Petrol Diesel Price | ಸತತ ಮೂರನೇ ದಿನವೂ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ! ಸದ್ಯ ಇನ್ನೂ ಶತಕ ಬಾರಿಸಿಲ್ಲ

| Updated By: ಸಾಧು ಶ್ರೀನಾಥ್​

Updated on: Mar 02, 2021 | 9:42 AM

Petrol Diesel Rate: ಕಳೆದ ತಿಂಗಳು ಇಂಧನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿತ್ತು. ಆದರೆ ಇಂದು ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸ್ಥಿರವಾಗಿರಿಸಿಕೊಂಡಿವೆ. ದರ ಇಳಿಕೆಯತ್ತ ಸಾಗುವುದು ಯಾವಾಗ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮನೆ ಮಾಡಿದೆ.

Petrol Diesel Price | ಸತತ ಮೂರನೇ ದಿನವೂ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ! ಸದ್ಯ ಇನ್ನೂ ಶತಕ ಬಾರಿಸಿಲ್ಲ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸತತ ಮೂರನೇ ದಿನವಾದ ಮಂಗಳವಾರವೂ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ತಿಂಗಳು ಇಂಧನದ ಬೆಲೆಯಲ್ಲಿ ಭಾರಿ ದರ ಏರಿಕೆ ಕಂಡು ಬಂದಿತ್ತು. ಆದರೆ ಇಂದು ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸ್ಥಿರವಾಗಿರಿಸಿಕೊಂಡಿವೆ. ಕಳೆದ ಶನಿವಾರ ದರ ಹೆಚ್ಚಳವಾಗಿತ್ತು. ಇದಾದ ನಂತರ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ಶನಿವಾರ ದರ ಬದಲಾವಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿ ಮತ್ತು ಡೀಸೆಲ್ ಅನ್ನು ಲೀಟರ್‌ಗೆ 81.47 ರೂಪಾಯಿಗೆ ಮಾರಾಟವಾಗುತ್ತಿದೆ. ಶನಿವಾರ ಪೆಟ್ರೋಲ್ ಅನ್ನು 24 ಪೈಸೆ ಮತ್ತು ಡೀಸೆಲ್ ಅನ್ನು 15 ಪೈಸೆ ಹೆಚ್ಚಿಸಿದ ನಂತರ ಇದೇ ದರದಲ್ಲಿ ಇಂಧನ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 97.57 ರೂ. ಮತ್ತು ಡೀಸೆಲ್ ಲೀಟರ್‌ಗೆ 88.60 ರೂಗೆ ಮಾರಾಟವಾಗುತ್ತಿದೆ. ದೇಶದ ನಾಲ್ಕು ಮಹಾ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಪೆಟ್ರೋಲ್ ಅತ್ಯಂತ ದುಬಾರಿಯಾಗಿದೆ. ಅದಕ್ಕಿಂತ ಹೆಚ್ಚಿಗೆ  ಭೂಪಾಲ್​ನಲ್ಲಿ (99.21 ರೂ) ಬಹುತೇಕ ನೂರರ ಗಡಿ ಭಾಗದಲ್ಲಿದೆ.

ಇನ್ನು, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91.35 ರೂ.ಗೆ ಮತ್ತು ಡೀಸೆಲ್ ಬೆಲೆ ಶನಿವಾರ ಲೀಟರ್‌ಗೆ 84.20 ರಿಂದ 84.35 ರೂಪಾಯಿಗೆ ಏರಿದೆ. ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರಿಗೆ 93.11 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರಿಗೆ 86.45 ರೂಪಾಯಿಗೆ ಮಾರಾಟವಾಗುತ್ತಿದೆ.

ದೇಶದ ವಿವಿಧ ನಗರದಲ್ಲಿ ಪ್ರತಿ ಲೀಟ್​ ಪೆಟ್ರೋಲ್​ ದರ

ಆಗ್ರಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 89.07 ರೂಪಾಯಿಗೆ ಮಾರಾಟವಾಗುತ್ತಿದೆ. ಅಹಮದಾಬಾದ್​ನಲ್ಲಿ 88.31 ರೂಪಾಯಿಗೆ ಗ್ರಾಹಕರು ಪೆಟ್ರೋಲ್​ ಕೊಂಡುಕೊಳ್ಳುತ್ತಿದ್ದಾರೆ. ಬೆಂಗಳೂರು 94.22 ರೂಪಾಯಿ, ಭೂಪಾಲ್​ನಲ್ಲಿ 99.21 ರೂಪಾಯಿ, ಚೆನ್ನೈನಲ್ಲಿ 93.11 ರೂಪಾಯಿ, ದೆಹಲಿಯಲ್ಲಿ 91.17 ರೂಪಾಯಿ, ಹೈದರಾಬಾದ್​ನಲ್ಲಿ 94.79 ರೂಪಾಯಿಗೆ ಪೆಟ್ರೋಲ್​ ಮಾರಾಟವಾಗುತ್ತಿದೆ.

ಇನ್ನು ಉಳಿದ ನಗರಗಳಾದ ಇಂದೋರ್​ನಲ್ಲಿ 99.30 ರೂಪಾಯಿ, ಜೈಪುರದಲ್ಲಿ 97.72 ರೂಪಾಯಿ, ಜಮ್ಮುನಲ್ಲಿ 91.00 ರೂಪಾಯಿ, ಲಕ್ನೊದಲ್ಲಿ 89.31 ರೂಪಾಯಿ, ಮಂಗಳೂರಿನಲ್ಲಿ  93.46 ರೂಪಾಯಿ, ಮೈಸೂರಿನಲ್ಲಿ 93.83 ರೂಪಾಯಿ ಹಾಗೂ ಪಾಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.48 ರೂಪಾಯಿ ಇದೆ.

ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ

ಇದನ್ನೂ ಓದಿ: Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್​​ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!