ಗಂಡನ ಹತ್ಯೆಯ ಸೇಡು, 1 ಕೋಟಿ ರೂ. ಸುಪಾರಿ ಕೊಟ್ಟ ‘ಖಾರದ ಪುಡಿ’ ವರಲಕ್ಷೀ

ಬೆಂಗಳೂರು:ಜೈಲಿನಲ್ಲೇ ಇದ್ದುಕೊಂಡು ಮರ್ಡರ್ ಗೆ ಸ್ಕೆಚ್ ಹಾಕಿ, 1 ಕೋಟಿ ಸುಪಾರಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್ ನ 9 ಜನ ಸಹಚರರನ್ನ ಕಾಮಾಕ್ಷಿ ಪಾಳ್ಯ ಮತ್ತು ರಾಜಗೋಪಾಲ ನಗರ ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ಬಂಧಿಸಲಾಗಿದೆ. 2018 ರಲ್ಲಿ ನಡೆದಿದ್ದ ಗೋವಿಂದೇಗೌಡ ಹತ್ಯೆ ದ್ವೇಷದ ಹಿನ್ನೆಲೆ ವರಲಕ್ಷ್ಮಿ ಎಂಬ ಮಹಿಳೆ ಈ ಗ್ಯಾಂಗಿಗೆ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ. ವರಲಕ್ಷ್ಮೀ ಈ ಹಿಂದೆ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಯಾಗಿದ್ದ ಗೋವಿಂದೇಗೌಡನ ಪತ್ನಿಯಾಗಿದ್ದು, […]

ಗಂಡನ ಹತ್ಯೆಯ ಸೇಡು, 1 ಕೋಟಿ ರೂ. ಸುಪಾರಿ ಕೊಟ್ಟ ‘ಖಾರದ ಪುಡಿ’ ವರಲಕ್ಷೀ
Updated By:

Updated on: Jul 30, 2020 | 2:31 PM

ಬೆಂಗಳೂರು:ಜೈಲಿನಲ್ಲೇ ಇದ್ದುಕೊಂಡು ಮರ್ಡರ್ ಗೆ ಸ್ಕೆಚ್ ಹಾಕಿ, 1 ಕೋಟಿ ಸುಪಾರಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್ ನ 9 ಜನ ಸಹಚರರನ್ನ ಕಾಮಾಕ್ಷಿ ಪಾಳ್ಯ ಮತ್ತು ರಾಜಗೋಪಾಲ ನಗರ ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ಬಂಧಿಸಲಾಗಿದೆ.

2018 ರಲ್ಲಿ ನಡೆದಿದ್ದ ಗೋವಿಂದೇಗೌಡ ಹತ್ಯೆ ದ್ವೇಷದ ಹಿನ್ನೆಲೆ ವರಲಕ್ಷ್ಮಿ ಎಂಬ ಮಹಿಳೆ ಈ ಗ್ಯಾಂಗಿಗೆ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ. ವರಲಕ್ಷ್ಮೀ ಈ ಹಿಂದೆ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಯಾಗಿದ್ದ ಗೋವಿಂದೇಗೌಡನ ಪತ್ನಿಯಾಗಿದ್ದು, ಆರೋಪಿ ವರಲಕ್ಷ್ಮಿ 2016 ರಲ್ಲಿ ಸಂಚು ರೂಪಿಸಿ ಚಿಕ್ಕ ತಿಮ್ಮೇಗೌಡ ಕೊಲೆ ಮಾಡಿಸಿದ್ದಾರೆ ಎಂದು ಚಿಕ್ಕ ತಿಮ್ಮೇಗೌಡನ ಸೋದರ ನಟರಾಜ್ ಕಾಮಾಕ್ಷಿ‌ಪಾಳ್ಯ ಠಾಣೆಗೆ ದೂರು ನೀಡಿದ್ದರು.

ಈ ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಹಳೆ ದ್ವೇಷದ ಹಿನ್ನೆಲೆಯಿಂದ ರಾಜಗೋಪಾಲ ನಗರದ ಚಿಕ್ಕ ತಿಮ್ಮೇಗೌಡನ ಸಹೋದರರಾದ ನಟರಾಜ್ ಮತ್ತು ಹೇಮಂತ್ ಕೊಲೆಗೆ ವರಲಕ್ಷ್ಮೀ ಈ ಗ್ಯಾಂಗಿಗೆ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲೇ ಇದ್ದುಕೊಂಡು ಮರ್ಡರ್ ಗೆ ಸ್ಕೆಚ್ ಹಾಕಿ 1 ಕೋಟಿ ಸುಪಾರಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್ ನ ಸೋದರ ಚೇತು ಮತ್ತು ಸಹಚರನ್ನ ಬಳಸಿಕಂಡು, ಈ ದುಷ್ಕರ್ಮಿಗಳು ಕೊಲೆಗೆ ಸ್ಕೆಚ್ ಹಾಕಿದ್ದರು.

ಸದ್ಯ ಈ 9 ಆರೋಪಿಗಳನ್ನ ಕಾಮಾಕ್ಷಿ ಪಾಳ್ಯ ಮತ್ತು ರಾಜಗೋಪಾಲ ನಗರ ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ಬಂಧಿಸಲಾಗಿದ್ದು, ಈಗಾಗಲೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕ್ಯಾಟ್ ರಾಜ ಮತ್ತು ಬಳ್ಳಾರಿ ಜೈಲಿನಲ್ಲಿರುವ ಹೇಮಂತನನ್ನು ಬಾಡಿ ವಾರಂಟ್ ಮೂಲಕ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

Published On - 3:28 pm, Tue, 28 July 20