ದೇಶಕ್ಕೆಲ್ಲ ಉಪದೇಶ ನೀಡುವ ಕಾಂಗೈ ನಾಯಕ ನವಜೋತ್ ಸಿದ್ಧು ಸುಮಾರು ರೂ. 9 ಲಕ್ಷ ವಿದ್ಯುತ್ ಬಿಲ್ ಬಾಕಿಯುಳಿಸಿಕೊಂಡಿದ್ದಾರೆ!
ಅಂದಹಾಗೆ, ಬಾಯಿ ತೆರೆದರೆ ಶಾಯರಿ ಉದುರಿಸುವ ಮತ್ತು ಗಳಿಗೆಗೊಮ್ಮೆ ಇತರರಿಗೆ ಉಪದೇಶ ಮಾಡುವ ಅಮೃತ್ಸರ್ ಶಾಸಕ ಅಮೃತ್ಸರ್ನ ತಮ್ಮ ಮನೆಗೆ ವಿದ್ಯುಚ್ಛಕ್ತಿ ಪೂರೈಕೆ ಸಂಬಂಧಿಸಿದಂತೆ ಉಳಿಸಿಕೊಂಡಿರುವ ಬಾಕಿ ಎಷ್ಟು ಅಂತ ಗೊತ್ತಾ? ರೂ. 8,74,784!
ಚಂಡೀಗಡ್: ಗುರುವಾರದಂದು ನವದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯವನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿರುವ ಪಂಜಾಬಿನ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿದ್ಧು ತಲೆ ಕೊಂಬು ಮೂಡಿಸಿಕೊಂಡವರಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸರ್ಕಾರ ವಿರುದ್ಧ ಕೂಗಾಡುವುದನ್ನು ಪುನರಾರಂಭಿಸಿ, ರಾಜ್ಯದ ನಾನಾ ಭಾಗಗಳಲ್ಲಿ ಸರ್ಕಾರದ ಲೋಡ್ ಶೆಡ್ಡಿಂಗ್ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಅನುಕೂಲಸಿಂಧು ಸಿದ್ಧು ಮಹಾಶಯರು ಮರೆತಿರುವ ಅಥವಾ ಜನಕ್ಕೆ ನೆನಪಿರಲಾರದು ಅಂತ ಅಂದುಕೊಂಡಿರುವ ಅಂಶವೆಂದರೆ ಖುದ್ದು ಅವರೇ ಪಂಜಾಬ್ ವಿದ್ಯುಚ್ಛಕ್ತಿ ಮಂಡಳಿಗೆ ಭಾರೀ ಮೊತ್ತದ ಬಾಕಿಯುಳಿಸಿಕೊಂಡಿರುವುದು.
ಅಂದಹಾಗೆ, ಬಾಯಿ ತೆರೆದರೆ ಶಾಯರಿ ಉದುರಿಸುವ ಮತ್ತು ಗಳಿಗೆಗೊಮ್ಮೆ ಇತರರಿಗೆ ಉಪದೇಶ ಮಾಡುವ ಅಮೃತ್ಸರ್ ಶಾಸಕ ಅಮೃತ್ಸರ್ನ ತಮ್ಮ ಮನೆಗೆ ವಿದ್ಯುಚ್ಛಕ್ತಿ ಪೂರೈಕೆ ಸಂಬಂಧಿಸಿದಂತೆ ಉಳಿಸಿಕೊಂಡಿರುವ ಬಾಕಿ ಎಷ್ಟು ಅಂತ ಗೊತ್ತಾ? ರೂ. 8,74,784!
‘ಮಾರ್ಚ್ 2021 ರಲ್ಲಿ ಸಿದ್ಧು ಅವರು ಪಂಜಾಬ್ ರಾಜ್ಯ ವಿದ್ಯುಚ್ಛಕ್ತಿ ನಿಗಮಕ್ಕೆ (ಪಿಎಸ್ಪಿಎಲ್) ರೂ.17,62,742 ಬಾಕಿಯುಳಿಸಿಕೊಂಡಿದ್ದರು. ಆಗ, ಪಿಎಸ್ಪಿಎಎಲ್ ಬಾಕಿಯುಳಿಸಿಕೊಂಡಿರುವವರ ವಿರುದ್ಧ ಒಂದು ಅಭಿಯಾನವನ್ನು ನಡೆಸಿತ್ತು ಮತ್ತು ಸಿದ್ಧು ರೂ. 10ಲಕ್ಷ ಪಾವತಿಸಿದ್ದರು. ನಿಗಮಕ್ಕೆ ಅವರು ಇನ್ನೂ ರೂ. 8.74 ಲಕ್ಷ ಬಾಕಿಯುಳಿಸಿಕೊಂಡಿದ್ದಾರೆ,’ ಎಂದು ಪಿಎಸ್ಪಿಎಎಲ್ ಅಧೀಕ್ಷಕ ಎಂಜಿನೀಯರ್ ಜಿಎಸ್ ಖೈರಾ ಹೇಳಿದ್ದಾರೆ.
ಒಂದೇ ಸಲಕ್ಕೆ ಬಿಲ್ ಇತ್ಯರ್ಥಗೊಳಿಸುವುದಕ್ಕೆ ಸಿದ್ಧು ಅವರು ಅರ್ಜಿ ಸಲ್ಲಿಸಿದ್ದಾರೆ, ಸರ್ಚಾರ್ಜ್ಗಳ ಮೇಲೆ ಅವರು ಅನುಮಾನಗಳನ್ನು ವ್ಯಕ್ತಪಡಿಸಿದ್ದು ಅದರ ಪರಿಶೀಲನೆ ನಡೆಯುತ್ತಿದೆ, ಎಂದು ಖೈರಾ ಹೇಳಿದ್ದಾರೆ.
ವಿದ್ಯುತ್ ಬಿಲ್ ಮತ್ತು ರಾಜಕೀಯ ಪ್ರಭಾವ
ಪಿಎಸ್ಪಿಎಎಲ್ ಪಟಿಯಾಲಾದ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಸಿದ್ಧು ಬೇರೆಯವರಿಗೆ ಉಪದೇಶ ಮಾಡುವುದನ್ನು ಬಿಟ್ಟು ಬಾಕಿ ಚುಕ್ತಾ ಮಾಡಬೇಕೆಂದು ಹೇಳಿದ್ದಾರೆ. ‘ಬೇರೆಯವರಿಗೆ ಉಪದೇಶ ಮತ್ತು ಸಲಹೆ ನೀಡುವ ಮೊದಲು ತಮ್ಮ ಬಾಕಿಯನ್ನು ತೀರಿಸುವ ಯೋಚನೆಯನ್ನು ಸಿದ್ಧು ಮಾಡಬೇಕು. ಅತಿ ಕಡಿಮೆ ಮೊತ್ತ ಬಾಕಿಯುಳಿಸಿಕೊಂಡಿರುವವರ ಮನಗಳಿಗೆ ವಿದ್ಯುತ್ ಸರಬರಾಜನ್ನು ನಿಲ್ಲಿಸಲಾಗಿದೆ, ಆದರೆ ಸಿದ್ಧು ಅವರು ರಾಜಕೀಯ ಪ್ರಭಾವದಿಂದಾಗಿ ಇಲಾಖೆ ಅಂಥ ಕ್ರಮ ತೆಗೆದುಕೊಂಡಿಲ್ಲ,’ ಎಂದು ಅವರು ಹೇಳಿದ್ದಾರೆ.
ಪಿಎಸ್ಪಿಎಎಲ್ ಅಧಿಕಾರಿ ಹೇಳುವ ಪ್ರಕಾರ ಬಿಲ್ ಚುಕ್ತಾ ಮಾಡಲು ಜುಲೈ 2 ಕೊನೆಯ ದಿನವಾಗಿದೆ, ಅವರು ಪಾವತಿಸದಿದ್ದರೆ, ಇಲಾಖೆ ಕ್ರಮ ತೆಗೆದುಕೊಳ್ಳಲಿದೆ.
ಬಿಲ್ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ವಿರೋಧ ಪಕ್ಷ
ಈ ಸ್ಥಿತಿಯ ಸಂಪೂರ್ಣ ಲಾಭ ಮಾಡಿಕೊಳ್ಳಲು ಮುಂದಾಗಿರುವ ವಿರೋಧ ಪಕ್ಷದ ನಾಯಕರು ಸಿದ್ಧು ಅವರ ಪವರ್ ಬಿಲ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸಿದ್ಧು ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಮಾಡಿದ ಪ್ರಯತ್ನಗಳು ವಿಫಲಗೊಂಡವು. ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಕಾಕತಾಳೀಯವೆಂದರೆ, 2019ರಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಿದ್ಧುಗೆ ಸ್ಥಾನಿಕ ಸಂಸ್ಥೆಗಳ ಖಾತೆ ಬದಲಿಗೆ ಇಂಧನ ಖಾತೆಯನ್ನು ನೀಡಬಯಸಿದ್ದರು. ಆದರೆ ಅವರು ಕ್ರಮವನ್ನು ತನಗೆ ಹಿಂಬಡ್ತಿ ನೀಡುವ ಹುನ್ನಾರವೆಂದು ಹೇಳಿದ್ದ ಸಿದ್ಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರ ಬಂದಿದ್ದರು. ಕಳೆದ ಒಂದೂವರೆ ವರ್ಷದಿಂದ ಅವರು ತಮ್ಮದೇ ಸರ್ಕಾರದ ವಿರುದ್ಧ ದುಬಾರಿ ವಿದ್ಯುಚ್ಛಕ್ತಿ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸತತವಾಗಿ ಟೀಕಿಸುತ್ತಿದ್ದಾರೆ.
Published On - 6:41 pm, Fri, 2 July 21