ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..

ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಸೇರಿ ಅನೇಕರು ಅತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪ್ರಶಾಂತ್​ ಅತ್ತಂತಾಗಿದೆ. 

ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..
ಪ್ರಶಾಂತ್​ ಸಂಬರಗಿ
Edited By:

Updated on: Mar 18, 2021 | 7:10 AM

ಬಿಗ್​ ಬಾಸ್​ ಮನೆ ಸೇರಿರುವ ಸ್ಟ್ರಾಂಗ್​ ಅಭ್ಯರ್ಥಿ ಯಾರು ಎಂದು ಕೇಳಿದರೆ ಬಹುತೇಕರು ಪ್ರಶಾಂತ್​ ಸಂಬರಗಿ ಅವರ ಹೆಸರನ್ನು ಹೇಳುತ್ತಾರೆ. ಇದನ್ನು ಅವರು ಟಾಸ್ಕ್​ ಮೂಲಕವೂ ಸಾಬೀತು ಮಾಡಿದ್ದಾರೆ. ಯಾವುದೇ ವಿಚಾರಕ್ಕೂ ಪ್ರಶಾಂತ್​ ಅವರು ಎಮೋಷನಲ್​ ಆಗಿಲ್ಲ. ಈ ಕಾರಣಕ್ಕೇ ಅವರು ಅನೇಕ ಟಾಸ್ಕ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆದರೆ, ಈಗ ಮಾತ್ರ ಅವರು ಹೆಂಡತಿಯನ್ನು ನೆನೆದು ಗಳಗಳನೆ ಅತ್ತಿದ್ದಾರೆ.

ಬಿಗ್​ ಬಾಸ್​ ಮನೆ ಸೇರಿದ ಸ್ಪರ್ಧಿಗಳು ಮೂರನೇ ವಾರವನ್ನು ಕಳೆಯುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಯಾರಿಗೂ ಹೊರ ಜಗತ್ತಿನ ಸಂಪರ್ಕ ಇಲ್ಲ. ಮನೆಯವರ ಜತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಇದೇ ವಿಚಾರಕ್ಕೆ ರಘು ತುಂಬಾನೇ ನೊಂದುಕೊ0ಡಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೂ ಬಂದಿದ್ದರು.

ಆದರೆ ಪ್ರಶಾಂತ್​ ಮಾತ್ರ ಒಂದೇ ಒಂದು ದಿನ ಮನೆಯವರನ್ನು ನೆನಪು ಮಾಡಿಕೊಂಡು ಅತ್ತಿಲ್ಲ. ಆದರೆ, ಬುಧವಾರ ಬಿಗ್​ ಬಾಸ್​ ಎದುರು ಪ್ರಶಾಂತ್​ ಅತ್ತಿದ್ದಾರೆ. ವಿಶೇಷ ರೂಂಗೆ ಬರುವಂತೆ ಪ್ರಶಾಂತ್​ಗೆ ಬಿಗ್​ ಬಾಸ್​ ಆಹ್ವಾನ ನೀಡಿದ್ದರು. ಈ ವೇಳೆ ನಿಮ್ಮ ಆರೋಗ್ಯ ಹೇಗಿದೆ ಎಂದು ಬಿಗ್​ ಬಾಸ್​ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್​ ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಏನಾದ್ರೂ ಹೇಳೋದಿದೆಯಾ ಎಂದು ಬಿಗ್​ ಬಾಸ್​ ಕೇಳಿದರು.

ಇದಕ್ಕೆ ಅಳುತ್ತಲೇ ಉತ್ತರಿಸಿದ ಪ್ರಶಾಂತ್​, ನನ್ನ ಪತ್ನಿ ಆಯುರ್ವೇದಿಕ್​ ವೈದ್ಯೆ. ಅವರಿಗೆ ನನ್ನ ಧ್ವನಿ ಹೋಗಿರುವುದು ನೋಡಿ ಔಷಧ ಕಳುಹಿಸಿಕೊಟ್ಟಿದ್ದಾರೆ. ಅವರು ಮನೆಯಲ್ಲೇ ಕೂತು ನನ್ನ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಇಷ್ಟು ದಿನ ಅವರ ನೆನಪು ಆಗುತ್ತಾ ಇರಲಿಲ್ಲ. ಈಗ ಔಷಧ ಕಳುಹಿಸಿಕೊಟ್ಟಿದ್ದರಿಂದ ಅವಳ ನೆನಪಾಗುತ್ತಿದೆ ಎಂದರು. ನಂತರ ಕಣ್ಣು ಒರಿಸಿಕೊಂಡು ಸುಧಾರಿಸಿಕೊಂಡರು.

ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಸೇರಿ ಅನೇಕರು ಅತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪ್ರಶಾಂತ್​ ಅತ್ತಂತಾಗಿದೆ. ಅಲ್ಲದೆ, ಅನೇಕರಿಗೆ ಈ ವಿಚಾರ ಅಚ್ಚರಿ ಕೂಡ ಮೂಡಿಸಿದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us