮಲ್ಲಪ್ಪ ಬೋರಡ್ಡಿಯವರಿಂದ ಇದೇ ಎತ್ತುಗಳನ್ನು ಸಂಗಪ್ಪ ಎಂಟು ಲಕ್ಷಕ್ಕೆ ಖರೀದಿ ಮಾಡಿದ್ದರು.‌ ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿವೆ. ಆ […]

ಆ ಜೋಡೆತ್ತುಗಳನ್ನು 8 ಲಕ್ಷಕ್ಕೆ ಮಾರಿದ್ದರು, ಮತ್ತೆ 17 ಲಕ್ಷ ಕೊಟ್ಟು ಖರೀದಿಸಿದರು! ಏನಿದರ ವಿಶೇಷ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 11, 2020 | 3:33 PM

ಬಾಗಲಕೋಟೆ: ಒಂದಲ್ಲ ಎರಡಲ್ಲ ಬರೊಬ್ಬರಿ 17 ಲಕ್ಷಕ್ಕೆ ಜೋಡೆತ್ತುಗಳು ಮಾರಾಟವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ‍ ಇಂತಹ ದಾಖಲೆಯ ಅಪರೂಪದ ವ್ಯಾಪಾರ ನಡೆದಿದೆ.

ಗ್ರಾಮದ ಸಂಗಪ್ಪ ಮುಗಳಖೋಡ ಎಂಬುವವರ ಜೋಡೆತ್ತುಗಳು 17 ಲಕ್ಷಕ್ಕೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಇದೇ ಮಲ್ಲಪ್ಪ ಬೋರಡ್ಡಿಯವರಿಂದ ಇದೇ ಎತ್ತುಗಳನ್ನು ಸಂಗಪ್ಪ ಎಂಟು ಲಕ್ಷಕ್ಕೆ ಖರೀದಿ ಮಾಡಿದ್ದರು.‌ ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿವೆ.

ಆ ರೀತಿ ಗೆದ್ದ ಮೊತ್ತವೇ ಒಟ್ಟು ಒಂಬತ್ತು ಲಕ್ಷವಾಗಿದೆ. ಈಗ ಮತ್ತೆ ಹಳೆ ಮಾಲೀಕ ತನ್ನ ಜೋಡೆತ್ತುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾದ ಎತ್ತುಗಳನ್ನು ನೋಡೋದಕ್ಕೆ ಜನರು ಜಮಾಯಿಸುತ್ತಿದ್ದಾರೆ. ಎತ್ತುಗಳು ಸದ್ಯ ಸೆಲೆಬ್ರಿಟಿ ವರ್ಚಸ್ಸು ಪಡೆದುಕೊಂಡಿವೆ. -ರವಿ ಮೂಕಿ

Published On - 3:20 pm, Sun, 11 October 20