ಶಿಷ್ಟಾಚಾರದಂತೆಯೇ ಜಯಚಂದ್ರರನ್ನು ಕರೆಯುವ ಅಗತ್ಯವಿಲ್ಲ: ಅಶೋಕ್ ತಿರುಗೇಟು

ಶಿಷ್ಟಾಚಾರದಂತೆಯೇ ಜಯಚಂದ್ರರನ್ನು ಕರೆಯುವ ಅಗತ್ಯವಿಲ್ಲ: ಅಶೋಕ್ ತಿರುಗೇಟು

ತುಮಕೂರು‌: ಜಿಲ್ಲೆಯ ಶಿರಾ ಪಟ್ಟಣದ ಮಿನಿ ವಿಧಾನಸೌಧ ಉದ್ಘಾಟನೆ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಜಯಚಂದ್ರರನ್ನ ಕರೆಯಬೇಕೆಂಬ ಯಾವುದೇ ಪ್ರೋಟೋಕಾಲ್ ಇಲ್ಲ. ಕಟ್ಟಡ ಉದ್ಘಾಟನೆ ರೊಟೀನ್ ಪ್ರೋಸಸ್. TB ಜಯಚಂದ್ರ ಅವರು MLA ಅಲ್ಲ. ಪ್ರೋಟೋಕಾಲ್ ಪ್ರಕಾರ ಏನೂ ಅಲ್ಲ. ಹಾಗಾಗಿ, ಶಿಷ್ಟಾಚಾರದಂತೆ ಜಯಚಂದ್ರರನ್ನು ಕರೆಯುವ ಅಗತ್ಯವಿಲ್ಲ ಎಂದು ಅಶೋಕ್ ಹೇಳಿದ್ದಾರೆ.

‘ನಾವು ಬಸ್ ನಿಲ್ದಾಣ ಕಟ್ಟಿದ್ದಿವಿ.. ಕಾಂಗ್ರೆಸ್ ಸರ್ಕಾರ ಉದ್ಘಾಟನೆ ಮಾಡಿದ್ರು’
ನಮ್ಮ ಸರ್ಕಾರ ಇದ್ದಾಗ ಹಲವು ಬಸ್ ನಿಲ್ದಾಣಗಳನ್ನ ಕಟ್ಟಿದ್ವಿ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಅವುಗಳನ್ನ ಉದ್ಘಾಟನೆ ಮಾಡಿದ್ರು. ಸರ್ಕಾರಕ್ಕೆ ಇರೋದು ಕೇವಲ 5 ವರ್ಷ. ಜೀವನ ಪರ್ಯಂತ ಯಾರೂ ಇರೋಕೆ ಆಗಲ್ಲ. ಕಾನೂನು ಸಚಿವರಾಗಿದ್ದವರಿಗೆ ಕಾನೂನು ಎಲ್ಲಾ ಗೊತ್ತಿರುತ್ತದೆ. ಎಲ್ಲವನ್ನೂ ಪ್ರೋಟೋಕಾಲ್ ಪ್ರಕಾರ ಮಾಡಲಾಗಿದೆ. ಯಾರೋ ಬರ್ತಾರೆ ಅಂತಾ ಕಾದು ಲೋಕಾರ್ಪಣೆ ಮಾಡದೇ ಇರೋಕೆ ಆಗಲ್ಲ ಅಂತಾ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಬೈಎಲೆಕ್ಷನ್​ ಮೇಲೆ ಕೈ-ಕಮಲದ ಕಣ್ಣು: ಉದ್ಘಾಟನೆ ಆಯ್ತು ‘ರಾಜಕೀಯ ರಣಾಂಗಣ’!

‘ದೇಶದಲ್ಲೂ ಮತ್ತು ರಾಜ್ಯದಲ್ಲೂ ಕಾಂಗ್ರೆಸ್ ಇವತ್ತು ಬೊರ್ಡ್​ಗಿಲ್ಲ’
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹಣ ಬಿಡುಗಡೆ ವಿಚಾರವಾಗಿ ನಾನು ಪೊಲಿಟಿಕಲ್ ಮಾತನಾಡೋಕೆ ಹೋಗಲ್ಲ. ಎಲ್ಲಾ ಸರ್ಕಾರ ಮಾಡೋದನ್ನೇ ನಾವು ಮಾಡ್ತಾ ಇರೋದು. ನಮಗೆ ಗಿಮಿಕ್ ಮಾಡಿ ಅಭ್ಯಾಸ ಇಲ್ಲ. ಕಾಂಗ್ರೆಸ್ ಇವತ್ತು ಬೊರ್ಡ್​ಗಿಲ್ಲ. ದೇಶದಲ್ಲೂ ಮತ್ತು ರಾಜ್ಯದಲ್ಲೂ ಬೊರ್ಡ್​ಗಿಲ್ಲ. ಅದರಿಂದಾಗಿ ಅವರಿಗೆ ಭ್ರಮನಿರಸನ ಆಗಿರಬೇಕು. ನಮಗೇನು ಆಗಿಲ್ಲ ಅಂತಾ ಅಶೋಕ್​ ಹೇಳಿದ್ದಾರೆ. ದೇಶದಲ್ಲೇ ಕಾಂಗ್ರೆಸ್ ಕಾಣೆಯಾಗಿದೆ. ಮೊದಲು ಅವರ ಪಕ್ಷಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲಿ. ಆ ಬಳಿಕ ಬೇರೆಯವರಿಗೆ ಬುದ್ಧಿವಾದ ಹೇಳುವುದಕ್ಕೆ ಹೋಗಲಿ ಎಂದು ಕಾಂಗ್ರೆಸ್​ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

‘ಡ್ರಗ್ಸ್​ ಜಾಲದಲ್ಲಿ ರಾಜಕೀಯದವರ ಮಕ್ಕಳಿರೋದು ಕಂಡು ಬಂದಿಲ್ಲ’
ರಾಜ್ಯದ ಡ್ರಗ್ ಮಾಫಿಯಾ ವಿಚಾರವಾಗಿ ಮಾತನಾಡಿದ ಅಶೋಕ್​ ನಮ್ಮ ಗೃಹ ಸಚಿವರು ಸಮರ್ಥರಿದ್ದಾರೆ. ಎಲ್ಲವನ್ನೂ ಜಾಲಾಡ್ತಾ ಇದ್ದಾರೆ. ಹಿಂದಿನ ಸರ್ಕಾರ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನ ಮುಂದುವರಿಸಿ ಕೆಲಸ ಮಾಡ್ತಾ ಇದ್ದಾರೆ. ಡ್ರಗ್ಸ್ ಜಾಲದಲ್ಲಿ ರಾಜಕೀಯದವರ ಮಕ್ಕಳಿರೋದು ಕಂಡು ಬಂದಿಲ್ಲ. ಯಾರೇ ಇದ್ದರೂ ಕ್ರಮ ಕೈಗೊಳ್ತೇವೆ. ಕಾನೂನು ಎಲ್ಲರಿಗೂ ಒಂದೇ. ನಾನು ಯಾರ ಹೆಸರೂ ಹೇಳೋಕೆ ಇಷ್ಟಪಡಲ್ಲ. ಸರ್ಕಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿದೆ ಎಂದು ಶಿರಾದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

Click on your DTH Provider to Add TV9 Kannada