ಬೆಂಗಳೂರು: ಸತತವಾಗಿ 8ನೇ ದಿನ ಬೆಲೆ ಏರಿಕೆಯತ್ತ ಪೆಟ್ರೋಲ್, ಡೀಸೆಲ್ ಮುಖಮಾಡಿದೆ. ಪೆಟ್ರೋಲ್ ಬೆಲೆ 30 ಪೈಸೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್ಗೆ ₹89.29 ಹಾಗೂ ಡೀಸೆಲ್ 35 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಪೆಟ್ರೋಲ್ ಬೆಲೆ ₹79.70 ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್ ಬರಲರ ಇಂದು ₹ 92.28 ಹಾಗೂ ಡೀಸೆಲ್ಬೆಲೆ ₹84.49 ಇದೆ.
ದೆಹಲಿಯಲ್ಲಿ ನಿನ್ನೆ ಲೀಟರ್ ಪೆಟ್ರೋಲ್ ಬೆಲೆ 26 ಪೈಸೆ ಏರಿಕೆ ಕಂಡಿತ್ತು. ಲೀಟರ್ ಡೀಸೆಲ್ ಬೆಲೆ 29 ಪೈಸೆಯಷ್ಟು ಏರಿಕೆಯಾಗಿತ್ತು. ಇದೀಗ ಸತತವಾಗಿ 8 ದಿನದಿಂದ ಬೆಲೆ ಏರಿಕೆಯತ್ತ ಸಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ಕೂಡಾ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗುತ್ತಲೇ ಇದೆ.
Petrol and diesel prices in Delhi stand at Rs 89.29/litre (increase by 30 paise) and Rs 79.70/litre (increase by 35 paise), respectively
(file photo) pic.twitter.com/wx9VVx7ye3
— ANI (@ANI) February 16, 2021
ಇದನ್ನೂ ಓದಿ: Petrol Price Today: ಶತಕದ ಹಾದಿಯತ್ತ ಪೆಟ್ರೋಲ್ ದರ.. 26 ಪೈಸೆ ಹೆಚ್ಚಳ
ವ್ಯಾಟ್ನಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗುತ್ತವೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯಿಂದಾಗಿ ಜನರು ಬೇಸತ್ತಿದ್ದಾರೆ. ಅದೆಷ್ಟೇ ಪ್ರತಿಭಟನೆ, ಧರಣಿ ನಡೆಯುತ್ತಿದ್ದರೂ ಯಾವುದನ್ನೂ ಲೆಕ್ಕಿಸದೇ ತೈಲದ ಬೆಲೆ ಏರುತ್ತಲೇ ಇದೆ. ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸಿದ್ದಾರೆ.
ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ:
ನಗರ ಪೆಟ್ರೋಲ್ ಡೀಸೆಲ್
ದೆಹಲಿ ₹89.29 ₹79.70
ಮುಂಬೈ ₹95.75 ₹86.72
ಪಾಟ್ನಾ ₹91.67 ₹84.92
ಕೊಲ್ಕತ್ತಾ ₹90.54 ₹83.29
Published On - 8:36 am, Tue, 16 February 21