ಅರಮನೆ ಮೈದಾನದಲ್ಲಿ ನೂರಾರು ವಲಸೆ ಕಾರ್ಮಿಕರನ್ನ ರಕ್ಷಿಸಿದ ಆರಕ್ಷಕ

| Updated By: ಆಯೇಷಾ ಬಾನು

Updated on: May 31, 2020 | 2:25 PM

ಬೆಂಗಳೂರು: ಪೊಲೀಸ್​ ಕಾನ್ಸ್‌ಟೆಬಲ್ ಸಮಯಪ್ರಜ್ಞೆಯಿಂದ ನಗರದಲ್ಲಿ ಭಾರೀ ಅನಾಹುತ ತಪ್ಪಿದ್ದು, ನೂರಾರು ವಲಸೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಗಾಳಿ ಮಳೆಗೆ ಶೆಲ್ಟರ್ ಕುಸಿದು ಬಿದ್ದಿದ್ದು, ಅವಶೇಷದಡಿ ಸಿಲುಕಿದ್ದ ಮಗು ಸೇರಿ ನೂರಾರು ಜನರನ್ನು ಕಾನ್ಸ್‌ಟೆಬಲ್ ರವಿಕುಮಾರ್ ಒಬ್ಬರೇ ರಕ್ಷಿಸಿದ್ದಾರೆ. ಇದೇ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಮಿಕರನ್ನು ಶಿಫ್ಟ್ ಮಾಡುವ ಕೆಲಸ ನಡೆಯುತ್ತಿತ್ತು. ತಮ್ಮ ರಾಜ್ಯಗಳಿಗೆ ಹೋಗಲು ವಲಸೆ ಕಾರ್ಮಿಕರು ಜಮಾವಣೆಗೊಂಡಿದ್ದರು. ಈ ವೇಳೆ ಬಿರುಗಾಳಿ ಸಹಿತ ಭಾರೀ ಮಳೆಗೆ ಮರ ಧರೆಗುರುಳಿ ಅರಮನೆ ಮೈದಾನದ […]

ಅರಮನೆ ಮೈದಾನದಲ್ಲಿ ನೂರಾರು ವಲಸೆ ಕಾರ್ಮಿಕರನ್ನ ರಕ್ಷಿಸಿದ ಆರಕ್ಷಕ
Follow us on

ಬೆಂಗಳೂರು: ಪೊಲೀಸ್​ ಕಾನ್ಸ್‌ಟೆಬಲ್ ಸಮಯಪ್ರಜ್ಞೆಯಿಂದ ನಗರದಲ್ಲಿ ಭಾರೀ ಅನಾಹುತ ತಪ್ಪಿದ್ದು, ನೂರಾರು ವಲಸೆ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರೀ ಗಾಳಿ ಮಳೆಗೆ ಶೆಲ್ಟರ್ ಕುಸಿದು ಬಿದ್ದಿದ್ದು, ಅವಶೇಷದಡಿ ಸಿಲುಕಿದ್ದ ಮಗು ಸೇರಿ ನೂರಾರು ಜನರನ್ನು ಕಾನ್ಸ್‌ಟೆಬಲ್ ರವಿಕುಮಾರ್ ಒಬ್ಬರೇ ರಕ್ಷಿಸಿದ್ದಾರೆ.

ಇದೇ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಮಿಕರನ್ನು ಶಿಫ್ಟ್ ಮಾಡುವ ಕೆಲಸ ನಡೆಯುತ್ತಿತ್ತು. ತಮ್ಮ ರಾಜ್ಯಗಳಿಗೆ ಹೋಗಲು ವಲಸೆ ಕಾರ್ಮಿಕರು ಜಮಾವಣೆಗೊಂಡಿದ್ದರು. ಈ ವೇಳೆ ಬಿರುಗಾಳಿ ಸಹಿತ ಭಾರೀ ಮಳೆಗೆ ಮರ ಧರೆಗುರುಳಿ ಅರಮನೆ ಮೈದಾನದ ಶೆಲ್ಟರ್ ಕುಸಿದು ಬಿದ್ದಿತ್ತು. ಕುಸಿದುಬಿಟ್ಟ ಶೆಲ್ಟರ್​ನಲ್ಲಿ ಒಟ್ಟು 400ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಆಶ್ರಯ ಪಡೆದಿದ್ದರು.

ಎಂಬಿಎ ಗೋಲ್ಡ್ ಮೆಡಲಿಸ್ಟ್ ಆಗಿರುವ ಶಿವಾಜನಗರ ಪೊಲೀಸ್ ಠಾಣೆಯ ಕಾನ್ಸ್​ಟೆಬಲ್ ರವಿಕುಮಾರ್, ಅವಶೇಷದಡಿ ಸಿಲುಕಿದ್ದ ನೂರಾರು ಜನರನ್ನು ರಕ್ಷಿಸಿದ್ದಾರೆ. ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಲಕ್ಚರರ್ ಆಗಿದ್ದ ರವಿಕುಮಾರ್, ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕ ಬಳಿಕ ರಾಜೀನಾಮೆ ನೀಡಿದ್ದರು.

Published On - 11:50 am, Sun, 31 May 20