ಬೆಂಗಳೂರಿನಿಂದ ಹೊರ ಹೋಗುತ್ತಿದ್ದೀರಾ? ಹುಷಾರ್ ಪೊಲೀಸ್‌ರಿದ್ದಾರೆ!

ಚಿಕ್ಕಬಳ್ಳಾಪುರ: ಇಂದು ರಾತ್ರಿಯಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಡೌನ್ ಆಗುತ್ತಿವೆ. ಪರಿಣಾಮ ಸಾವಿರಾರು ಜನರು ಬೆಂಗಳೂರು ಬಿಟ್ಟು ತಮ್ಮೂರಿನತ್ತ ಹೊರಟಿದ್ದಾರೆ. ಹೌದು ಇಂದು ರಾತ್ರಿಯಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ಶುರವಾಗುತ್ತದೆ. ಹೀಗಾಗಿ ಬೆಂಗಳೂರು ನಗರದಿಂದ ಕಾರು, ಬೈಕ್, ಬಸ್ ಗಳಲ್ಲಿ ಸಾವಿರಾರು ಜನರು ಚಿಕ್ಕಬಳ್ಳಾಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಗಡಿಯಲ್ಲಿ ಚೆಕ್ ಪೋಸ್ಟ್​ನಲ್ಲಿ ಭಾರೀ ಜನಸಂದಣಿ ಏರ್ಪಟ್ಟಿದೆ. ಇನ್ನೊಂದೆಡೆ ಈ ರೀತಿ ವಲಸೆ ಹೋಗೋದನ್ನ […]

ಬೆಂಗಳೂರಿನಿಂದ ಹೊರ ಹೋಗುತ್ತಿದ್ದೀರಾ? ಹುಷಾರ್ ಪೊಲೀಸ್‌ರಿದ್ದಾರೆ!
Edited By:

Updated on: Jul 14, 2020 | 3:17 PM

ಚಿಕ್ಕಬಳ್ಳಾಪುರ: ಇಂದು ರಾತ್ರಿಯಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಡೌನ್ ಆಗುತ್ತಿವೆ. ಪರಿಣಾಮ ಸಾವಿರಾರು ಜನರು ಬೆಂಗಳೂರು ಬಿಟ್ಟು ತಮ್ಮೂರಿನತ್ತ ಹೊರಟಿದ್ದಾರೆ.

ಹೌದು ಇಂದು ರಾತ್ರಿಯಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ಶುರವಾಗುತ್ತದೆ. ಹೀಗಾಗಿ ಬೆಂಗಳೂರು ನಗರದಿಂದ ಕಾರು, ಬೈಕ್, ಬಸ್ ಗಳಲ್ಲಿ ಸಾವಿರಾರು ಜನರು ಚಿಕ್ಕಬಳ್ಳಾಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಗಡಿಯಲ್ಲಿ ಚೆಕ್ ಪೋಸ್ಟ್​ನಲ್ಲಿ ಭಾರೀ ಜನಸಂದಣಿ ಏರ್ಪಟ್ಟಿದೆ.

ಇನ್ನೊಂದೆಡೆ ಈ ರೀತಿ ವಲಸೆ ಹೋಗೋದನ್ನ ತಡೆಯಲು ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿ ಜನರನ್ನ ತಡೆಯುತ್ತಿದ್ದಾರೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸುವವರಿಗೆ ತಡೆಯೊಡ್ಡಿ ಮತ್ತೇ ಅವರನ್ನ ಬೆಂಗಳೂರಿನತ್ತ ವಾಪಸ್ ಕಳುಹಿಸುತ್ತಿದ್ದಾರೆ.