ಸಹಾಯ ಮಾಡುವವರು ಒಂದೆಡೆಯಿದ್ದರೆ, ಪುಕ್ಸಟ್ಟೆ ಪೋಸು ಕೊಡುವವರು ಎಲ್ಲೆಡೆ ಇರುತ್ತಾರೆ!

ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂಕಷ್ಟದಲ್ಲಿರುವವರ ಅನ್ನ ಕಸಿಯುವ ಜನರ ಬಗ್ಗೆ ಅಧಿಕಾರದಲ್ಲಿರುವವರು ಎಚ್ಚರದಿಂದರಬೇಕು.

TV9kannada Web Team

| Edited By: Arun Belly

Oct 01, 2021 | 10:16 PM

ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾಗುವ ಜನರು ಅನುಭವಿಸುವ ತೊಂದರೆ-ತಾಪತ್ರಯಗಳು ಒಂದೆರಡಲ್ಲ. ಚಂಡಮಾರುತ, ಭಾರಿಮಳೆ ಸೃಷ್ಟಿಸುವ ಅವಾಂತಗಳಿಂದ ಕಷ್ಟಕ್ಕೆ ಸಿಕ್ಕುವ ಜನರಿಗೆ ಸರ್ಕಾರಗಳು, ಸ್ಥಳೀಯ ಆಡಳಿತಗಳು ಮತ್ತು ಅಧಿಕಾರಿಗಳು ನೆರವು ಒದಗಿಸುವ ಆಶ್ವಾಸನೆ ನೀಡುತ್ತಾರೆ. ಆದರೆ ಸಹಾಯ ಅವರಿಗೆ ತಲುಪುತ್ತದೆಯೇ ಅನ್ನೋದು ಇಲ್ಲಿ ಮುಖ್ಯವಾಗುತ್ತದೆ. ಪ್ರವಾಹ ಪೀಡಿತರ ಸಂಕಟವನ್ನು ನಾವು ಟಿವಿಗಳಲ್ಲಿ ನೋಡುತ್ತೇವೆ, ಪತ್ರಿಕೆಗಳಲ್ಲಿ ಓದುತ್ತೇವೆ. ಅವರಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡುವ ರಾಜಕಾರಣಿ ಮತ್ತು ಅಧಿಕಾರಿಗಳನ್ನು ಸಹ ನಾವು ನೋಡುತ್ತೇವೆ. ಒಂದು ವರ್ಷದ ನೀವೇನಾದರೂ ಸಂತ್ರಸ್ತರನ್ನು ಭೇಟಿಯಾದರೆ, ಅವರ ಬದುಕಿನಲ್ಲಿ ಯಾವುದೇ ಬದಲಾವಣೆ ಕಾಣಿಸದು. ಸರ್ಕಾರ ಒದಗಿಸಿದ ನೆರವು ಪ್ರವಾಹದ ನೀರಲ್ಲೇ ಕೊಚ್ಚಿಕೊಂಡು ಹೋಗಿರುತ್ತದೆ.

ಇದನ್ನೆಲ್ಲ ಉಲ್ಲೇಖಿಸುವುದಕ್ಕೆ ಕಾರಣವಿದೆ. ಈ ವಿಡಿಯೋ ಸ್ವಲ್ಪ ಗಮನವಿಟ್ಟು ನೋಡಿ. ಭಾರಿ ಮಳೆಯಿಂದಾಗಿ, ತಮ್ಮ ಅಂಗಡಿಗೆ ನೀರು ನುಗ್ಗಿ ಬಹಳ ನಷ್ಟವಾಗಿದೆ, ದಯವಿಟ್ಟು ಸಹಾಯ ಮಾಡಿ ಇಬ್ಬರು ಮಹಿಳೆ ಸಚಿವ ಕೆ ಸಿ ನಾರಾಯಣ ಗೌಡ ಎದುರು ಅಳುತ್ತಾ ಅಂಗಲಾಚುತ್ತಿದ್ದಾರೆ.

ಇದು ಮಂಡ್ಯ ಜಿಲ್ಲೆ ಕೆ ಅರ್ ಪೇಟೆಯ ದೃಶ್ಯ. ಸಚಿವರು, ಮಹಿಳೆಯರ ವೇದನೆಯನ್ನು ಬೇಸರವಿಲ್ಲದೆ ಕೇಳಸಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಜೊತೆಯಲ್ಲೇ ಇರುವ ತಹಸಿಲ್ದಾರರಿಗೆ ವರದಿ ತಯಾರಿಸಿ ಅವರಿಗೆ ನೆರವು ಒದಗಿಸುವ ಏರ್ಪಾಟು ಮಾಡಿ ಅಂತ ಸೂಚನೆಯನ್ನು ಸಹ ನೀಡುತ್ತಿದ್ದಾರೆ.

ಆದರೆ ಸಚಿವರ ಜೊತೆಗೆ ಕೆಲವು ಭಟ್ಟಂಗಿಗಳಿದ್ದಾರೆ. ಅವರು ಆಡುತ್ತಿರುವ ಮಾತುಗಳನ್ನು ಸ್ವಲ್ಪ ಗಮನವಿಟ್ಟು ಕೇಳಿಸಿಕೊಳ್ಳಿ. ಸಚಿವರನ್ನು ಅಲ್ಲಿಂದ ಅದಷ್ಟು ಬೇಗ ಕರೆದೊಯ್ಯುವ ಧಾವಂತ ಅವರ ಧ್ವನಿಗಳಲ್ಲಿ ನೀವು ಗುರುತಿಸಬಹುದು.

ಸಚಿವರ ಬಲಭಾಗಕ್ಕೆ ಒಬ್ಬ ದಪ್ಪಮೀಸೆಯ ವ್ಯಕ್ತಿ ಇದ್ದಾರೆ. ಅವರು ಅಧಿಕಾರಿಯಂತೆ ಕಾಣುತ್ತಿಲ್ಲ. ಆದರೂ ಮಹಿಳೆಯರು ತಮ್ಮ ನೋವು ತೋಡಿಕೊಳ್ಳುತ್ತಿದ್ದರೆ, ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಮುಖಭಾವನ್ನೊಮ್ಮೆ ಗಮನಿಸಿದರೆ ನಿಮಗೆ ಅರ್ಥವಾಗುತ್ತದೆ. ಸರ್ಕರದಿಂದ ಬರುವ ಸಹಾಯ ತನ್ನ ಜೇಬಿನಿಂದಲೇ ಹೋಗುತ್ತದೆ ಎನ್ನುವಂತಿದೆ ಈ ಮಹಾನುಭಾವನ ಮುಖಭಾವ!

ಇಂಥ ಜನರು ಎಲ್ಲ ಸಚಿವರ ಜೊತೆಗಿರುತ್ತಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂಕಷ್ಟದಲ್ಲಿರುವವರ ಅನ್ನ ಕಸಿಯುವ ಜನರ ಬಗ್ಗೆ ಅಧಿಕಾರದಲ್ಲಿರುವವರು ಎಚ್ಚರದಿಂದರಬೇಕು. ಈ ವಿಡಿಯೋ ಮತ್ತು ಲೇಖನದ ಉದ್ದೇಶ ಅಷ್ಟೇ.

ಇದನ್ನೂ ಓದಿ:  ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿರುವ ಬಿಗ್​ ಬಜೆಟ್ ಚಿತ್ರಗಳ ಬಗ್ಗೆ ಜಗ್ಗೇಶ್ ಹೇಳಿದ್ದೇನು?; ವಿಡಿಯೋ ನೋಡಿ

Follow us on

Click on your DTH Provider to Add TV9 Kannada