ಕೊರೊನಾ ಇಲ್ಲದಿದ್ರೂ ಕೊವಿಡ್ ಸೆಂಟರ್ಗೆ ಶಿಫ್ಟ್, ಇದೆಂಥ ಹಣ ಲಪಟಾಯಿಸೋ ಪ್ಲಾನ್!
ಬೆಂಗಳೂರು: ಕೊರೊನಾ ಸೋಂಕಿನ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪವು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಸಾರ್ವಜನಿಕರಿಗೆ ಪಾಸಿಟಿವ್ ಇಲ್ಲದಿದ್ರು ಕೊವಿಡ್ ಸೆಂಟರ್ಗಳಿಗೆ ಶಿಫ್ಟ್ ಮಾಡಲಾಗ್ತಿದೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಚೆಕ್ಅಪ್ ಕ್ಯಾಂಪ್ ಹೆಸರಲ್ಲಿ ಕೊವಿಡ್-19 ಟೆಸ್ಟ್ ಮಾಡುತ್ತಾರೆ. ಬಳಿಕ ನಮ್ಮನ್ನ ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಕೂಡಿಹಾಕುತ್ತಾರೆ. ಹಾಗೆಯೇ, ನಮ್ಮನ್ನ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್ನಲ್ಲಿ ಸುಮ್ಮನೆ ಕೂಡಿಹಾಕಿದ್ದಾರೆ ಎಂದು ಹಲವು ಸೋಂಕಿತರು ಆರೋಪ ಮಾಡಿದ್ದಾರೆ. ಚಿಕಿತ್ಸೆ ಕೊಡೋಕೆ ಯಾರೂ ಬರೋದಿಲ್ಲ. ಊಟ ತಿಂಡಿ ಸಹ […]

ಬೆಂಗಳೂರು: ಕೊರೊನಾ ಸೋಂಕಿನ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪವು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ. ಸಾರ್ವಜನಿಕರಿಗೆ ಪಾಸಿಟಿವ್ ಇಲ್ಲದಿದ್ರು ಕೊವಿಡ್ ಸೆಂಟರ್ಗಳಿಗೆ ಶಿಫ್ಟ್ ಮಾಡಲಾಗ್ತಿದೆ ಎಂಬ ಆರೋಪಗಳು ಸಹ ಕೇಳಿಬಂದಿದೆ.
ಚೆಕ್ಅಪ್ ಕ್ಯಾಂಪ್ ಹೆಸರಲ್ಲಿ ಕೊವಿಡ್-19 ಟೆಸ್ಟ್ ಮಾಡುತ್ತಾರೆ. ಬಳಿಕ ನಮ್ಮನ್ನ ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಕೂಡಿಹಾಕುತ್ತಾರೆ. ಹಾಗೆಯೇ, ನಮ್ಮನ್ನ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್ನಲ್ಲಿ ಸುಮ್ಮನೆ ಕೂಡಿಹಾಕಿದ್ದಾರೆ ಎಂದು ಹಲವು ಸೋಂಕಿತರು ಆರೋಪ ಮಾಡಿದ್ದಾರೆ.
ಚಿಕಿತ್ಸೆ ಕೊಡೋಕೆ ಯಾರೂ ಬರೋದಿಲ್ಲ. ಊಟ ತಿಂಡಿ ಸಹ ಚೆನ್ನಾಗಿ ಇರೋದಿಲ್ಲ. ಜೊತೆಗೆ, 100 ಜನರ ಇರಬೇಕಾದ ಕೋವಿಡ್ ಸೆಂಟರ್ನಲ್ಲಿ 300 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವೂ ಚೆನ್ನಾಗಿದ್ರು ನಮ್ಮನ್ನ ಕೂಡಿಹಾಕಿದ್ದಾರೆ.
ಅಧಿಕಾರಿಗಳು ದುಡ್ಡು ಹೊಡೆಯಲು ನಮ್ಮನ್ನ ತೋರಿಸ್ತಿದ್ದಾರೆ ಅಷ್ಟೇ. ನಮಗೆ ಪಾಸಿಟಿವ್ ಇದ್ಯಾ ಅಥವಾ ಇಲ್ಲ ಅನ್ನೋದರ ಬಗ್ಗೆ ಕೇಳಿದ್ರೆ ವರದಿ ಸಹ ಕೊಡ್ತಿಲ್ಲ ಎಂದು BBMP ಮತ್ತು ಆರೋಗ್ಯ ಇಲಾಖೆ ವಿರುದ್ಧ ಸೋಂಕಿತರು ಆರೋಪಿಸಿದ್ದಾರೆ. 
ವಾರ್ಡ್ನಲ್ಲಿರೋ 300 ಮಂದಿಗೂ ಒಂದೇ ಕಡೆ ಕುಡಿಯೋಕೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ, ಸೋಂಕಿನ ಗುಣಲಕ್ಷಣಗಳು ಇಲ್ಲದಿದ್ರೂ 10 ರಿಂದ 12 ದಿನಗಳ ಕಾಲ ಡಿಸ್ಚಾರ್ಜ್ ಮಾಡೋದಿಲ್ಲ. ನಮಗೆ ಊಟ, ತಿಂಡಿ ಮತ್ತು ಚಿಕಿತ್ಸೆಯ ಖರ್ಚು ಅಂತಾ ಸುಮ್ಮನೆ ಹಣ ನುಂಗೋ ಪ್ಲಾನ್ ಇದು ಎಂದು ಸೋಂಕಿತರು ತಮ್ಮ ಸಂಶಯ ಹೊರಹಾಕಿದ್ದಾರೆ.
ಯಾರಾದರೂ ರಿಪೋರ್ಟ್ ಕೊಡಿ ಅಂತಾ ಕೇಳಿದ್ರೆ ಅಂಥವರನ್ನ ಮಾತ್ರ ಡಿಸ್ಚಾರ್ಜ್ ಮಾಡ್ತಾರೆ. ಹೀಗಾಗಿ ಹಣ ಹೊಡೆಯೋಕೆ ಸುಮ್ಮನೆ ನೆಗೆಟಿವ್ ಇರೋ ಪೇಷಂಟ್ಗಳನ್ನು ಸಹ ಶಿಫ್ಟ್ ಮಾಡ್ತಿದ್ದಾರೆ.
ಸರ್ಕಾರ ಇದರ ಬಗ್ಗೆ ತನಿಖೆ ನಡೆಸಬೇಕು. ಸೋಂಕಿನ ಗುಣಲಕ್ಷಣಗಳು ಇಲ್ಲದವರು ಮನೆಯಲ್ಲೇ ಇರಬಹುದು. ಆದ್ರೆ ಇವರು ಯಾಕೆ ನಮ್ಮನ್ನ ಕೊವಿಡ್ ಕೇರ್ಗೆ ಶಿಫ್ಟ್ ಮಾಡ್ತಿದ್ದಾರೆ. ಇಲ್ಲಿ ದೊಡ್ಡ ಭ್ರಷ್ಟಚಾರವಾಗ್ತಿದೆ. ಇದಕ್ಕೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕಂತಾ ರೋಗಿಗಳು ಒತ್ತಾಯಿಸುತ್ತಿದ್ದಾರೆ.




