ಬೆಂಗಳೂರು ಪೊಲೀಸರಿಂದ ಚೇಸಿಂಗ್.. ರೈಲಿನಲ್ಲಿದ್ದ ಕಳ್ಳನ ಹಿಡಿಯಲು ವಿಮಾನ ಏರಿದರು!

ಬೆಂಗಳೂರು: ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳನನ್ನು ಸಮಯಕ್ಕೆ ಸರಿಯಾಗಿ ಹಿಡಿಯಲು ಪೊಲೀಸರು ವಿಮಾನದಲ್ಲಿ ಚೇಸಿಂಗ್ ಮಾಡಿದ ರೋಚಕ ಕತೆಯಿದು! ದೂರದ ಊರಿನಲ್ಲಿ ಕೊನೆಗೂ ಕಳ್ಳನನ್ನು ಸೆರೆ ಹಿಡಿದ ಅಪರೂಪದ ಪ್ರಸಂಗ ಇದಾಗಿದೆ. ಏನಾಯಿತೆಂದ್ರೆ.. ಯಜಮಾನ ಇಲ್ಲದ ಸಮಯ ನೋಡಿಕೊಂಡು ಮನೆಗೆ ಕನ್ನ ಹಾಕಿ 1.3 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದು, ಕಳ್ಳ ರೈಲಿನಲ್ಲಿ ಪರಾರಿಯಾಗುತ್ತಿದ್ದ. ಅವನನ್ನು ಹಿಡಿಯಲೇಬೇಕೆಂದು ನಿರ್ಧರಿಸಿದ ಪೊಲೀಸರು ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನವನ್ನು ಹತ್ತಿಯೇಬಿಟ್ಟರು. ಕಳ್ಳನಿಗಿಂತ ಮುಂಚೆಯೇ ಬಂದು.. ರೈಲ್ವೆ […]

ಬೆಂಗಳೂರು ಪೊಲೀಸರಿಂದ ಚೇಸಿಂಗ್.. ರೈಲಿನಲ್ಲಿದ್ದ ಕಳ್ಳನ ಹಿಡಿಯಲು ವಿಮಾನ ಏರಿದರು!
Edited By:

Updated on: Oct 20, 2020 | 12:52 PM

ಬೆಂಗಳೂರು: ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳನನ್ನು ಸಮಯಕ್ಕೆ ಸರಿಯಾಗಿ ಹಿಡಿಯಲು ಪೊಲೀಸರು ವಿಮಾನದಲ್ಲಿ ಚೇಸಿಂಗ್ ಮಾಡಿದ ರೋಚಕ ಕತೆಯಿದು! ದೂರದ ಊರಿನಲ್ಲಿ ಕೊನೆಗೂ ಕಳ್ಳನನ್ನು ಸೆರೆ ಹಿಡಿದ ಅಪರೂಪದ ಪ್ರಸಂಗ ಇದಾಗಿದೆ.

ಏನಾಯಿತೆಂದ್ರೆ.. ಯಜಮಾನ ಇಲ್ಲದ ಸಮಯ ನೋಡಿಕೊಂಡು ಮನೆಗೆ ಕನ್ನ ಹಾಕಿ 1.3 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದು, ಕಳ್ಳ ರೈಲಿನಲ್ಲಿ ಪರಾರಿಯಾಗುತ್ತಿದ್ದ. ಅವನನ್ನು ಹಿಡಿಯಲೇಬೇಕೆಂದು ನಿರ್ಧರಿಸಿದ ಪೊಲೀಸರು ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನವನ್ನು ಹತ್ತಿಯೇಬಿಟ್ಟರು. ಕಳ್ಳನಿಗಿಂತ ಮುಂಚೆಯೇ ಬಂದು.. ರೈಲ್ವೆ ನಿಲ್ದಾಣದಲ್ಲಿ ಪಕ್ಕಾ ಸಿನಿಮಾದಲ್ಲಿ ನಡೆಯುವಂತೆ ಆ ಖದೀಮನಿಗಾಗಿ ಕಾದು ನಿಂತಿದ್ದರು.

6 ವರ್ಷದಿಂದ ಕೆಲ್ಸ ಮಾಡ್ತಿದ್ದ ಯಜಮಾನನ ಮನೆಯಲ್ಲೇ ಕನ್ನ:
ಪಶ್ಚಿಮ ಬಂಗಾಳದ ಬರ್ದ್ವಾನ್ ಮೂಲದ ಕೈಲಾಶ್ ದಾಸ್ ಎಂಬಾತ ಸಿನಿಕಾಣ್ ಸಿಟಿಯ ದಕ್ಷಿಣ ಭಾಗದ ಜೆಪಿ ನಗರದಲ್ಲಿ ಬಿಲ್ಡರ್ ರಾಜೇಶ್ ಬಾಬು ಅವರ ಮನೆಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಹೀಗಾಗಿ ಮನೆಯವರು ಆತನಿಗೆ ನೆಲಮಾಳಿಗೆಯಲ್ಲೇ ಇರಲು ರೂಮ್ ನೀಡಿದ್ದರು.

ಕೆಲವು ದಿನಗಳ ಹಿಂದೆ, ಕೊರೊನಾ ಇರುವುದು ದೃಢವಾದ್ದರಿಂದ ರಾಜೇಶ್ ಬಾಬು ಮತ್ತು ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಮನೆ ಕೆಲಸದ ಆಳು ಕೈಲಾಶ್ ದಾಸ್ ಮನೆಯಲ್ಲಿದ್ದ 1.3 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕದ್ದು ಮೈಸೂರಿಗೆ ಪರಾರಿಯಾಗಿದ್ದಾನೆ. ನಂತರ ಕೆಲ ದಿನಗಳ ಕಾಲ ಅಲ್ಲೇ ಲಾಡ್ಜ್​ನಲ್ಲಿ ತಲೆ ಮರಿಸಿಕೊಂಡಿದ್ದ. ನಂತರ ಚಿನ್ನವಿದ್ದ ಲಾಕರ್ ತೆರೆಯಲು ಪ್ರಯತ್ನಿಸಿದ್ದ. ತೆರೆಯಲಾಗದ ಕಾರಣ ತನ್ನ ಸ್ವಂತ ಊರಿಗೆ ತೆರಳಲು ಮತ್ತೆ ಬೆಂಗಳೂರಿಗೆ ಬಂದು ಯಶವಂತಪುದಿಂದ ರೈಲು ಹತ್ತಿದ್ದ.

ಕುಟುಂಬದ ದೂರಿನ ಮೇರೆಗೆ ಬೆನ್ನಟ್ಟಿದ ಪೊಲೀಸರು ಅನೇಕ ಕಡೆ ಸಿಸಿ ಟಿವಿ ಪರಿಶೀಲನೆ ನಡೆಸಿ ಕೊನೆಗೆ ಆತ ರೈಲು ಹತ್ತಿರುವುದು ತಿಳಿಯುತ್ತಿದ್ದಂತೆ ಅವನಿಗಿಂತ ಮುಂಚೆಯೇ ಹೋಗಲು ಪೊಲೀಸರು ವಿಮಾನ ಹಿಡಿದಿದ್ದಾರೆ. ಬಳಿಕ ಅವನು ಹತ್ತಿದ್ದ ರೈಲು ಹೌರಾ ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿಯುತ್ತಿದ್ದಂತೆ.. ಅವನಿಗಿಂತ ಮುಂಚೆ ಬಂದಿದ್ದ ಪೊಲೀಸರು ಚಾಣಾಕ್ಷತನದಿಂದ ಅವನನ್ನು ಲಾಖ್ ಮಾಡಿಕೊಂಡು..  ಬೆಂಗಳೂರಿಗೆ ಕರೆತಂದಿದ್ದಾರೆ.