ಕೊವಿಡ್ ಟೆಸ್ಟ್ ಕಡ್ಡಾಯ, ಗರ್ಭಿಣಿಯರ ಪರದಾಟ

ಕೊವಿಡ್ ಟೆಸ್ಟ್ ಕಡ್ಡಾಯ, ಗರ್ಭಿಣಿಯರ ಪರದಾಟ

ಕೋಲಾರ: ಜಿಲ್ಲಾಸ್ಫತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಗರ್ಭಿಣಿ ಮಹಿಳೆಯರು ಪರದಾಡುತ್ತಿರುವ ಪರಿಸ್ಥಿತಿ ಕಂಡುಬಂದಿದೆ. ಪರೀಕ್ಷೆಗಾಗಿ ಗಂಟೆಗಟ್ಟಲೆ ಕಾದರೂ ಟೆಸ್ಟ್ ಮಾಡದೆ ಸಿಬ್ಬಂದಿ ಸತಾಯಿಸುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದ್ದಾರೆ.

ಬೆಳಗ್ಗೆ 9ಗಂಟೆಗೆ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯರು ಬಂದಿದ್ದಾರೆ. ಮಧ್ಯಾಹ್ನ 1 ಗಂಟೆಯಾದರೂ ಕೊರೊನಾ ಟೆಸ್ಟ್​ ಮಾಡಿಲ್ಲ. ಕೂರಲೂ‌ ವ್ಯವಸ್ಥೆಯಿಲ್ಲದೆ,  ತಿಂಡಿಯೂ ತಿನ್ನದೆ ತುಂಬು ಗರ್ಭಿಣಿ ಮಹಿಳೆಯರು ಕಂಗಾಲಾಗಿದ್ದಾರೆ.

ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವ ಟ್ರೂನೆಟ್ ಟ್ಯೂಬ್ ಸರಿಯಾಗಿ ಸರಬರಾಜಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗರ್ಭಿಣಿ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.