ಪೋಸ್ಟ್ ಆಫೀಸ್ ಲೈಫ್ ಇನ್ಷೂರೆನ್ಸ್ (PLI) ಪಾಲಿಸಿದಾರರಿಗೆ ಸಂತೋಷ ನೀಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಪಾಲಿಸಿ ಮೇಲೆ ಎಷ್ಟು ಬೋನಸ್ ಬಂದಿದೆ ಎಂದು ಇಷ್ಟು ಸಮಯ ಇದ್ದ ಕುತೂಹಲ ಕೊನೆಯಾಗಿದೆ. 2020ರ ಮಾರ್ಚ್ ಕೊನೆಗೆ ಅನ್ವಯ ಆಗುವಂತೆ ಪೋಸ್ಟ್ ಆಫೀಸ್ ಲೈಫ್ ಇನ್ಷೂರೆನ್ಸ್ (PLI) ಬೋನಸ್ ಅನ್ನು ಸರ್ಕಾರದಿಂದ ಘೋಷಣೆ ಮಾಡಲಾಗಿದೆ. Whole Life Assurance ಮೇಲೆ ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 76 ರೂಪಾಯಿ ಬೋನಸ್ ಸಿಗುತ್ತದೆ. ಜಾಯಿಂಟ್ ಲೈಫ್ ಮತ್ತು ಮಕ್ಕಳ ಪಾಲಿಸಿಗಳು ಒಳಗೊಂಡಂತೆ ಎಂಡೋಮೆಂಟ್ ಅಶ್ಯೂರೆನ್ಸ್ ಗೆ ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 52 ರೂಪಾಯಿ ಬೋನಸ್ ಸಿಗುತ್ತದೆ.
ಪೋಸ್ಟ್ ಆಫೀಸ್ ಲೈಫ್ ಇನ್ಷೂರೆನ್ಸ್ನ ಆರು ಪಾಲಿಸಿಗಳಿವೆ. ಅವೆಲ್ಲವೂ ಸಾಂಪ್ರದಾಯಿಕ ಮಾದರಿಯಲ್ಲಿವೆ. ಯಾವುದೂ ಷೇರು ಮಾರುಕಟ್ಟೆಗೆ ಜೋಡಣೆಯಾದವಲ್ಲ. Whole Life Assurance (ಸುರಕ್ಷಾ), Endowment Assurance (ಸಂತೋಷ್), Convertible Whole Life Assurance (ಸುವಿಧಾ), Anticipated Endowment Assurance (ಸುಮಂಗಲ್), Joint Life Assurance (ಯುಗಲ್ ಸುರಕ್ಷಾ) ಮತ್ತು ಮಕ್ಕಳ ಪಾಲಿಸಿ (ಬಾಲ್ ಜೀವನ್ ಬಿಮಾ) ಇವೇ ಆರು ಪಾಲಿಸಿಗಳಿವೆ.
ಪಾಲಿಸಿ ಮೆಚ್ಯೂರಿಟಿ ಅಥವಾ ಇನ್ಷೂರ್ಡ್ ಆದ ವ್ಯಕ್ತಿಯು ಮೃತಪಟ್ಟಾಗ ಬೋನಸ್ ಪಾವತಿ ಮಾಡಲಾಗುತ್ತದೆ.
ಯಾವ ಪಾಲಿಸಿಗೆ ಎಷ್ಟು ಮೊತ್ತವನ್ನು ಸರ್ಕಾರ ಘೋಷಣೆ ಮಾಡಿದೆ?
ಸುರಕ್ಷಾ: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 76 ರೂಪಾಯಿ ಬೋನಸ್
ಸಂತೋಷ್ ಜಾಯಿಂಟ್ ಲೈಫ್ ಮತ್ತು ಮಕ್ಕಳ ಪಾಲಿಸಿಗಳು ಒಳಗೊಂಡಂತೆ: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 52 ರೂಪಾಯಿ ಬೋನಸ್
ಸುವಿಧಾ: ಸುರಕ್ಷಾ ಬೋನಸ್ ದರವೇ ಅನ್ವಯ ಆಗುತ್ತದೆ. ಆದರೆ ಕನ್ವರ್ಷನ್ನಿಂದಾಗಿ Endowment Assurance ದರ ಅನ್ವಯ ಆಗುತ್ತದೆ.
ಸುಮಂಗಲ್: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 48 ರೂಪಾಯಿ ಬೋನಸ್
Terminal Bonus ಇಪ್ಪತ್ತು ರೂಪಾಯಿಯನ್ನು ಸಮ್ ಅಶ್ಯೂರ್ಡ್ 10,000 ರೂಪಾಯಿಗೆ ನೀಡಲಾಗುತ್ತದೆ. ಎಂಡೋಮೆಂಟ್ ಪಾಲಿಸಿ ಇಪ್ಪತ್ತು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯ Whole Life Assurance ಮತ್ತು Endowment Assurance ಪಾಲಿಸಿಗಳಿಗೆ ಇದು ಅನ್ವಯ ಆಗುತ್ತದೆ.
ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳನ್ನು ಅಂಚೆ ಇಲಾಖೆಯು ನಿರ್ವಹಣೆ ಮಾಡುತ್ತದೆ. ಸರ್ಕಾರವೇ ಈ ಯೋಜನೆಗೆ ಖಾತ್ರಿ ಆಗಿರುತ್ತದೆ. 1894ರಿಂದ ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್ಗಳ ಉದ್ಯೋಗಿಗಳಿಗಾಗಿ ಅಂತಲೇ ಇತ್ತು. ಆದರೆ 2017ರ ನಂತರ ಬಿಎಸ್ಇ, ಎನ್ಎಸ್ಇ ಲಿಸ್ಟೆಡ್ ಕಂಪೆನಿಗಳ ಸಿಬ್ಬಂದಿ ಮತ್ತು ವಿವಿಧ ವೃತ್ತಿಪರರಿಗೂ ಮುಕ್ತವಾಯಿತು.
ಗ್ರಾಮೀಣ ಪೋಸ್ಟಲ್ ಲೈಫ್ ಇನ್ಷೂರೆನ್ಸ್ಗೆ ಹೆಚ್ಚುವರಿ ಬೋನಸ್ ಹೀಗಿದೆ:
ಸುರಕ್ಷಾ: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 60 ರೂಪಾಯಿ ಬೋನಸ್
ಸಂತೋಷ್ ಜಾಯಿಂಟ್ ಲೈಫ್ ಮತ್ತು ಮಕ್ಕಳ ಪಾಲಿಸಿಗಳು ಒಳಗೊಂಡಂತೆ: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 48 ರೂಪಾಯಿ ಬೋನಸ್
ಸುವಿಧಾ: ಸುರಕ್ಷಾ ಬೋನಸ್ ದರವೇ ಅನ್ವಯ ಆಗುತ್ತದೆ. ಆದರೆ ಕನ್ವರ್ಷನ್ ನಿಂದಾಗಿ Endowment Assurance ದರ ಅನ್ವಯ ಆಗುತ್ತದೆ.
ಸುಮಂಗಲ್: ಪ್ರತಿ ಒಂದು ಸಾವಿರ ರೂಪಾಯಿ ಸಮ್ ಅಶ್ಯೂರ್ಡ್ ಮೊತ್ತಕ್ಕೆ 45 ರೂಪಾಯಿ ಬೋನಸ್
Terminal Bonus ಇಪ್ಪತ್ತು ರೂಪಾಯಿಯನ್ನು ಸಮ್ ಅಶ್ಯೂರ್ಡ್ 10,000 ರೂಪಾಯಿಗೆ ನೀಡಲಾಗುತ್ತದೆ. ಎಂಡೋಮೆಂಟ್ ಪಾಲಿಸಿ ಇಪ್ಪತ್ತು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯ ಸುರಕ್ಷಾ ಮತ್ತು ಸಂತೋಷ್ ಜಂಟಿ ಜೀವ ವಿಮೆ ಮತ್ತು ಮಕ್ಕಳ ವಿಮೆ ಪಾಲಿಸಿಗಳಿಗೆ ಇದು ಅನ್ವಯ ಆಗುತ್ತದೆ.
ಇದನ್ನೂ ಓದಿ: ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್ ಉತ್ತಮ ಆಯ್ಕೆ