‘ನನಗೆ ಕೆಲಸ ಇಲ್ಲ, ಜೇಬಲ್ಲಿ ಕಾಸಿಲ್ಲ.. ಇನ್ನ ಮಾಸ್ಕ್ ಕೊಳ್ಳೋಕೆ ಎಲ್ಲಿರುತ್ತೆ ದುಡ್ಡು!?’

ಬೆಂಗಳೂರು: ನಗರದಲ್ಲಿ ಮಾಸ್ಕ್​ ಧರಿಸದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮಾರ್ಷಲ್​ಗಳು ಕಾರ್ಯಾಚರಣೆಗೆ ಮುಂದಾದರು. ಈ ನಡುವೆ ಸರ್​ ನನ್ನ ಹತ್ತಿರ ಕಾಸಿಲ್ಲ. ಹಾಗಾಗಿ ಮಾಸ್ಕ್​ ಕೊಳ್ಳೋಕೆ ಆಗ್ಲಿಲ್ಲ. ಬೇಕಿದ್ರೆ ನನ್ ಬ್ಯಾಗ್​ ಚೆಕ್​ ಮಾಡಿ ಅಂತಾ ಯುವಕನೊಬ್ಬ ಮಾರ್ಷಲ್​ಗಳಿಗೆ ಹೇಳಿದ್ದಾನೆ. ಮಾರ್ಷಲ್​ಗಳು ಪ್ರಶ್ನಿಸುತ್ತಿದ್ದಂತೆ ಜೇಬಿನಲ್ಲಿ ‌ಕೈಹಾಕಿ‌ ಮಾಸ್ಕ್​ಗಾಗಿ ಹುಡುಕಾಟ ನಡೆಸಿದನು. ಬಳಿಕ ಮಾಸ್ಕ್ ಹಾಕಿಲ್ಲ, ಫೈನ್ ಕಟ್ಟಿ ಅಂತಿದ್ದ ಹಾಗೆ ಗಳಗಳನೆ ಅಳಲು ಆರಂಭಿಸಿದ. ದುಡ್ಡಿಲ್ಲ ಸರ್ ಅಂತಾ ಯುವಕ […]

‘ನನಗೆ ಕೆಲಸ ಇಲ್ಲ, ಜೇಬಲ್ಲಿ ಕಾಸಿಲ್ಲ.. ಇನ್ನ ಮಾಸ್ಕ್ ಕೊಳ್ಳೋಕೆ ಎಲ್ಲಿರುತ್ತೆ ದುಡ್ಡು!?’
Updated By: ಸಾಧು ಶ್ರೀನಾಥ್​

Updated on: Oct 06, 2020 | 1:57 PM

ಬೆಂಗಳೂರು: ನಗರದಲ್ಲಿ ಮಾಸ್ಕ್​ ಧರಿಸದವರಿಗೆ ಬಿಬಿಎಂಪಿ ಮಾರ್ಷಲ್​ಗಳು ದಂಡ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮಾರ್ಷಲ್​ಗಳು ಕಾರ್ಯಾಚರಣೆಗೆ ಮುಂದಾದರು.

ಈ ನಡುವೆ ಸರ್​ ನನ್ನ ಹತ್ತಿರ ಕಾಸಿಲ್ಲ. ಹಾಗಾಗಿ ಮಾಸ್ಕ್​ ಕೊಳ್ಳೋಕೆ ಆಗ್ಲಿಲ್ಲ. ಬೇಕಿದ್ರೆ ನನ್ ಬ್ಯಾಗ್​ ಚೆಕ್​ ಮಾಡಿ ಅಂತಾ ಯುವಕನೊಬ್ಬ ಮಾರ್ಷಲ್​ಗಳಿಗೆ ಹೇಳಿದ್ದಾನೆ. ಮಾರ್ಷಲ್​ಗಳು ಪ್ರಶ್ನಿಸುತ್ತಿದ್ದಂತೆ ಜೇಬಿನಲ್ಲಿ ‌ಕೈಹಾಕಿ‌ ಮಾಸ್ಕ್​ಗಾಗಿ ಹುಡುಕಾಟ ನಡೆಸಿದನು.

ಬಳಿಕ ಮಾಸ್ಕ್ ಹಾಕಿಲ್ಲ, ಫೈನ್ ಕಟ್ಟಿ ಅಂತಿದ್ದ ಹಾಗೆ ಗಳಗಳನೆ ಅಳಲು ಆರಂಭಿಸಿದ. ದುಡ್ಡಿಲ್ಲ ಸರ್ ಅಂತಾ ಯುವಕ ಬಿಕ್ಕಿ ಬಿಕ್ಕಿ ಅಳೋಕೆ ಶುರುಮಾಡಿದ. ಆತನ ವರ್ತನೆಗೆ ಒಂದು ಕ್ಷಣ ಮಾರ್ಷಲ್​ಗಳೇ ಶಾಕ್​ ಆಗಿಬಿಟ್ಟರು.

‘ಹೆಲ್ಮೆಟ್ ಕೊಳ್ಳೋಕೆ ಕಾಸಿಲ್ಲ’
ಇತ್ತ ಮತ್ತೊಬ್ಬ ವ್ಯಕ್ತಿ ನನಗೆ ಕೆಲಸ ಇಲ್ಲ. ನನ್ನ ಹತ್ತಿರ ಹೆಲ್ಮೆಟ್​ ಕೊಳ್ಳೋಕೂ ದುಡ್ಡಿಲ್ಲ. ಇನ್ನು ಮಾಸ್ಕ್​ಗೆ ದಂಡ ಎಲ್ಲಿಂದ ಕಟ್ಟೋದು. ಕೆಲಸನೇ ಇಲ್ಲ, ಸಾವಿರ ರೂಪಾಯಿ ಕೊಡೋಕೆ ಆಗಲ್ಲ ಎಂದು ವಾದ ಮಾಡಿದ.

ಸರ್ಕಾರವೇ ಪ್ರತಿ ಮನೆಗೆ ಹತ್ತು ಮಾಸ್ಕ್ ಕೊಡಲಿ. ನಾವೂ ಹಾಕಿಕೊಂಡು ಓಡಾಡ್ತೀವಿ. ಕೆಲವೊಮ್ಮೆ ಅಚಾನಕ್​ ಆಗಿ ಮರೆತುಬಿಡ್ತೀವಿ. ಹಾಗಂತ ಒಂದು ಸಾವಿರ ರೂಪಾಯಿ ಎಲ್ಲಿಂದ ಕೊಡ್ಲಿ ಅಂತಾ ಸಹ ಹೇಳಿದ.