ಸೋಂಕಿತ ಸತ್ತಮೇಲೆ ಹಣ ಪೀಕುತ್ತಿರುವ ಖಾಸಗಿ ಆಸ್ಪತ್ರೆ?
ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ನೆರವನ್ನು ಪಡೆದಿದೆ. ಜೊತೆಗೆ ಕೊವಿಡ್ ಚಿಕಿತ್ಸೆಯ ದರವನ್ನು ಸಹ ನಿಗದಿ ಮಾಡಿದೆ. ಆದರೆ, ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸುಲಿಗೆ ಮಾಡಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಜೂನ್ 14ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ರೋಗಿಯೊಬ್ಬರನ್ನ ಇದೇ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದ್ರೂ ಕೋವಿಡ್ ಆಸ್ಪತ್ರೆಗೆ ಆಡಳಿತ ಮಂಡಳಿ ಶಿಫ್ಟ್ […]
ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ನೆರವನ್ನು ಪಡೆದಿದೆ. ಜೊತೆಗೆ ಕೊವಿಡ್ ಚಿಕಿತ್ಸೆಯ ದರವನ್ನು ಸಹ ನಿಗದಿ ಮಾಡಿದೆ. ಆದರೆ, ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸುಲಿಗೆ ಮಾಡಲು ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.
ಜೂನ್ 14ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ರೋಗಿಯೊಬ್ಬರನ್ನ ಇದೇ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಬಳಿಕ ಆತನಿಗೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದ್ರೂ ಕೋವಿಡ್ ಆಸ್ಪತ್ರೆಗೆ ಆಡಳಿತ ಮಂಡಳಿ ಶಿಫ್ಟ್ ಮಾಡಲಿಲ್ಲ. ಪೇಷಂಟ್ ಆರೋಗ್ಯ ಸ್ಥಿತಿ ಸರಿ ಇಲ್ಲ ಅಂತಾ ಹೇಳಿ ಅಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದರು. ಆದರೆ, ಜೂನ್ 25 ರಂದು ಚಿಕಿತ್ಸೆ ಫಲಿಸದೆ, ಸೋಂಕಿತ ಮೃತಪಟ್ಟಿದ್ದರು.
3 ದಿನವಾದರೂ ಮೃತದೇಹ ಹಸ್ತಾಂತರ ಮಾಡದ ಆಸ್ಪತ್ರೆ? ಇದೀಗ ಸೋಂಕಿತ ಮೃತಪಟ್ಟು ಮೂರು ದಿನವಾದ್ರೂ ಮೃತದೇಹವನ್ನ ಆಸ್ಪತ್ರೆಯವರು ಹಸ್ತಾಂತರಿಸುತ್ತಿಲ್ಲವಂತೆ. ಬದಲಿಗೆ ಚಿಕಿತ್ಸೆಗೆ ತಗಲಿದ ಖರ್ಚೆಂದು ಒಟ್ಟು 2 ಲಕ್ಷದ 68 ಸಾವಿರದ 725 ರೂಪಾಯಿ ಬಿಲ್ ಮಾಡಿದ್ದಾರೆ. ಇನ್ಶೂರೆನ್ಸ್ನಿಂದ 1 ಲಕ್ಷದ 80 ಸಾವಿರದವರೆಗೂ ಕ್ಲೈಮ್ ಆಗಿದೆ. ಆದರೆ, ಉಳಿದ ಹಣವನ್ನು ಕಟ್ಟೋವರೆಗೂ ಮೃತದೇಹ ನೀಡುವುದಿಲ್ಲ ಎಂದು ಆಸ್ಪತ್ರೆಯವರು ಸತಾಯಿಸುತ್ತಿದ್ದಾರೆ ಎಂದು ಮೃತನ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಪರಿಪರಿಯಾಗಿ ಬೇಡಿದ್ರು ಮೃತದೇಹ ಬಿಬಿಎಂಪಿಗೂ ಹಸ್ತಾಂತರಿಸುತ್ತಿಲ್ಲ ಎಂದೂ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ನಾವು ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲುಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.