KIABಯಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ: 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಹಾರಾಡಿದ ವಿಮಾನ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ವೇಳೆ ತಾಂತ್ರಿಕ ದೋಷ ಉಂಟಾಗಿ 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ವಿಮಾನ ರೌಂಡ್ಸ್ ಹಾಕಿದ ಘಟನೆ ನಡೆದಿದೆ. ಲುಫ್ತಾನ್ಸಾ ಏರ್‌ಲೈನ್ಸ್ ಟೇಕಾಫ್ ವೇಳೆ ವಿಮಾನದ ಮುಂದಿನ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಈ ವೇಳೆ ತಕ್ಷಣ ಅಧಿಕಾರಿಗಳು ಎಮರ್ಜೆನ್ಸಿ ಘೋಷಿಸಿದ್ರು. ಬಳಿಕ 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ವಿಮಾನ ಹಾರಾಡಿದೆ. ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರಿ […]

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕಾಫ್ ವೇಳೆ ತಾಂತ್ರಿಕ ದೋಷ ಉಂಟಾಗಿ 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ವಿಮಾನ ರೌಂಡ್ಸ್ ಹಾಕಿದ ಘಟನೆ ನಡೆದಿದೆ.
ಲುಫ್ತಾನ್ಸಾ ಏರ್‌ಲೈನ್ಸ್ ಟೇಕಾಫ್ ವೇಳೆ ವಿಮಾನದ ಮುಂದಿನ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಈ ವೇಳೆ ತಕ್ಷಣ ಅಧಿಕಾರಿಗಳು ಎಮರ್ಜೆನ್ಸಿ ಘೋಷಿಸಿದ್ರು. ಬಳಿಕ 1 ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ವಿಮಾನ ಹಾರಾಡಿದೆ. ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಂಧನ ಖಾಲಿಯಾದ ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಸುಗಮ ಲ್ಯಾಂಡಿಂಗ್ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ರು. ಲುಫ್ತಾನ್ಸಾ ವಿಮಾನದಲ್ಲಿ ಒಟ್ಟು 78 ಜನ ಪ್ರಯಾಣಿಸುತ್ತಿದ್ದರು.
ಈ ವಿಮಾನ ಇಂದು ಬೆಳಗ್ಗೆ ಕೆಐಎಎಲ್ KIABನಿಂದ ಜರ್ಮನಿಗೆ ತೆರಳುತ್ತಿತ್ತು. ಟೇಕಾಫ್ ಆದ ನಂತರ ವಿಮಾನದ ಮುಂದಿನ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಹೀಗಾಗಿ ಒಂದು ಗಂಟೆಗೂ ಅಧಿಕ ಕಾಲ ಆಕಾಶದಲ್ಲಿ ರೌಂಡ್ಸ್ ಹಾಕಿ ನಂತರ ಎಮರ್ಜೆನ್ಸಿ ಲ್ಯಾಂಡಿಗ್ ಮಾಡಲಾಗಿದೆ.
Published On - 9:12 am, Thu, 5 November 20