ಮೆಷಿನ್ ರಿಪೇರಿ ನೆಪದಲ್ಲಿ ಮನೆಗೆ ಕನ್ನ, 20ನೇ ವಯಸ್ಸಿಗೆ ಜೈಲು ಸೇರಿದ ಯುವಕ
ದಾಸರಹಳ್ಳಿ ಸಮಿಪದ ಶೆಟ್ಟಿಹಳ್ಳಿಯ ಫ್ಯಾಷನ್ ಡಿಸೈನರ್ ಸಂಧ್ಯಾ ಮನೆಯಲ್ಲಿ ಡಿಸೆಂಬರ್ 25ರಂದು ಕಳ್ಳತನ ಮಾಡಿದ್ದ ಆರೋಪಿ ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)ನನ್ನು ಪೊಲೀಸರು ತಮ್ಮ ಕಾರ್ಯಾಚರಣೆ ವೇಳೆ ಬಂಧಿಸಿದ್ದಾರೆ.

ಬಂಧಿತ ಆರೋಪಿ ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)
ನೆಲಮಂಗಲ: ಫ್ರಿಡ್ಜ್, ವಾಷಿಂಗ್ ಮೆಷಿನ್ ರಿಪೇರಿ ಮಾಡುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಾಸರಹಳ್ಳಿ ಸಮಿಪದ ಶೆಟ್ಟಿಹಳ್ಳಿಯ ಫ್ಯಾಷನ್ ಡಿಸೈನರ್ ಸಂಧ್ಯಾ ಮನೆಯಲ್ಲಿ ಡಿಸೆಂಬರ್ 25ರಂದು ಕಳ್ಳತನ ಮಾಡಿದ್ದ ಆರೋಪಿ ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)ನನ್ನು ಪೊಲೀಸರು ತಮ್ಮ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ. ಈತನಿಂದ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವಶದಲ್ಲಿ ಆರೋಪಿ ಸುಮನ್

ಸುಮನ್ ಅಲಿಯಾಸ್ ಫ್ರಿಡ್ಜ್ ಸುಮನ್(20)
CCB ಪೊಲೀಸರ ಭರ್ಜರಿ ಬೇಟೆ; ಕುಖ್ಯಾತ ಮನೆಗಳ್ಳರ ಬಂಧನ, ಇವರ ಬಂಧನದ ಕಥೆ ರೋಚಕ..



