ಕೊರೊನಾ ಟೈಮಲ್ಲಿ ಸುಲಿಗೆಗೆ ಇಳಿದ ಕಾಲೇಜ್ ವಿರುದ್ಧ ಸ್ಟೂಡೆಂಟ್ಸ್ ಮಾಡಿದ್ದೇನು ಗೊತ್ತಾ?

ಕೊರೊನಾ ಟೈಮಲ್ಲಿ ಸುಲಿಗೆಗೆ ಇಳಿದ ಕಾಲೇಜ್ ವಿರುದ್ಧ ಸ್ಟೂಡೆಂಟ್ಸ್ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಬೇಕಿದ್ದ ಕೆಲ ಕಾಲೇಜುಗಳು ಸಹಾಯ ಮಾಡೋದು ಬಿಟ್ಟು ಸುಲಿಗೆಗೆ ಇಳಿದಿವೆ. ಇದರ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುವಂತಾಗಿದೆ.   ಹೌದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅಂತಾ ರಾಜ್ಯ ಸರ್ಕಾರ ಮಾಡಿದ ರೂಲ್ಸ್‌ಗೆ ಕೆಲವು ಖಾಸಗಿ ಕಾಲೇಜುಗಳು ಕ್ಯಾರೇ ಎನ್ನುತ್ತಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ನಗರದ ಈ ಪ್ರತಿಷ್ಠಿತ ಖಾಸಗಿ ಕಾಲೇಜು. ಕೊರೊನಾದಿಂದಾಗಿ ಆನ್​ಲೈನ್​ನಲ್ಲೇ ಕ್ಲಾಸ್‌ ಆರಂಭಿಸಿರುವ ಕಾಲೇಜು ವಿದ್ಯಾರ್ಥಿಗಳಿಗೆ ಫೀಸ್ ಕಟ್ಟುವಂತೆ ಒತ್ತಡ ಹೇರುತ್ತಿದೆ. ಅಂತಿಮ ದಿನಾಂಕದೊಳಗೆ ಫೀಸ್ ಕಟ್ಟದಿದ್ದರೆ […]

Guru

| Edited By:

Jul 30, 2020 | 2:58 PM

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಬೇಕಿದ್ದ ಕೆಲ ಕಾಲೇಜುಗಳು ಸಹಾಯ ಮಾಡೋದು ಬಿಟ್ಟು ಸುಲಿಗೆಗೆ ಇಳಿದಿವೆ. ಇದರ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುವಂತಾಗಿದೆ.

ಹೌದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅಂತಾ ರಾಜ್ಯ ಸರ್ಕಾರ ಮಾಡಿದ ರೂಲ್ಸ್‌ಗೆ ಕೆಲವು ಖಾಸಗಿ ಕಾಲೇಜುಗಳು ಕ್ಯಾರೇ ಎನ್ನುತ್ತಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ನಗರದ ಈ ಪ್ರತಿಷ್ಠಿತ ಖಾಸಗಿ ಕಾಲೇಜು. ಕೊರೊನಾದಿಂದಾಗಿ ಆನ್​ಲೈನ್​ನಲ್ಲೇ ಕ್ಲಾಸ್‌ ಆರಂಭಿಸಿರುವ ಕಾಲೇಜು ವಿದ್ಯಾರ್ಥಿಗಳಿಗೆ ಫೀಸ್ ಕಟ್ಟುವಂತೆ ಒತ್ತಡ ಹೇರುತ್ತಿದೆ. ಅಂತಿಮ ದಿನಾಂಕದೊಳಗೆ ಫೀಸ್ ಕಟ್ಟದಿದ್ದರೆ ಅನ್​ಲೈನ್ ಕ್ಲಾಸ್‌ಗಳಿಗೆ ಅನಮತಿ ನೀಡಲ್ಲ ಎಂದು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ.

ಇದರಿಂದ ಬೇಸತ್ತಿರುವ ಕಾಲೇಜಿನ ವಿದ್ಯಾರ್ಥಿಗಳು ಈಗ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಜಾಯಿಂಟ್ ಸ್ಟೂಡೆಂಟ್ ಆಫ್ ಕೌನ್ಸಿಲ್ ಎಂಬ ಹೆಸರಿನಲ್ಲಿ ತಮ್ಮ ತಮ್ಮ ಮನೆಯಲ್ಲಿ ಕುಳಿತು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿಭಿನ್ನ ಪ್ರತಿಭಟನೆ ಶುರುಮಾಡಿದ್ದಾರೆ. ತಾವು ಪ್ರತಿಭಟಿಸೋದು ಕಾಲೇಜು ಆಡಳಿತ ಮಂಡಳಿಗೆ ಗೊತ್ತಾದ್ರೆ ಅವರು ತಮ್ಮ ಮೇಲೆ ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಿಂದ ಮುಖಗಳಿಗೆ ವಿಭಿನ್ನ ರೀತಿಯ  ಮಾಸ್ಕ್ ಧರಿಸಿ ಕತ್ತಲಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada