ಮಣ್ಣಿನಡಿ ಸಿಲುಕಿದ್ದ ಪೌರಕಾರ್ಮಿಕನ ರಕ್ಷಣೆ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ

ವಿಜಯಪುರ: ಒಳಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ ಅವಗಡ ಸಂಭವಿಸಿ ಮಣ್ಣು ಕುಸಿದು ಮಣ್ಣಿನಲ್ಲಿ ಸಿಲುಕಿದ್ದ ಪೌರಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಾರ್ಡ್ ನಂಬರ್ 17 ರಲ್ಲಿ ಈ ಘಟನೆ ಸಂಭವಿಸಿತ್ತು. ಅಶೋಕ ದೊಡಮನಿ (42) ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕ. ಕಾಮಗಾರಿ ವೇಳೆ ಅಶೋಕ್ ಮೇಲೆ ಮಣ್ಣು ಕುಸಿದಿತ್ತು. ಇತರ ಕಾರ್ಮಿಕರು ಜೆಸಿಬಿಯಿಂದ ಮಣ್ಣು ತೆರವು ಮಾಡಿ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಪರಿಣಾಮ ಆಶೋಕ್​ಗೆ ಗಾಯಗಳಾಗಿದ್ದು, ಅಸ್ವಸ್ಥನಾಗಿದ್ದಾನೆ. ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ […]

ಮಣ್ಣಿನಡಿ ಸಿಲುಕಿದ್ದ ಪೌರಕಾರ್ಮಿಕನ ರಕ್ಷಣೆ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ
Updated By: ಸಾಧು ಶ್ರೀನಾಥ್​

Updated on: Aug 24, 2020 | 11:07 AM

ವಿಜಯಪುರ: ಒಳಚರಂಡಿ ಕಾಮಗಾರಿ ಮಾಡುತ್ತಿದ್ದ ವೇಳೆ ಅವಗಡ ಸಂಭವಿಸಿ ಮಣ್ಣು ಕುಸಿದು ಮಣ್ಣಿನಲ್ಲಿ ಸಿಲುಕಿದ್ದ ಪೌರಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಾರ್ಡ್ ನಂಬರ್ 17 ರಲ್ಲಿ ಈ ಘಟನೆ ಸಂಭವಿಸಿತ್ತು. ಅಶೋಕ ದೊಡಮನಿ (42) ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕ. ಕಾಮಗಾರಿ ವೇಳೆ ಅಶೋಕ್ ಮೇಲೆ ಮಣ್ಣು ಕುಸಿದಿತ್ತು. ಇತರ ಕಾರ್ಮಿಕರು ಜೆಸಿಬಿಯಿಂದ ಮಣ್ಣು ತೆರವು ಮಾಡಿ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ.

ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಪರಿಣಾಮ ಆಶೋಕ್​ಗೆ ಗಾಯಗಳಾಗಿದ್ದು, ಅಸ್ವಸ್ಥನಾಗಿದ್ದಾನೆ. ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸದ್ಯ ಈಗ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇಂಡಿ ಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.