ನವಜೋತ್ ಸಿದ್ಧು ಹಟಕ್ಕೆ ಹೈಕಮಾಂಡ್ ಮಣಿಯಿತೇ; ಮಾಜಿ ಕ್ರಿಕೆಟರ್​ಗೆ ಹೊಸ ಜವಾಬ್ದಾರಿ ನೀಡಲು ತಯಾರಿ?

ಪಕ್ಷದ ಕೆಲ ಧುರೀಣರು ಪ್ರಿಯಾಂಕಾ ಅವರನ್ನು ಟ್ರಬಲ್ ಶೂಟರ್ ಎಂದು ಬಣ್ಣಿಸುತ್ತಿರುವರಾದರೂ ಪಂಜಾಬನಲ್ಲಿ ಪಕ್ಷದ ಬಿಕ್ಕಟ್ಟಿಗೆ ಗಾಂಧಿಗಳಿಂದ ಆಗಿರುವ ಪ್ರಯೋಜನಗಳ ಬಗ್ಗೆ ಬಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಪಂಜಾಬಿನ ನಾಯಕರು ಸಿದ್ಧು ಅವರನ್ನು ಸಮಾಧಾನಗೊಳಿಸುವುದು ಸಮಸ್ಯೆಗೆ ಪರಿಹಾರವಾಗಲಾರದು ಎಂದು ಭಾವಿಸುತ್ತಿದ್ದಾರೆ.

ನವಜೋತ್ ಸಿದ್ಧು ಹಟಕ್ಕೆ ಹೈಕಮಾಂಡ್ ಮಣಿಯಿತೇ; ಮಾಜಿ ಕ್ರಿಕೆಟರ್​ಗೆ ಹೊಸ ಜವಾಬ್ದಾರಿ ನೀಡಲು ತಯಾರಿ?
ನವಜೋತ್ ಸಿಂಗ್ ಸಿಧು
Arun Belly

|

Jul 01, 2021 | 10:51 PM

ನವದೆಹಲಿ: ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರುದ್ದ ಕೊತಕೊತನೆ ಕುದಿಯುತ್ತಿರುವ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ಧು ಅವರು ಬುಧವಾರದಂದು ದೆಹಲಿಯಲ್ಲಿ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ನಂತರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು ಫಲಪ್ರದವಾಗಿರುವಂತೆ ಕಾಣುತ್ತಿದೆ. ನಂಬಲರ್ಹ ಮೂಲಗಳ ಪ್ರಕಾರ ಹೈಕಮಾಂಡ್ ಸೂತ್ರವೊಂದನ್ನು ಸಿದ್ಧಪಡಿಸಿದ್ದು, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥನ ಜವಾಬ್ದಾರಿಯನ್ನು ಮತ್ತೊಬ್ಬ ನಾಯಕನ ಜೊತೆ ಸಿದ್ಧು ಹಂಚಿಕೊಳ್ಳಲಿದ್ದಾರೆ. ಹಾಗೆಯೇ, ಅಮರಿಂದರ್ ಅವರ ಸಚಿಚ ಸಂಪುಟದಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆಯೂ ಇದೆ. ಆದರೆ ಪ್ರಿಯಾಂಕಾ ಅವರು ರಚಿಸಿರುವ ಈ ರಾಜಿ ಸೂತ್ರಕ್ಕೆ ರಾಹುಲ್ ಗಾಂಧಿ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಬುಧವಾರದಂದು ರಾಹುಲ್ ಅವರಿಂದ ಗದರಿಕೆಗೊಳಗಾಗಿದ್ದರು ಎಂಬ ಸುದ್ದಿಯ ಹಿನ್ನೆಲೆಯಲ್ಲೇ ಪ್ರಿಯಾಂಕಾ ಮಧ್ಯೆ ಪ್ರವೇಶಿಸಿ ಅವರಿಬ್ಬರ ನಡುವೆ ಮೀಟಿಂಗ್ ನಡೆಯುವ ಏರ್ಪಾಟು ಮಾಡಿದ್ದರು.

‘ಪ್ರಿಯಾಂಕಾ ಮತ್ತು ರಾಹುಲ್ ಅವರೊಂದಿಗೆ ನವಜೋತ್ ಭೇಟಿಯಾಗಿದ್ದು ಒಂದು ಉತ್ತಮ ಸಂಕೇತವಾಗಿದೆ ಮತ್ತು ಇದು ಪಂಜಾಬಿಲ್ಲಿ ನಡೆಯುತ್ತಿರುವ ತಿಕ್ಕಾಟವನ್ನು ಶಮನಗೊಳಿಸಲು ನೆರವಾಗಲಿದೆ, ನಾನಂದುಕೊಳ್ಳುವ ಹಾಗೆ ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ,’ ಎಂದು ಪಂಜಾಬನಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಹರೀಶ್ ರಾವತ್ ಹೇಳಿದ್ದಾರೆ.

ಪಕ್ಷದ ಕೆಲ ಧುರೀಣರು ಪ್ರಿಯಾಂಕಾ ಅವರನ್ನು ಟ್ರಬಲ್ ಶೂಟರ್ ಎಂದು ಬಣ್ಣಿಸುತ್ತಿರುವರಾದರೂ ಪಂಜಾಬನಲ್ಲಿ ಪಕ್ಷದ ಬಿಕ್ಕಟ್ಟಿಗೆ ಗಾಂಧಿಗಳಿಂದ ಆಗಿರುವ ಪ್ರಯೋಜನಗಳ ಬಗ್ಗೆ ಬಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಪಂಜಾಬಿನ ನಾಯಕರು ಸಿದ್ಧು ಅವರನ್ನು ಸಮಾಧಾನಗೊಳಿಸುವುದು ಸಮಸ್ಯೆಗೆ ಪರಿಹಾರವಾಗಲಾರದು ಎಂದು ಭಾವಿಸುತ್ತಿದ್ದಾರೆ. ಕೆಲವರಂತೂ ಹೈಕಮಾಂಡ್ನ ಈ ಕ್ರಮ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದುಬಾರಿಯಾಗಬಹುದು ಅಂತ ಹೇಳುತ್ತಿದ್ದಾರೆ.

ಬುಧವಾರದಂದು ರಾಹುಲ್ ಅವರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿದ್ದ ಸಿದ್ಧು ಅವರಿಗೆ ವಯನಾಡ್ ಸಂಸದ ಭೇಟಿ ನಿರಾಕರಿಸಿದ ನಂತರ ಅವರು ಪ್ರಿಯಾಂಕಾರನ್ನು ಭೇಟಿಯಾಗಿ ಸಮಾರು 4 ತಾಸು ಮಾತುಕತೆ ನಡೆಸಿದ್ದರು. ಅದಾದ ನಂತರ ರಾಹುಲ ತಮ್ಮ ವರಸೆ ಬದಲಿಸಿ ಸಿದ್ಧುರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು. ಈ ಇಬ್ಬರ ನಡುವೆ ನಡೆದ ಮಾತುಕತೆಯನ್ನು ‘ಸಂತೈಸುವಿಕೆಯ ಸಭೆ’ ಎಂದು ಕರೆಯಲಾಗುತ್ತಿದೆ.

ಮೂಲಗಳ ಪ್ರಕಾರ ಬುಧವಾರ, ಪ್ರಿಯಾಂಕಾ ಅವರು, ಸಿದ್ಧು ಅವರನ್ನು ತಮ್ಮ ಮನೆಯಲ್ಲಿ ಕುಳ್ಳಿರಿಸಿ ರಾಹುಲ್ ಮನೆಗೆ ಬಂದು ಅವರನ್ನು ಮತ್ತು ತನ್ನ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತಾಡಿದ್ದರು. ಅವರು ವಾಪಸ್ಸು ಹೋಗುವವರಗೆ ಸಿದ್ಧು ಮನೆಯಲ್ಲೇ ಕಾಯುತ್ತಿದ್ದರು. ಅಂತಿಮವಾಗಿ ರಾಹುಲ್, ಪಂಜಾಬಿನ ರೆಬೆಲ್ ನಾಯಕನನ್ನು ಭೇಟಿಯಾಗಲು ನಿರ್ಧರಿಸಿದರು. ಇಲ್ಲಿ ನೆನಪಿಸಿಕೊಳ್ಳಬೇಕಾದ ಸಂಗತಿಯೇನೆಂದರೆ, ಕಳೆದ ವಾರ ಅಮರಿಂದರ್ ಅವರು ದೆಹಲಿಗೆ ಗಾಂಧಿಗಳನ್ನು ಕಾಣಲೆಂದು ಬಂದರೂ ಅವರಿಗೆ ಅವಕಾಶ ನೀಡಿರಲಿಲ್ಲ.

ಅಮರಿಂದರ್ ಮತ್ತು ಸಿದ್ಧು ಇಬ್ಬರೂ ಸೋನಿಯಾ ಗಾಂಧಿ ರಚಿಸಿರುವ ಮೂರು ಸದಸ್ಯರ ಸಮಿತಿಯನ್ನು ಭೇಟಿ ಮಾಡಿದ್ದಾರೆ. ಸಮಿತಿ ಸದಸ್ಯರೊಬ್ಬರು,‘‘ಸಿದ್ಧು ನಮ್ಮೆಲ್ಲರಿಗಿಂತ ಉನ್ನತ ಸ್ಥಾನದಲ್ಲಿರುವುದಾಗಿ ಭಾವಿಸುತ್ತಾರೆ ಮತ್ತು ಗಾಂಧಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ,’ ಎಂದು ಹೇಳಿದ್ದರು.

ಮೂಲಗಳ ಪ್ರಕಾರ ತನ್ನ ಬಾಸ್ (ಮುಖ್ಯಮಂತ್ರಿ ಸಿಂಗ್) ಅವರಿಂದ ನಾನ್-ಪರ್ಫಾಮರ್ ಎಂದು ತೆಗಳಿಸಿಕೊಂಡಿರುವ ಮತ್ತು 2015ರ ಗುರು ಗ್ರಂಥ್ ಸಾಹಿಬ್ ಅಪವಿತ್ರಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಯಕರನ್ನು ಮುಖ್ಯಮಂತ್ರಿಗಳ ವಿರುದ್ಧ ಎತ್ತಿಕಟ್ಟುತ್ತಿರುವ ಒಬ್ಬ ನಾಯಕನನ್ನು ಗಾಂಧಿಗಳು ರಕ್ಷಿಸುತ್ತಿದ್ದಾರೆ.

2017ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಅಗಿದ್ದ ಸಿದ್ಧು ನಂತರ ಅಮರಿಂದರ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಎರಡು ವರ್ಷಗಳ ನಂತರ ಅಮರಿಂದರ್ ಅವರು ಸಿದ್ಧುಗೆ ಹಿಂಬಡ್ತಿ ನೀಡಿದ ಹಿನ್ನೆಲೆಯಲ್ಲಿ ಸಿಡಿದೆದ್ದು ಸಂಪುಟದಿಂದ ಹೊಬಂದಿದ್ದರು.

ಸುದೀರ್ಘ ಸಮಯದವೆರೆಗೆ ಮೌನವಾಗಿದ್ದ ಸಿದ್ಧು ಕೆಲ ತಿಂಗಳುಗಳಿಂದ ಅಮರಿಂದರ್ ವಿರುದ್ಧ ಕತ್ತಿ ಮಸೆಯುವುದನ್ನು ಆರಂಭಿಸಿ ಸತತವಾಗಿ ಟೀಕಿಸುತ್ತಿದ್ದಾರೆ. ಸೋನಿಯಾ ಗಾಂಧಿಯವರಿಗೆ ಟ್ರಬಲ್ ಶೂಟರ್​ಗಳಾಗಿ ಅಹ್ಮದ್ ಪಟೇಲ್ ಮತ್ತು ಅಂಬಿಕಾ ಸೋನಿ ಅವರಂಥ ಅನುಭವಿ ರಾಜಕಾರಣಿಗಳ ಸಾಥ್ ಇತ್ತು, ಆದರೆ, ಅವರ ಮಕ್ಕಳಿಗೆ ಇಲ್ಲ.

‘ಗಾಂಧಿಗಳು ಕೇವಲ ಸಿದ್ಧು ಜತೆ ಮಾತಾಡುವ ಬದಲು ಪಂಜಾಬಿನಲ್ಲಿರುವ ಬೇರೆ ಜನರನ್ನು ಸಂಪರ್ಕಿಸಬೇಕಿತ್ತು. ಸಿದ್ಧು ಪಕ್ಷಕ್ಕೆ ಹೊರೆಯಾಗಿದ್ದರೂ, ಚುನಾವಣಾ ವರ್ಷದಲ್ಲಿ ಸರ್ಕಾರವನ್ನು ಪದೇಪದೆ ಪೇಚಿಗೆ ಸಿಕ್ಕಿಸುತ್ತಿರುವ ನಾಯಕನನ್ನು ಬಿಟ್ಟುಕೊಡುವುದು ಸಾಧುವಲ್ಲ ಎಂದು ಅವರು ಭಾವಿಸಿದಂತಿದೆ,’ ಎಂದು ಪಕ್ಷದ ಒಬ್ಬ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ: ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada