ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್ ಇನ್ನು ಬಿಗ್ ಬಾಸ್ ಮನೆಯಲ್ಲಿ ಬೌಂಡರಿ ಸಿಕ್ಸರ್ ಬಾರಿಸಲು ಮುಂದಾಗಿದ್ದಾರೆ. ರಾಜೀವ್ ಹನು, CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು. ಹಾಗೆಂದು, ರಾಜೀವ್ ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಉತ್ತಮ ನಟರೂ ಹೌದು. ಅಮವಾಸೆ, ಆರ್ಎಕ್ಸ್ ಸೂರಿ, ಬೆಂಗಳೂರು 560023, ಜಿಂದಗಿ ಸಿನಿಮಾಗಳಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ದರ್ಶನ್ ಅಭಿನಯದ ಸ್ನೇಹನಾ ಪ್ರೀತಿನಾ ಸಿನಿಮಾದಲ್ಲೂ ರಾಜೀವ್ ಮಿಂಚಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ಸ್ಪರ್ಧಿಯಾಗಿ ರಾಜೀವ್ ಮನೆ ಪ್ರವೇಶಿಸಿದ್ದಾರೆ.
ರಾಜೀವ್ ಕ್ರಿಕೆಟ್ ಆಟಗಾರ ಎಂಬ ಕಾರಣದಿಂದ ಅವರ ಸ್ಪರ್ಧಾತ್ಮಕ ವ್ಯಕ್ತಿತ್ವವನ್ನು ನಾವು ಕಾಣಬಹುದು. ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯಿಂದ ಬಿಗ್ ಬಾಸ್ ಮನೆಯ ಆಟಗಳಲ್ಲಿ ಅವರು ಮುಂಚೂಣಿಯ ಸ್ಪರ್ಧಿಯಾಗುವ ನಿರೀಕ್ಷೆ ಇದೆ. ಯಂಗ್ ಅಂಡ್ ಎನರ್ಜಿಟಿಕ್ ಕಂಟೆಸ್ಟೆಂಟ್ ಆಗಿರುವ ರಾಜೀವ್, ಬಿಗ್ ಬಾಸ್ ಪಟ್ಟ ಗೆಲ್ಲುತ್ತಾರಾ ಎಂದು ಕಾದುನೋಡಬೇಕಿದೆ.
ರಾಜೀವ್ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಸಿನಿಮಾಗಳ ಹೆಸರು ಸೇರಿಸಿ ದೀರ್ಘ ಸಂಭಾಷಣೆಯೊಂದನ್ನು ಹೇಳಿದ್ದಾರೆ. ಸುದೀಪ್ ಸಿನಿಮಾಗಳಿಗೆ ಅಭಿಮಾನಿಯೊಬ್ಬನ ಕೊಡುಗೆ ಇದು ಎಂದು ರಾಜೀವ್ ಹೇಳಿದ್ದಾರೆ.
ಬಿಗ್ ಬಾಸ್ ವೀಕ್ಷಣೆ ಮಾಡೋದು ಎಲ್ಲಿ?
ಭಾನುವಾರ ಸಂಜೆ 6 ಗಂಟೆಗೆ ಬಿಗ್ ಬಾಸ್ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ 8 ಪ್ರಸಾರವಾಗುತ್ತದೆ. ಆನ್ಲೈನ್ನಲ್ಲಿ ಬಿಗ್ ಬಾಸ್ ನೋಡಬೇಕು ಎಂದಾದರೆ ನೀವು ವೂಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್ ಬಾಸ್ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್ ಕನ್ನಡ ಎಂದು ಸರ್ಚ್ ಮಾಡಿದರೆ ಕಲರ್ಸ್ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್ ಬಾಸ್ ವೀಕ್ಷಿಸಬಹುದು.
ಇದನ್ನೂ ಓದಿ: Bigg Boss Kannada 8 Launch LIVE Updates: 16ನೇ ಸ್ಪರ್ಧಿಯಾಗಿ ರಾಜೀವ್ ಬಿಗ್ ಬಾಸ್ ಮನೆಗೆ ಎಂಟ್ರಿ
Divya Uruduga Profile: ಬಿಗ್ ಬಾಸ್ ಮನೆಯ 15ನೇ ಸ್ಪರ್ಧಿಯಾಗಿ ನಟಿ ದಿವ್ಯಾ ಉರುಡುಗ ಪ್ರವೇಶ
Published On - 10:39 pm, Sun, 28 February 21