ಬೆಳಗಾವಿ: ಹೊಸಮನಿ ಆಸ್ಪತ್ರೆ ಬಳಿ ಜನ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಗೋಕಾಕ್ ನಗರದ ಹೊಸಮನಿ ಆಸ್ಪತ್ರೆ ಬಳಿ ನಡೆದಿದೆ. ಡಾ.ಮಹೇಶ್ ಹೊಸಮನಿ, ಡಾ. ಭಜಂತ್ರಿ ಮೇಲೆ ಹಲ್ಲೆ ನಡೆದಿದೆ.
ಹಳೇ ವೈಷಮ್ಯ, ಆಸ್ತಿ ವಿವಾದ ಹಿನ್ನೆಲೆ?
ಹಾಗೂ ಜಗಳ ಬಿಡಿಸಲು ಹೋದ ನರ್ಸ್ ಮೇಲೆಯೂ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಇಷ್ಟಲ್ಲಾ ಆದ್ರೂ ಕಾನ್ಸ್‌ಟೇಬಲ್ ಘಟನೆ ತಿಳಿಗೊಳಿಸಲಾಗಿಲ್ಲ. ಈ ಘಟನೆಯ ವಿಡಿಯೋ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳೇ ವೈಷಮ್ಯ, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೋಕಾಕ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.