ಪುನೀತ್ ಸರ್ ನಮಗೆಲ್ಲ ಪ್ರೇರಣೆಯಾಗಿದ್ದರು, ಅವರು ಮಾಡುವ ಕಸರತ್ತು ಕಲಿಸಬೇಕೆಂದು ದುಂಬಾಲು ಬೀಳುತ್ತಿದ್ದೆ: ಧ್ರುವ ಸರ್ಜಾ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 30, 2021 | 9:37 PM

ಕೇವಲ ಒಂದೂವರೆ ವರ್ಷಗಳಷ್ಟು ಹಿಂದೆ ಧ್ರುವ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಕುಟುಂಬ ಸದಸ್ಯನೊಬ್ಬನನ್ನು ಕಳೆದುಕೊಂಡಾಗ ಆಗುವ ನೋವೇನು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ.

ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಕೇವಲ ಸ್ಯಾಂಡಲ್ ವುಡ್ ನಟರು ಮಾತ್ರವಲ್ಲ, ಬೇರೆ ಚಿತ್ರರಂಗದ ಕಲಾವಿದರು ಸಹ ಬರುತ್ತಿದ್ದಾರೆ. ಶನಿವಾರ ಬೆಳಗ್ಗೆ ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದವರಲ್ಲಿ ಧ್ರುವ ಸರ್ಜಾ ಸಹ ಒಬ್ಬರು. ‘ಪೊಗರು’ ಚಿತ್ರದ ನಟ ತೀರಾ ಭಾವುಕರಾಗಿದ್ದರು. ಅಪ್ಪುಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ತಡೆತಡೆದು ಮಾತಾಡುತ್ತಿದ್ದರು ಮತ್ತು ಧ್ವನಿ ಗದ್ಗಿತವಾಗಿತ್ತು. ಯುವನಟರಿಗೆ ಪುನೀತ್ ಮಾದರಿಯಾಗಿದ್ದರು ಎಂದು ಅವರು ಹೇಳಿದರು.

ನಿಮಗೆ ನೆನಪಿರಬಹುದು, ಕೇವಲ ಒಂದೂವರೆ ವರ್ಷಗಳಷ್ಟು ಹಿಂದೆ ಧ್ರುವ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಕುಟುಂಬ ಸದಸ್ಯನೊಬ್ಬನನ್ನು ಕಳೆದುಕೊಂಡಾಗ ಆಗುವ ನೋವೇನು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ.

ಸುದ್ದಿ ಗೊತ್ತಾದಾಗ ಧ್ರುವ ಸಿನಿಮಾವೊಂದರ ಶೂಟಿಂಗ್ನಲ್ಲಿ ಮಗ್ನರಾಗಿದ್ದರಂತೆ. ‘ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಂತ ಮೊದಲು ಅಂದುಕೊಂಡಿದ್ದರೂ ಸತ್ತಿದ್ದು ನಿಜವೆಂದು ಗೊತ್ತಾದಾಗ ನಂಬುವುದು ಬಹಳ ಕಷ್ಟವಾಯಿತು. ಅವರು ಸಿಕ್ಕಾಗೆಲೆಲ್ಲ ಬರೀ ಜಿಮ್ ಮತ್ತು ವರ್ಕ್ ಔಟ್ ಬಗ್ಗೆಯೇ ಮಾತಿರುತಿತ್ತು. ಅವರು ಮಾಡುವ ಕಸರತ್ತುಗಳನ್ನು ಕಲಿಸಿ ಅಂತ ಅವರಿಗೆ ಹೇಳುತ್ತಿದ್ದೆ, ನೀವು ಸೂಪರ್ ಸ್ಟಾರ್, ನಿಮ್ಮಂತೆಯೇ ಫಿಟ್ನೆಸ್ ಕಾಯ್ದುಕೊಳ್ಳಬೇಕು ಅಂತ ಅವರಿಗೆ ಹೇಳುತ್ತಿದ್ದೆ. ನಮಗೆಲ್ಲ ಪ್ರೇರಣೆ ನೀವೇ ಅಂತ ನಾವೆಲ್ಲ ಅವರಿಗೆ ಹೇಳುತ್ತಿದ್ದೆವು. ಅವರು ನಿಧನ ಹೊಂದಿರುವುದು ಇಂಡಸ್ಟ್ರೀಗೆ ಬಹಳ ದೊಡ್ಡ ಹಾನಿ. ಶಿವಣ್ಣ ಮತ್ತು ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವಂಥ ಶಕ್ತಿ ನೀಡಲಿ ಅಂತ ದೇವರಲ್ಲಿ ಪ್ರಾರ್ಥಸುತ್ತೇನೆ,’ ಎಂದು ಧ್ರುವ ಸರ್ಜಾ ಹೇಳಿದರು.

ಇದನ್ನೂ ಓದಿ:  ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​