ಬೆಂಗಳೂರು: ಟೌನ್​ಹಾಲ್ ಬಳಿ ಪ್ರತಿಭಟನಾಕಾರರು ಪೊಲೀಸ್​ ವಶಕ್ಕೆ

| Updated By: ganapathi bhat

Updated on: Dec 05, 2020 | 10:39 AM

ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೇ ಸಹ ಕೂಗಿದರು. ಸಿಎಂ ಯಡಿಯೂರಪ್ಪರ ಫೋಟೋಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.ಈ ವೇಳೆ, ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಧರಣಿನಿರತರನ್ನು ಬಿಎಂಟಿಸಿ ಬಸ್​ಗಳಲ್ಲಿ ತುಂಬಿಸಿ ವಶಕ್ಕೆ ಪಡೆದರು.

ಬೆಂಗಳೂರು: ಟೌನ್​ಹಾಲ್ ಬಳಿ ಪ್ರತಿಭಟನಾಕಾರರು ಪೊಲೀಸ್​ ವಶಕ್ಕೆ
ಪ್ರತಿಭಟನಾಕಾರರು ಅರೆಸ್ಟ್
Follow us on

ಬೆಂಗಳೂರು: ಮರಾಠ ನಿಗಮ ರಚನೆ ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನೂರಾರು ಕನ್ನಡ ಪರ ಸಂಘಟನೆಗಳ ಸದಸ್ಯರು ಟೌನ್​ಹಾಲ್​ ಬಳಿ ಜಮಾಯಿಸಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೇ ಸಹ ಕೂಗಿದರು. ಸಿಎಂ ಯಡಿಯೂರಪ್ಪರ ಫೋಟೋಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ, ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಧರಣಿನಿರತರನ್ನು ಬಿಎಂಟಿಸಿ ಬಸ್​ಗಳಲ್ಲಿ ತುಂಬಿಸಿ ವಶಕ್ಕೆ ಪಡೆದರು. ಪ್ರತಿಭಟನಾಕಾರರನ್ನು  ಚಾಮರಾಜಪೇಟೆ ಸಿಎಆರ್ ಗ್ರೌಂಡ್​ಗೆ ಶಿಫ್ಟ್ ಮಾಡಲಾಯಿತು ಎಂದು ತಿಳಿದುಬಂದಿದೆ.

ಟೌನ್ ಹಾಲ್ ಆಯ್ತು ಪ್ರತಿಭಟನೆಯ ಪವರ್ ಸೆಂಟರ್: ಒಬ್ಬರು ಅರೆಸ್ಟ್​ ಆಗ್ತಿದಂತೆ ಮತ್ತೊಂದು ಗುಂಪು ಧರಣಿಗೆ ರೆಡಿ

ಸಿಲಿಕಾನ್​ ಸಿಟಿಯಲ್ಲಿ BMTC ಬಸ್​ಗಳ ಮೇಲೆ ಕಲ್ಲು ತೂರಾಟ

Published On - 8:57 am, Sat, 5 December 20