ಸಿಲಿಕಾನ್ ಸಿಟಿಯಲ್ಲಿ BMTC ಬಸ್ಗಳ ಮೇಲೆ ಕಲ್ಲು ತೂರಾಟ
ಹೊಸೂರು ರಸ್ತೆಯ ಹಳೆ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಡಿಪೋ ನಂಬರ್ 32ಕ್ಕೆ ಸೇರಿದ ರೂಟ್ ನಂಬರ್ 600ರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಬಸ್ನ ಹಿಂಬದಿಯ ಗಾಜು ಹಾಗೂ ಸೈಡ್ ಮಿರರ್ ಪುಡಿ ಪುಡಿಯಾಗಿದೆ.
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಬೃಹತ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.
ಈ ನಡುವೆ, ಹೊಸೂರು ರಸ್ತೆಯ ಹಳೆ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಡಿಪೋ ನಂಬರ್ 32ಕ್ಕೆ ಸೇರಿದ ರೂಟ್ ನಂಬರ್ 600ರ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಬಸ್ನ ಹಿಂಬದಿಯ ಗಾಜು ಹಾಗೂ ಸೈಡ್ ಮಿರರ್ ಪುಡಿ ಪುಡಿಯಾಗಿದೆ.
ಇತ್ತ, ನಗರದ ಪೈ ಲೇಔಟ್ನಲ್ಲಿ ಸಹ ಬಿಎಂಟಿಸಿ ಬಸ್ ಮೇಲೆ ಕಲ್ಲುತೂರಾಟ ನಡೆದಿದೆ. ಕೆ.ಆರ್.ಪುರಂನ ಪೈ ಲೇಔಟ್ನಲ್ಲಿ ಘಟನೆ ನಡೆದಿದೆ.
Published On - 7:43 am, Sat, 5 December 20