Pawri Ho Rai Hai: ಟಾಪ್ ಬ್ರಾಂಡ್​ಗಳ ಜಾಹೀರಾತುಗಳಿಗೆ ಬಳಕೆಯಾಯ್ತು ‘ಪೌರಿ ಹೋ ರಹೀ ಹೈ’ ಸಾಲು

Social Media Trend: ಉತ್ತರ ಪ್ರದೇಶದ ಪೊಲೀಸರು ಯಾರಾದರೂ ತಡರಾತ್ರಿ ಪಾರ್ಟಿ ಮಾಡಿ ತೊಂದರೆ ನೀಡುತ್ತಿದ್ದರೆ 112 ಎಂಬ ಸಂಖ್ಯೆಗೆ ಕರೆ ಮಾಡಿ ಎಂದು ಹೇಳಲು ಕೂಡಾ pawrihoraihai ಸಾಲನ್ನು ಬಳಸಿ ಟ್ವೀಟ್ ಮಾಡಿದ್ದಾರೆ.

Pawri Ho Rai Hai: ಟಾಪ್ ಬ್ರಾಂಡ್​ಗಳ ಜಾಹೀರಾತುಗಳಿಗೆ ಬಳಕೆಯಾಯ್ತು ‘ಪೌರಿ ಹೋ ರಹೀ ಹೈ’ ಸಾಲು
ದನಾನೀರ್ ಮೊಬೀನ್
Edited By:

Updated on: Feb 16, 2021 | 5:29 PM

ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ‘ಪೌರಿ ಹೋ ರಹೀ ಹೈ’ (pawri ho rai hai) ಎಂಬ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇನ್​ಸ್ಟಾಗ್ರಾಂನಲ್ಲಿ 6.14 ಲಕ್ಷ ಫಾಲೋಯರ್​ಗಳನ್ನು ಹೊಂದಿರುವ ಪಾಕಿಸ್ತಾನದ 19ರ ಹರೆಯದ ದನಾನೀರ್ ಮೊಬೀನ್ ಫೆಬ್ರವರಿ 6ರಂದು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ತನ್ನ ಕಾರನ್ನು ತೋರಿಸಿ ‘ಯೇ ಹಮಾರಿ ಕಾರ್ ಹೈ, ಯೇ ಹಮ್ ಹೈ, ಔರ್ ಯೇ ಹಮಾರಿ ಪೌರಿ ಹೋ ರಹೀ ಹೈ’ (ಇದು ನನ್ನ ಕಾರು, ಇದು ನಾನು, ಇಲ್ಲಿ ನಮ್ಮ ಪಾರ್ಟಿ ನಡೆಯುತ್ತಿದೆ) ಎಂದು ಹೇಳಿದ್ದರು.

ಪಾರ್ಟಿ ಎಂದು ಹೇಳುವ ಬದಲು ‘ಪೌರಿ’ ಎಂದು ಮೊಬೀನ್ ಉಚ್ಚರಿಸಿದ್ದರಿಂದ ಈ ವಿಡಿಯೊ ವೈರಲ್ ಆಗಿತ್ತು. ಇದೇ ಪದವನ್ನು ಬಳಸಿ ನೆಟ್ಟಿಗರು ಮೀಮ್, ಜೋಕ್​ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು pawri ho rai hai ಎಂಬ ಹ್ಯಾಷ್​ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.


ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿರುವ, ತಮಾಷೆಯ ಪ್ರಸಂಗಗಳಿಗೆ ಸಂಗೀತ ನೀಡಿ ಹಾಡು ಸಂಯೋಜನೆ ಮಾಡುವ ಯಶ್ ರಾಜ್ ಮುಖಾಟೆ ‘ಪೌರಿ ಹೋ ರಹೀ ಹೈ’ ಎಂಬ ಸಾಲನ್ನೂ ಹಾಡಾಗಿ ಪರಿವರ್ತಿಸಿದ್ದಾರೆ.

ಇತ್ತ ಪ್ರಮುಖ ಬ್ರಾಂಡ್​ಗಳು ಕೂಡಾ #pawrihoraihai ಎಂಬ ಹ್ಯಾಷ್​ಟ್ಯಾಗ್ ಬಳಸಿ ತಮ್ಮ ಬ್ರಾಂಡ್ ಪ್ರಚಾರವನ್ನು ಮಾಡಿವೆ.


ಉತ್ತರ ಪ್ರದೇಶದ ಪೊಲೀಸರು ಯಾರಾದರೂ ತಡರಾತ್ರಿ ಪಾರ್ಟಿ ಮಾಡಿ ತೊಂದರೆ ನೀಡುತ್ತಿದ್ದರೆ 112 ಎಂಬ ಸಂಖ್ಯೆಗೆ ಕರೆ ಮಾಡಿ ಎಂದು ಹೇಳಲು ಕೂಡಾ pawrihoraihai ಸಾಲನ್ನು ಬಳಸಿ ಟ್ವೀಟ್ ಮಾಡಿದ್ದಾರೆ.

 

ಕೇಂದ್ರ ಸಚಿವೆ ಹಾಗೂ ಮಾಜಿ ಕಿರುತೆರೆ ನಟಿ ಸ್ಮೃತಿ ಇರಾನಿ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಶೆಹನಾಜ್ ಗಿಲ್ ಅವರ ವೈರಲ್ ವಿಡಿಯೊ ತೌದಾ ಕುತ್ತಾ ಟೋಮಿ ಎಂಬ ಮಾತಿನ ರ‍್ಯಾಪ್ ಸಾಂಗ್ ವಿಡಿಯೊವನ್ನು ಶೇರ್ ಮಾಡಿ ನನಗೆ ಪೌರಿ ಹೋ ರಹೀ ಹೈ ಗಿಂತ ಅದೇ ಇಷ್ಟ ಎಂದಿದ್ದಾರೆ.