ಕಾಂಗ್ರೆಸ್​ ಹೋರಾಡಬೇಕಿರುವುದು ಪಾಕ್ ವಿರುದ್ಧ, ನಮ್ಮ ವಿರುದ್ಧವೇ ಅಲ್ಲ -ಪ್ರಧಾನಿ ಮೋದಿ

ತುಮಕೂರು: ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತಹವರಿಗೆ ರಕ್ಷಣೆ ನೀಡುವುದು ತಪ್ಪಾ ಎಂಬುದು ಇಲ್ಲಿಯ ಪ್ರಶ್ನೆ. ಪಾಕಿಸ್ತಾನದಿಂದ ಬಂದ ಸಿಖ್ಖರು, ಜೈನರು, ಪಾರ್ಸಿಗಳ ರಕ್ಷಣೆ ಮಾಡುತ್ತಿದ್ದೇವೆ. ಇಂತಹವರ ರಕ್ಷಣೆಗೆ ಮುಂದಾದರೆ ಹೋರಾಟ ಮಾಡ್ತಾರೆ. ಕೆಲವರು ಸಂಸತ್​ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ. ಪಾಕ್​ನಲ್ಲಿ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಹೋರಾಡಿ. ಪಾಕ್​ನ 70 ವರ್ಷಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೂರು […]

ಕಾಂಗ್ರೆಸ್​  ಹೋರಾಡಬೇಕಿರುವುದು  ಪಾಕ್  ವಿರುದ್ಧ, ನಮ್ಮ ವಿರುದ್ಧವೇ ಅಲ್ಲ -ಪ್ರಧಾನಿ ಮೋದಿ
ಸಾಧು ಶ್ರೀನಾಥ್​

Updated on: Jan 02, 2020 | 3:21 PM

ತುಮಕೂರು: ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಂತಹವರಿಗೆ ರಕ್ಷಣೆ ನೀಡುವುದು ತಪ್ಪಾ ಎಂಬುದು ಇಲ್ಲಿಯ ಪ್ರಶ್ನೆ. ಪಾಕಿಸ್ತಾನದಿಂದ ಬಂದ ಸಿಖ್ಖರು, ಜೈನರು, ಪಾರ್ಸಿಗಳ ರಕ್ಷಣೆ ಮಾಡುತ್ತಿದ್ದೇವೆ. ಇಂತಹವರ ರಕ್ಷಣೆಗೆ ಮುಂದಾದರೆ ಹೋರಾಟ ಮಾಡ್ತಾರೆ. ಕೆಲವರು ಸಂಸತ್​ ನಿರ್ಣಯದ ವಿರುದ್ಧ ಹೋರಾಡುತ್ತಿದ್ದಾರೆ. ಪಾಕ್​ನಲ್ಲಿ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಹೋರಾಡಿ. ಪಾಕ್​ನ 70 ವರ್ಷಗಳ ಕರಾಳ ಕಾರ್ಯದ ವಿರುದ್ಧ ಹೋರಾಡಿ ಎಂದು ಪ್ರಧಾನಿ ಮೋದಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೂರು ಸಂಕಲ್ಪ ಮಾಡಲು ಪ್ರಧಾನಿ ಮನವಿ:
ನಮ್ಮ ಕರ್ತವ್ಯಗಳಿಗೆ ಪುರಾತನ ಸಂಸ್ಕೃತಿ ಜಾಗೃತಗೊಳಿಸೋಣ. ಪ್ರಕೃತಿ, ಪರಿಸರ ಸಂರಕ್ಷಣೆಗೆ ಪ್ಲ್ಯಾಸ್ಟಿಕ್​ ಮುಕ್ತಗೊಳಿಸೋಣ. ಜಲಸಂರಕ್ಷಣೆಗೆ ಜನಜಾಗೃತಿ ಆಂದೋಲನ ಮಾಡೋಣ ಎಂದು ಸಿದ್ಧಲಿಂಗ ಶ್ರೀಗಳ ಮೂಲಕ ಸಂಕಲ್ಪ ಮಾಡಲು  ತುಮಕೂರಿನ ಸಿದ್ಧಗಂಗಾ ಮಠದಲ್ಲಿ ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ಕರೆ ನೀಡಿದರು.

Published On - 3:03 pm, Thu, 2 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us