ಮುಂಬೈ: ಬಹಳ ಸಮಯದ ನಂತರ ಜನಪ್ರಿಯ ನಟ ಪವರ್ ಸ್ಟಾರ್ ಪವನ್ ಕಲ್ಯಾಟ್ ‘ವಕೀಲ್ ಸಾಬ್’ ಚಿತ್ರದೊಂದಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಪೋಸ್ಟರ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು, ಪವರ್ ಸ್ಟಾರ್ ಸಿನಿಮಾ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ. ಹೆಸರಿಗೆ ತಕ್ಕಂತೆ ಪೋಸ್ಟರ್ನಲ್ಲಿ ವಕೀಲರ ಕೋಟ್ ಧರಿಸಿ ಪೋಸ್ ಕೊಟ್ಟಿರುವ ಪವನ್ ಕಲ್ಯಾಣ್, ಈ ಚಿತ್ರವು ನ್ಯಾಯಲಯದಲ್ಲಿ ನಡೆಯುವ ವಾದ-ವಿವಾದನಗಳನ್ನು ಆಧರಿಸಿದ ಕಥೆ ಹೊಂದಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇಂದು ಪವನ್ ಶೂಟಿಂಗ್ ಸೆಟ್ನಲ್ಲಿ ಕಾಣಿಸಿಕೊಂಡಿದ್ದು, ಹೊಡೆದಾಟದ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ದಿಲ್ ರಾಜು ಹಾಗೂ ಬೋನಿ ಕಪೂರ್ ಸೇರಿ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಶ್ರುತಿ ಹಾಸನ್ ನಾಯಕಿ.
ಬಾಲಿವುಡ್ ವಿಡಿಯೋ ಸಾಂಗ್ನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ
Published On - 5:52 pm, Wed, 16 December 20