ಹೊಸ ವರ್ಷದ ಸಂಭ್ರಮಕ್ಕೆಂದು ತೆರಳಿದ್ದವನು ಶವವಾಗಿ ಪತ್ತೆ: ಇದು ಕೊಲೆಯೆಂದ ಕುಟುಂಬಸ್ಥರು..
ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋದ ಯುವಕ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ನಿನ್ನೆ ಬೆಳಿಗ್ಗೆ ಯುವಕ ಮೃತ ಪಟ್ಟಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಸಿಕ್ಕಿದೆ. ಆದರೆ ಇದು ಆಕ್ಸಿಡೆಂಟ್ ಅಲ್ಲ, ಕೊಲೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಯಾದಗಿರಿ: ಹೊಸ ವರ್ಷದ ಸಂಭ್ರಮಕ್ಕೆಂದು ತೆರಳಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಮಹಾಂತೇಶ್ ಮೃತ ಯುವಕ. ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋದ ಯುವಕ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಹೀಗಾಗಿ ನಿನ್ನೆ ಬೆಳಿಗ್ಗೆ ಯುವಕ ಮೃತ ಪಟ್ಟಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಸಿಕ್ಕಿದೆ. ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮಧ್ಯರಾತ್ರಿ 2 ಗಂಟೆಗೆ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಮಹಾಂತೇಶ್ ಅಪಘಾತದಿದ ಮೃತಪಟ್ಟಂತೆ ತೋರಿಸುವ ಹುನ್ನಾರ ನಡೆದಿದೆ. ಆದರೆ, ಇದು ಕೊಲೆ ಎಂಬುದು ಕುಟುಂಬಸ್ಥರ ಆರೋಪ. ಬೆಳೆದು ನಿಂತ ಮಗನ ಅಗಲಿಗೆಯಿಂದ ಯುವಕನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ನ್ಯೂ ಇಯರ್ ಪಾರ್ಟಿ ವೇಳೆ.. ಡಾಬಾದಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ




