ಇವೆಲ್ಲಾ ಸರ್ವೇ ಸಾಮಾನ್ಯ -Drug peddler ಜೊತೆಗಿನ ಫೋಟೋ ಬಗ್ಗೆ ಅಶೋಕ್​ ಉತ್ತರ

ಬೆಂಗಳೂರು: ಡ್ರಗ್ ಪೆಡ್ಲರ್ ರಾಹುಲ್ ಜೊತೆ ತೆಗೆಸಿಕೊಂಡಿರುವ ಫೋಟೋ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾಮಕರಣ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ನಾಮಕರಣ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಫೋಟೋ. ಇವೆಲ್ಲಾ ಸರ್ವೆ ಸಾಮಾನ್ಯವೆಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿ ಎಲ್ಲರ ಜೊತೆ ಆತನ ಫೋಟೋಗಳಿವೆ. ಪ್ರಶಾಂತ್ ಸಂಬರಗಿಯ ಜೊತೆಯೂ ಫೋಟೋ ಇದೆ. ಸಾರ್ವಜನಿಕ ಬದುಕಿನಲ್ಲಿದ್ದಾಗ ಫೋಟೋ ತೆಗೆಸಿಕೊಳ್ತಾರೆ. ಫೋಟೋ ತೆಗೆಸಿಕೊಳ್ಳದಿದ್ದರೆ ಗರ್ವ ಎಂದು ಹೇಳುತ್ತಾರೆ. ಆದರೆ ರಾಹುಲ್‌ಗೂ ನನಗೂ ಯಾವುದೇ ಸಂಬಂಧವಿಲ್ಲ […]

ಇವೆಲ್ಲಾ ಸರ್ವೇ ಸಾಮಾನ್ಯ -Drug peddler ಜೊತೆಗಿನ ಫೋಟೋ ಬಗ್ಗೆ ಅಶೋಕ್​ ಉತ್ತರ

Updated on: Sep 14, 2020 | 2:29 PM

ಬೆಂಗಳೂರು: ಡ್ರಗ್ ಪೆಡ್ಲರ್ ರಾಹುಲ್ ಜೊತೆ ತೆಗೆಸಿಕೊಂಡಿರುವ ಫೋಟೋ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾಮಕರಣ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ನಾಮಕರಣ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಫೋಟೋ. ಇವೆಲ್ಲಾ ಸರ್ವೆ ಸಾಮಾನ್ಯವೆಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿ ಎಲ್ಲರ ಜೊತೆ ಆತನ ಫೋಟೋಗಳಿವೆ. ಪ್ರಶಾಂತ್ ಸಂಬರಗಿಯ ಜೊತೆಯೂ ಫೋಟೋ ಇದೆ. ಸಾರ್ವಜನಿಕ ಬದುಕಿನಲ್ಲಿದ್ದಾಗ ಫೋಟೋ ತೆಗೆಸಿಕೊಳ್ತಾರೆ.

ಫೋಟೋ ತೆಗೆಸಿಕೊಳ್ಳದಿದ್ದರೆ ಗರ್ವ ಎಂದು ಹೇಳುತ್ತಾರೆ. ಆದರೆ ರಾಹುಲ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

‘ಶಾಸಕ ಜಮೀರ್ ಅಹ್ಮದ್ ಎಲ್ಲಾ ವಿಷಯದಲ್ಲೂ ಇರ್ತಾರೆ’
ಶಾಸಕ ಜಮೀರ್ ಅಹ್ಮದ್ ಎಲ್ಲಾ ವಿಷಯದಲ್ಲೂ ಇರ್ತಾರೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಘಟನೆಯಲ್ಲಿಯೂ ಇದ್ದರು. ರಾಮಮಂದಿರದ ವಿಚಾರದಲ್ಲಿಯೂ ಅವರು ಬರುತ್ತಾರೆ. ಮುಸ್ಲಿಂ ನಾಯಕನಾಗಬೇಕೆಂದು ಅವರ ತಲೆಯಲ್ಲಿ ಬಂದಿದೆ. ಜಾಫರ್ ಷರೀಫ್ ಬಳಿಕ ಅವರೇ ಲೀಡರ್ ಆಗಬೇಕೆಂದು ಎಲ್ಲಾ ವಿಚಾರಗಳನ್ನ ತಮ್ಮ ಮೈಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ಶಾಸಕ ಜಮೀರ್​ ಕುರಿತು ಹೇಳಿಕೆ ನೀಡಿದ್ದಾರೆ.

ಜೊತೆಗೆ, ನಾನು ನನ್ನ ಜೀವನದಲ್ಲಿ ಇಸ್ಪೀಟ್ ಎಲೆಯನ್ನೇ ನೋಡಿಲ್ಲ. ಇನ್ನು ಕ್ಯಾಸಿನೋ ಏನು ನೋಡಲಿ ಎಂದು ಆರ್.ಅಶೋಕ್ ಸಹ ಹೇಳಿದ್ದಾರೆ.

Published On - 2:15 pm, Mon, 14 September 20