
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳುವವರಿಗೆ ಸುಲಭದ ಮೊದಲ ಆಸರೆ ಸಿಗಲು ಎಂಜಿ ರಸ್ತೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸುರಕ್ಷಿತ ವಲಯ (ಸೇಫ್ಟಿ ಐಲ್ಯಾಂಡ್ -Safety Island) ರೂಪಿಸಿದ್ದಾರೆ.
ಚಿಕ್ಕಚಿಕ್ಕ ಪೆಂಡಾಲ್ ಹಾಕುವ ಮೂಲಕ ಸೇಫ್ಟಿ ಐಲ್ಯಾಂಡ್ ನಿರ್ಮಿಸಲಾಗಿದೆ. ಇಲ್ಲಿ ಮಹಿಳಾ ಹಾಗೂ ಪುರುಷರು ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಸಂಭ್ರಮಾಚರಣೆ ವೇಳೆ ಯಾರಿಗಾದರೂ ತೊಂದರೆ ಎದುರಾದರೆ ಸೇಫ್ಟಿ ಐಲ್ಯಾಂಡ್ಗೆ ನೇರವಾಗಿ ಬರಬಹುದು.
ಎಂಜಿ ರಸ್ತೆಯಲ್ಲಿ ರಾತ್ರಿ ಎಂಟು ಗಂಟೆಯ ಬಳಿಕ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಹೋಟೆಲ್ ಮತ್ತು ಪಬ್ಗಳಲ್ಲಿ ಬುಕ್ಕಿಂಗ್ ಇದ್ದವರಿಗೆ ಮಾತ್ರ ಎಂಜಿ ರಸ್ತೆಯ ಪ್ರವೇಶಕ್ಕೆ ಅವಕಾಶ ಸಿಗಲಿದೆ.
ಹೊಸವರ್ಷಾಚರಣೆ ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; DIG ರವಿಕಾಂತೇಗೌಡ ಖಡಕ್ ಎಚ್ಚರಿಕೆ