ಬೆಂಗಳೂರು: ವಾಣಿ ವಿಲಾಸ್ ಆಸ್ಪತ್ರೆಯ ಸಿಬ್ಬಂದಿ ಯಡವಟ್ಟಿನಿಂದ ಕಿರಾತಕರು ಮಗುವನ್ನು ಅಪಹರಿಸಿದ ಪ್ರಸಂಗ ನಡೆದಿತ್ತು. ಆದ್ರೆ ಕಿಡ್ನಾಪ್ ಕಿರಾತಕರನ್ನು ನಿನ್ನೆ ರಾತ್ರಿ ವಿವಿ ಪುರಂ ಪೊಲೀಸರು ಬಂಧಿಸಿದ್ದಾರೆ.
80 ಸಾವಿರಕ್ಕೆ ಮಾರಾಟ ಮಾಡಿದ್ದಳು..
ಅನೌನ್ಸ್ಮೆಂಟ್ ಆಗಿ 2 ನಿಮಿಷದೊಳಗೆ ಎಂಟ್ರಿ ಕೊಟ್ಟಿದ್ದ ಮಹಿಳೆಯೊಬ್ಬಳು ತಾನು ಮಗುವಿನ ಅಜ್ಜಿ ಅಂತಾ ಹೇಳಿ, ಮಗುವನ್ನು ನವೆಂಬರ್ 11 ರಂದು ಮಧ್ಯಾಹ್ನ 1.30 ರ ಸಮಯದಲ್ಲಿ ಕದ್ದು ಪರಾರಿಯಾಗಿದ್ದಳು. ಪರಾರಿಯಾಗಿದ್ದ ಮಹಿಳೆ ಮಗುವನ್ನು ಕುಮಾರಸ್ವಾಮಿ ಲೇಔಟ್ನಲ್ಲಿ 80 ಸಾವಿರಕ್ಕೆ ಮಾರಾಟ ಮಾಡಿದ್ದಳು. ಬಳಿಕ ಮಗು ಕಾಣದಾದಾಗ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಈ ಸಂಬಂಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಮಗುವನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ನೀಡಿದ್ದಾರೆ. ಆದರೆ ಇಲ್ಲಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯತನ ಎದ್ದು ಕಾಣಿಸುತ್ತಿದೆ.
ಬಹುಮುಖ್ಯವಾಗಿ ಹಾಸ್ಪಿಟಲ್ ಸಿಬ್ಬಂದಿ ಸರಿಯಾಗಿ ವೆರಿಫೈ ಮಾಡದೇ ಪೋಷಕರು ಅಂತಾ ಬಂದೋರಿಗೆ ಮಗು ಕೊಟ್ಟಿದ್ದು ದೊಡ್ಡ ಅಪರಾಧವಾಗಿದೆ. ಅಲ್ಲದೆ ನಿಯಮದ ಪ್ರಕಾರ ಮಗುವನ್ನು ತಾಯಿಯ ಬಳಿಯೇ ಬಿಡಬೇಕು. ಇದ್ಯಾವುದನ್ನೂ ಲೆಕ್ಕಿಸದೇ ಪೋಷಕರು ಅಂತಾ ಬಂದ ಮಹಿಳೆ ಕೈಗೆ ಸಿಬ್ಬಂದಿ ಮಗುವನ್ನು ಕೊಟ್ಟಿದ್ದರು. ಮುಂದೆಯಾದರೂ ತಪ್ಪು ಸಿಬ್ಬಂದಿ ಎಚ್ಚರವಹಿಸಬೇಕಿದೆ.
Published On - 11:26 am, Fri, 20 November 20