Bigg Boss Kannada 8 Launch LIVE Updates: 17ನೇ ಸ್ಪರ್ಧಿಯಾಗಿ ನಿರ್ಮಲಾ ಚೆನ್ನಪ್ಪ​​ ಬಿಗ್​ ಬಾಸ್​ ಮನೆಗೆ ಎಂಟ್ರಿ

Bigg Boss Kannada 2021 Grand Opening LIVE Updates: ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ನಿಜವಾಗಿಯೂ ಯಾರು ಮನೆ ಒಳಗೆ ಹೋಗುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. 

Bigg Boss Kannada 8 Launch LIVE Updates: 17ನೇ ಸ್ಪರ್ಧಿಯಾಗಿ ನಿರ್ಮಲಾ ಚೆನ್ನಪ್ಪ​​ ಬಿಗ್​ ಬಾಸ್​ ಮನೆಗೆ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್​ 8

| Edited By: ganapathi bhat

Apr 06, 2022 | 7:36 PM

Bigg Boss Kannada Season 8 Launch LIVE Updates: ಕರ್ನಾಟಕದ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ 8ನೇ ಆವೃತ್ತಿ (Bigg Boss Kannada Season 8) ಇಂದು ಸಂಜೆ 6 ಗಂಟೆಗೆ ಉದ್ಘಾಟನೆಗೊಂಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಿರೂಪಕರಾಗಿ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಬಿಗ್ ಬಾಸ್ 8ರಲ್ಲಿ ಯಾರೆಲ್ಲಾ ಕಂಟೆಸ್ಟೆಂಟ್​ಗಳಾಗಿ ಬರುತ್ತಾರೆ? ಏನೇನು ವಿಶೇಷತೆ ಇರುತ್ತೆ ಎಂದು ತಿಳಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ನಿಜವಾಗಿಯೂ ಯಾರು ಮನೆ ಒಳಗೆ ಹೋಗುತ್ತಾರೆ ಎನ್ನುವುದಕ್ಕೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿದೆ ಉತ್ತರ. 

ಇಂದು ಸಂಜೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಬಿಗ್ ಬಾಸ್ ಸೀಸನ್ 8ರ (Bigg Boss Kannada 8 Contestants) ಮನೆಯೊಳಗೆ ಯಾರು ಹೋಗಲಿದ್ದಾರೆ ಎಂಬ ಸಾವಿರಾರು ಜನರ ಕುತೂಹಲ ತಣಿಯುವ ಕ್ಷಣ ಬಂದೇಬಿಟ್ಟಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಟ ಸುದೀಪ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ. ಪ್ರತಿ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಅವರ ಪರಿಚಯ ನೀಡಿ, ಮನೆ ಒಳಗೆ​ ಕಳುಹಿಸುವ ಕೆಲಸವನ್ನು ಸುದೀಪ್​ ಮಾಡಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಬಿಗ್​ ಬಾಸ್​ ಕಾರ್ಯಕ್ರಮ ನಡೆಯಲಿದೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದರ ಜತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ.

LIVE NEWS & UPDATES

The liveblog has ended.
 • 28 Feb 2021 10:49 PM (IST)

  17ನೇ ಸ್ಪರ್ಧಿಯಾಗಿ ನಿರ್ಮಲಾ ಚೆನ್ನಪ್ಪ​​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಬಹುಪ್ರತಿಭಾನ್ವಿತ ನಿರ್ಮಲಾ ಚೆನಪ್ಪ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರಾಗಿ ಭಾಗವಹಿಸುತ್ತಿದ್ದಾರೆ. ಅವರು 2012 ರಲ್ಲಿ ತಲ್ಲಣ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮೂಲತಃ ಮಧ್ಯಮ ವರ್ಗದಿಂದ ಬಂದಿರುವ ಚೆನ್ನಪ್ಪ ತಮ್ಮ ಪಧವಿ ಶಿಕ್ಷಣವನ್ನು ಮುಗಿಸಿದ್ದಾರೆ. ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮ ನೆಲೆಕಂಡುಕೊಂಡಿರುವ ಈ ನಟಿ, ಕನ್ನಡದ ಖ್ಯಾತ ಬರಹಗಾರ ಪೂರ್ಣ ಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕಾದಂಬರಿ ಆಧಾರಿತ ಚಿತ್ರಕ್ಕೆ ಡಬ್ಬಿಂಗ್​ ಕಲಾವಿದೆಯಾಗಿ ಸಹ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ 17ನೇ ಅಭ್ಯರ್ಥಿಯಾಗಿ ನಿರ್ಮಲಾ ಮನೆಗೆ ಆಗಮಿಸಿದ್ದಾರೆ.

 • 28 Feb 2021 10:36 PM (IST)

  16ನೇ ಸ್ಪರ್ಧಿಯಾಗಿ ರಾಜೀವ್​​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್ ಇನ್ನು ಬಿಗ್ ಬಾಸ್ ಮನೆಯಲ್ಲಿ ಬೌಂಡರಿ ಸಿಕ್ಸರ್ ಬಾರಿಸಲು ಮುಂದಾಗಿದ್ದಾರೆ. ರಾಜೀವ್ ಹನು, CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು. ಹಾಗೆಂದು, ರಾಜೀವ್ ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಉತ್ತಮ ನಟರೂ ಹೌದು. ಅಮವಾಸೆ, ಆರ್​ಎಕ್ಸ್ ಸೂರಿ, ಬೆಂಗಳೂರು 560023, ಜಿಂದಗಿ ಸಿನಿಮಾಗಳಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ದರ್ಶನ್ ಅಭಿನಯದ ಸ್ನೇಹನಾ ಪ್ರೀತಿನಾ ಸಿನಿಮಾದಲ್ಲೂ ರಾಜೀವ್ ಮಿಂಚಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8ರ … ಸ್ಪರ್ಧಿಯಾಗಿ ರಾಜೀವ್ ಮನೆ ಪ್ರವೇಶಿಸಿದ್ದಾರೆ.

 • 28 Feb 2021 10:23 PM (IST)

  15ನೇ ಸ್ಪರ್ಧಿಯಾಗಿ ದಿವ್ಯ ಉರುಡುಗ​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಧಾರಾವಾಹಿಗಳಲ್ಲಿ ನಟಿಸಿದ ದಿವ್ಯಾ ಉರುಡುಗ ಅವರು ಈಗ ಬಿಗ್​ ಬಾಸ್​ ಮನೆಗೆ 15ನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ಹುಲಿರಾಯ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

 • 28 Feb 2021 10:05 PM (IST)

  14ನೇ ಸ್ಪರ್ಧಿಯಾಗಿ ಪ್ರಶಾಂತ್​ ಸಂಬರ್ಗಿ​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಈ ಬಾರಿಯ ಕನ್ನಡ ಬಿಗ್​ಬಾಸ್​ಗೆ ಹೋಗುವ ಸೆಲೆಬ್ರೆಟಿಸ್​ಗಳ ಪಟ್ಟಿಯಲ್ಲಿ ಎದ್ದು ಕಾಣುತ್ತಿರುವ ಹೆಸರೆಂದರೆ ಅದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಂಬರಗಿ, ಈಗ ಬಿಗ್​ಬಾಸ್ ಮನೆಗೆ ಹೋಗಿ ಮತ್ತ್ಯಾವ ವಿವಾದ ಸೃಷ್ಟಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದು ಕುಳಿತ್ತಿದ್ದಾರೆ. ಮೂಲತಃ ಬೆಳಗಾವಿಯವರಾಗಿರುವ ಸಂಬರಗಿ, ಬೆಳೆದಿದ್ದು ಬೆಂಗಳೂರಿನಲ್ಲಿ. ಪ್ರಶಾಂತ್ ಉದ್ಯಮಿ ಆಗಿದ್ದು, ಅರ್ಜುನ್ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಡಬ್ಬಿಂಗ್ ಪರ ಹೋರಾಡಿದವರಲ್ಲಿ ಪ್ರಶಾಂತ್ ಕೂಡ ಪ್ರಮುಖರು. ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಸೀಸನ್ 8ರ 14ನೇ ಅಭ್ಯರ್ಥಿಯಾಗಿ ಮನೆ ಪ್ರವೇಶಿಸಿದ್ದಾರೆ.

 • 28 Feb 2021 09:54 PM (IST)

  ಬಿಗ್​ ಬಾಸ್​ ಅಭ್ಯರ್ಥಿ ರಘು ಗೌಡ ಫ್ರೊಫೈಲ್​

 • 28 Feb 2021 09:52 PM (IST)

  13ನೇ ಸ್ಪರ್ಧಿಯಾಗಿ ರಘು ಗೌಡ​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ರಘು ಗೌಡ.. ಯೂಟ್ಯೂಬ್​ ಹಾಗೂ ಸಾಮಾಜಿಕ ಜಾಲತಾಣವನ್ನು ಫಾಲೋ ಮಾಡುವವರು ಈ ಹೆಸರನ್ನು ಕೇಳಿಯೇ ಇರುತ್ತಾರೆ. ರಘು ವೈನ್​ ಸ್ಟೋರ್​ ಹೆಸರಿನ ಯೂಟ್ಯೂಬ್​ ಚಾನೆಲ್​ ಮೂಲಕವೇ ಖ್ಯಾತಿ ಪಡೆದವರು ರಘು. ಅವರು ಈಗ ಅಭ್ಯರ್ಥಿಯಾಗಿ ಕನ್ನಡದ ಬಿಗ್​ ಬಾಸ್​ 8 ಮನೆ ಒಳಗೆ ತೆರಳಿದ್ದಾರೆ.

 • 28 Feb 2021 09:35 PM (IST)

  12ನೇ ಸ್ಪರ್ಧಿಯಾಗಿ ಚಂದ್ರಕಲಾ ಮೋಹನ್​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಕನ್ನಡ ಕಿರುತೆರೆ ಪ್ರೇಕ್ಷಕರು ಒಂದು ದಿನವೂ ತಪ್ಪಿಸಲು ಇಷ್ಟಪಡದೆ, ಆಸಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳ ಪೈಕಿ ಪುಟ್ಟಗೌರಿ ಮದುವೆ ಕೂಡ ಸ್ಥಾನ ಪಡೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪುಟ್ಟಗೌರಿ ಮದುವೆ ಎಂದು ಹೆಸರು ಹೇಳ ಹೊರಟರೆ ಸಾಕು, ಧಾರಾವಾಹಿ ಶೀರ್ಷಿಕೆ ಗೀತೆಯೇ ಮನದಲ್ಲಿ ಕೇಳಲಾರಂಭಿಸುತ್ತದೆ. ಅಂಥಾ ಅಭಿಮಾನ ಗಳಿಸಿದ್ದ ಧಾರಾವಾಹಿಯಲ್ಲಿ ಜನರ ಪ್ರೀತಿ ಪಡೆದ ಮುಖ್ಯ ಪಾತ್ರ ಎಂದರೆ ಅದು ಅಜ್ಜಮ್ಮ. ಚಂದ್ರಕಲಾ ಮೋಹನ್ ಎಂದರೆ ಯಾರೆಂದು ಗೊತ್ತಾಗುತ್ತೋ ಇಲ್ಲವೋ, ಆದರೆ ಅಜ್ಜಮ್ಮ ಎಂದರೆ ಎಲ್ಲರಿಗೂ ಗೊತ್ತು. ಪುಟ್ಟಗೌರಿ ಮದುವೆಯ ಅಜ್ಜಮ್ಮ ಈಗ ಬಿಗ್ ಬಾಸ್ ಸ್ಪರ್ಧಿ. ಬಿಗ್ ಬಾಸ್ ಕನ್ನಡದ 12ನೇ ಅಭ್ಯರ್ಥಿಯಾಗಿ ಅವರು ಮನೆ ಪ್ರವೇಶಿಸಿದ್ದಾರೆ.

 • 28 Feb 2021 09:23 PM (IST)

  11ನೇ ಸ್ಪರ್ಧಿಯಾಗಿ ದಿವ್ಯ ಸುರೇಶ್​ ಬಿಗ್​ ಬಾಸ್​ ಮನೆಗೆ ಎಂಟ್ರಿ

  ದಿವ್ಯಾ ಸುರೇಶ್​ ಅವರು ಬಿಗ್​ ಬಾಸ್​ ಮನೆಗೆ 11ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಇವರು ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಹೆಬ್ಬುಲಿ ಸಿನಿಮಾದಲ್ಲಿ ಸುದೀಪ್​ಗೆ ತಂಗಿಯಾಗಿ ಇವರು ನಟಿಸಬೇಕಿತ್ತು.. ಆದರೆ, ಈ ಅವಕಾಶವನ್ನು ಕಾರಣಾಂತರಗಳಿಂದ ಇವರು ನಿರಾಕರಿಸಿದ್ದರು.

 • 28 Feb 2021 09:05 PM (IST)

  10ನೇ ಸ್ಪರ್ಧಿಯಾಗಿ ಮಂಜು ಪಾವಗಡ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಮನೋರಂಜನಾ ಕಾರ್ಯಕ್ರಮ ಮಜಾ ಭಾರತ ಖ್ಯಾತಿಯ ಮಂಜು ಪಾವಗಡ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಹೆಚ್ಚಾಗಿ ಲಾಗ್ ಮಂಜು ಎಂದು ಪ್ರಸಿದ್ಧಿ ಪಡೆದಿರುವ ಮಂಜು, ತಮ್ಮ ವಿಭಿನ್ನ ಡೈಲಾಗ್​ಗಳಿಂದ ಜನರಲ್ಲಿ ಹೆಚ್ಚು ಮನೆಮಾತಾಗಿದ್ದಾರೆ. ಮಜಾ ಭಾರತ ಕಾರ್ಯಕ್ರಮದಲ್ಲಿ ಮಿಂಚುತ್ತಿರುವ ಮಂಜು ಪಾವಗಡ ಸ್ಯಾಂಡಲ್‌ವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವುದಲ್ಲದೆ ಕೆಲವು ಚಿತ್ರಗಳಲ್ಲಿ ತಮ್ಮ ಕಾಮಿಡಿ ಮೂಲಕ ಜನರ ಹೃದಯ ಗೆಲ್ಲುವ ಯತ್ನದಲ್ಲಿದ್ದಾರೆ. ಬಿಗ್ ಬಾಸ್ ಮನೆಯ — ಕಂಟೆಸ್ಟೆಂಟ್​ ಆಗಿ ಪ್ರವೇಶ ಪಡೆದಿದ್ದಾರೆ.

 • 28 Feb 2021 08:56 PM (IST)

  ಗುಂಡಮ್ಮ ಗೀತಾ ಪ್ರೊಫೈಲ್​

 • 28 Feb 2021 08:55 PM (IST)

  ಬ್ರೋ ಗೌಡ ಪ್ರೊಫೈಲ್​

 • 28 Feb 2021 08:51 PM (IST)

  ಒಂಬತ್ತನೇ ಅಭ್ಯರ್ಥಿಯಾಗಿ ಗೀತಾ ಭಾರತಿ ಭಟ್‌ ಬಿಗ್​ ಬಾಸ್​ ಮನೆಗೆ ಎಂಟ್ರಿ

  ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಕಥೆಯುಳ್ಳ ಬ್ರಹ್ಮಗಂಟು ಧಾರಾವಾಹಿ ಮೂಲಕ ಗುಂಡಮ್ಮನೆಂದೆ ಫೇಮಸ್‌ ಆದ ನಟಿ ಗೀತಾ ಭಾರತಿ ಭಟ್‌ ಅವರು ಈ ಬಾರಿ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಕೇವಲ ಕಿರುತೆರೆಯಲ್ಲದೆ, ಹಿರಿತರೆಯಲ್ಲೂ ಗೀತಾ ತಮ್ಮ ಛಾಪೂ ಮೂಡಿಸಿದ್ದಾರೆ. ಈತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದ ಲವ್‌ ಮಾಕ್‌ಟೇಲ್ ಚಿತ್ರದಲ್ಲಿ ಗೀತಾ ಒಂದು ಚಿಕ್ಕ ಪಾತ್ರ ಮಾಡಿ ಮಿಂಚಿದ್ದರು.​ ಗೀತಾ ಬಿಗ್ ಬಾಸ್ ಕನ್ನಡ ಸೀಸನ್ 8 ಮನೆಗೆ 9ನೇ ಅಭ್ಯರ್ಥಿಯಾಗಿ ಆಗಮಿಸಿದ್ದಾರೆ.

 • 28 Feb 2021 08:29 PM (IST)

  ಬಿಗ್​ ಬಾಸ್​ 8ನೇ ಅಭ್ಯರ್ಥಿಯಾಗಿ ಬ್ರೋ ಗೌಡ

  ಕನ್ನಡ ಬಿಗ್​ಬಾಸ್​ 8ನೇ ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಹೊಸ ಮುಖ ಎಂದರೆ ಅದು ಸಿಂಗರ್ ಶಮಂತ್​ ಗೌಡ​ (​ಬ್ರೋ ಗೌಡ). ಮೂಲತಃ ಬೆಂಗಳೂರಿನವರಾಗಿರುವ ಬ್ರೋ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಯುವ ಪೀಳಿಗೆಗೆ ತಮ್ಮ ಮೋಟಿವೇಷನಲ್​ ಮಾತುಗಳಿಂದ ಪ್ರೇರೆಪಿಸುತ್ತಿರುತ್ತಾರೆ. ಚಲನ ಚಿತ್ರ ರಂಗದಲ್ಲಿ ಸಕ್ರಿಯರಾಗಿರುವ ಶಮಂತ್​ಗೌಡ ನಟನೆಯ ಜೊತೆಗೆ ನಿರ್ದೇಶಕ ಹಾಗೂ ಸಿಂಗರ್​ ಆಗಿಯು ತಮ್ಮ ಪ್ರತಿಭೆ ತೋರಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ 8ನೇ ಅಭ್ಯರ್ಥಿಯಾಗಿ ಬ್ರೋ ಗೌಡ ಮನೆ ಪ್ರವೇಶಿಸಿದ್ದಾರೆ.

 • 28 Feb 2021 08:19 PM (IST)

  ನಿಧಿ ಸುಬ್ಬಯ್ಯ ಪ್ರೊಫೈಲ್​

 • 28 Feb 2021 08:16 PM (IST)

  ಅರವಿಂದ್​ ಕೆ.ಪಿ. ಪ್ರೊಫೈಲ್​

 • 28 Feb 2021 08:10 PM (IST)

  ಏಳನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ನಿಧಿ ಸುಬ್ಬಯ್ಯ

  ಏಳನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ನಿಧಿ ಸುಬ್ಬಯ್ಯ ಎಂಟ್ರಿ ಕೊಟ್ಟಿದ್ದಾರೆ. 2010ರಲ್ಲಿ ತೆರೆಕಂಡ ಪಂಚರಂಗಿ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ತುಂಬಾನೇ ಹವಾ ಸೃಷ್ಟಿಸಿತ್ತು. ಯೋಗರಾಜ್​ ಭಟ್​ ನಿರ್ದೇಶನದ ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿತ್ತು. ನಟಿ ನಿಧಿ ಸುಬ್ಬಯ್ಯಾಗೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ನಂತರ ಕೃಷ್ಣನ್​ ಮ್ಯಾರೇಜ್​ ಸ್ಟೋರಿ, ಅಣ್ಣಾ ಬಾಂಡ್​ ಸಿನಿಮಾದಲ್ಲೂ ನಿಧಿ ನಟಿಸಿದ್ದರು. ನಂತರ ನಿಧಿ ಮುಂಬೈಗೆ ಹಾರಿದರು. ಕೆಲ ಬಾಲಿವುಡ್​ ಚಿತ್ರಗಳಲ್ಲೂ ಅವರು ನಟಿಸಿ, ಮತ್ತೆ ಸ್ಯಾಂಡಲ್​​ವುಡ್​ಗೆ ಮರಳಿದ್ದರು. ಆಯುಷ್ಮಾನ್​ ಭವ ಅವರ ನಟನೆಯ ಕೊನೆಯ ಚಿತ್ರ.

 • 28 Feb 2021 07:51 PM (IST)

  6ನೇ ಅಭ್ಯರ್ಥಿ ಬೈಕ್​ ರೇಸರ್​ ಅರವಿಂದ್​

  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಮನೆಗೆ ಉಡುಪಿ ಮೂಲದವರಾದ ಅರವಿಂದ್ ಕೆ.ಪಿ, ಪ್ರವೇಶ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ವತ್ತಿಪರ ಬೈಕರ್ ಆಗಿ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರ್ಯಾಲಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಟಿವಿಎಸ್ ರೇಸಿಂಗ್ ತಂಡದ ರೈಡರ್ ಅರವಿಂದ್ ಈ ಬಾರಿಯ ಬಿಗ್​ಬಾಸ್​ ಪ್ರಶಸ್ತಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

 • 28 Feb 2021 07:43 PM (IST)

  ವೈಷ್ಣವಿ ಗೌಡ ಪ್ರೊಫೈಲ್​

 • 28 Feb 2021 07:40 PM (IST)

  ಐದನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ ವೈಷ್ಣವಿ ಗೌಡ

  ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದ ನಟಿ ವೈಷ್ಣವಿ ಗೌಡ ಈಗ ಬಿಗ್​ ಬಾಸ್​ ಮನೆಗೆ ಐದನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ನೋಡೋಕೆ ತುಂಬಾನೇ ಸೈಲೆಂಟ್​ ಆಗಿ ಇರುವ ಇವರು ಬಿಗ್​ ಬಾಸ್​ ಮನೆಯಲ್ಲಿ ಹೇಗಿರುತ್ತಾರೆ ಎನ್ನುವ ಕುತೂಹಲ ಸದ್ಯದ್ದು.

 • 28 Feb 2021 07:23 PM (IST)

  ನಾಲ್ಕನೇ ಅಭ್ಯರ್ಥಿಯಾಗಿ ಹಾಡು ಕರ್ನಾಟಕ ಹಾಡು ವಿಶ್ವ ಎಂಟ್ರಿ

  ಧಾರವಾಡ ಮೂಲದ ವಿಶ್ವ ಅವರು ಕನ್ನಡ ಬಿಗ್​ ಬಾಸ್​ ನಾಲ್ಕನೇ ಅಭ್ಯರ್ಥಿಯಾಗಿ ಬಿಗ್​ ಬಾಸ್​ ಸೀಸನ್​8ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಹಾಡು ಕರ್ನಾಟಕ ಹಾಡು ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಇವರು ತಮ್ಮ ಅದ್ಭುತ ಕಂಠದ ಮೂಲಕವೇ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ. ಇವರ ವಯಸ್ಸು ಕೇವಲ 19 ವರ್ಷ. ಇವರು ಬಿಗ್​ ಬಾಸ್​ ಮನೆ ಸೇರುತ್ತಿರುವ ಅತ್ಯಂತ ಕಿರಿಯ ಅಭ್ಯರ್ಥಿ.

 • 28 Feb 2021 07:04 PM (IST)

  ವೇದಿಕೆ ಮೇಲೆ ಶಂಕರ್​ ಅಶ್ವತ್ಥ್​ ಕಣ್ಣೀರು

  ವೇದಿಕೆಯ ಮೇಲೆಯೇ ಶಂಕರ್​ ಅಶ್ವತ್ಥ್​ ಭಾವುಕರಾಗಿದ್ದಾರೆ. ವೇದಿಕೆಯ ಮೇಲೆ ಸುದೀಪ್​ ಜತೆ ಮಾತನಾಡುತ್ತಲೇ ಶಂಕರ್ ಅಶ್ವತ್ಥ್​ ಅತ್ತಿದ್ದಾರೆ. ತಮ್ಮ ಕಥೆಯನ್ನು ಹೇಳುತ್ತಾ ಅಶ್ವತ್ಥ್​ ಭಾವುಕರಾಗಿದ್ದಾರೆ.

 • 28 Feb 2021 06:58 PM (IST)

  ಮೂರನೇ ಸ್ಪರ್ಧಿಯಾಗಿ ಬಿಗ್​ ಬಾಸ್​ ಮನೆಗೆ ತೆರಳಿದ ಶಂಕರ್​ ಅಶ್ವತ್ಥ್​

  ಕೆ.ಎಸ್​ ಅಶ್ವಥ್​ ಅವರ ಮಗ ಶಂಕರ್​ ಅಶ್ವತ್ಥ್​ ಈಗ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಇವರು ಸ್ಯಾಂಡಲ್​ವುಡ್​ನ ಹಿರಿಯ ನಟನಾಗಿದ್ದು, ಅವಕಾಶ ಸಿಗದೆ ಕ್ಯಾಬ್​ ಓಡಿಸಿ ಸುದ್ದಿಯಾಗಿದ್ದರು. ಈಗ ಅವರು ಬಿಗ್​ ಬಾಸ್​ ಹಿರಿಯ ಅಭ್ಯರ್ಥಿಯಾಗಿ ಬಿಗ್​ ಬಾಸ್ ಮನೆ ಪ್ರವೇಶಿಸಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೆ ಇವರು ಮಾರ್ಗದರ್ಶಕರಾಗಲಿದ್ದಾರೆ.

 • 28 Feb 2021 06:58 PM (IST)

  ಶುಭಾ ಪೂಂಜಾ ಪ್ರೊಫೈಲ್​

 • 28 Feb 2021 06:45 PM (IST)

  ಬಿಗ್​ ಬಾಸ್​ ಕಂಟೆಸ್ಟೆಂಟ್ ನಂಬರ್ 2

 • 28 Feb 2021 06:41 PM (IST)

  ಶುಭಾ ಪೂಂಜಾ ಪ್ರೊಫೈಲ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ...

  Shubha Poonja Profile: ಮಾದಕ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ!

 • 28 Feb 2021 06:37 PM (IST)

  ಮದುವೆಗೂ ಮೊದಲು ಬಿಗ್ ಬಾಸ್​ ಮನೆ ಪ್ರವೇಶಿಸಿದ ಶುಭಾ ಪೂಂಜಾ

  ಶುಭಾ ಪೂಂಜಾ ಈ ವರ್ಷ ಮದುವೆ ಆಗುತ್ತಿದ್ದಾರೆ. ಇದಕ್ಕೂ ಮೊದಲು ಅವರು ಬಿಗ್​ ಬಾಸ್​ ಸೀಸನ್​ 8 ಮನೆಗೆ ಬರುತ್ತಿದ್ದಾರೆ. ಶುಭಾಗೆ ಏಳೂ ಸೀಸನ್​ಗಳಲ್ಲಿ ಸ್ಪರ್ಧಿಯಾಗಲು ಅವಕಾಶ ಸಿಕ್ಕಿತ್ತು. ಆದರೆ, ಇದನ್ನು ಶುಭಾ ತಿರಸ್ಕರಿಸಿದ್ದರು. ಶುಭಾ ಅವರನ್ನು ಮದುವೆ ಆಗುತ್ತಿರುವವರು ಬಿಗ್​ ಬಾಸ್​ಗೆ ತೆರಳುವಂತೆ ಶುಭಾಗೆ ಹೇಳಿದ್ದರಂತೆ. ಅಂತೆಯೇ ಶುಭಾ ಬಿಗ್​ ಬಾಸ್​ ಮನಗೆ ಬರುತ್ತಿದ್ದಾರೆ.

 • 28 Feb 2021 06:32 PM (IST)

  ಎರಡನೇ ಅಭ್ಯರ್ಥಿಯಾಗಿ ಬಿಗ್​ ಬಾಸ್​ ಮನೆಗೆ ಶುಭಾ ಪೂಂಜಾ

  ಎರಡನೇ ಅಭ್ಯರ್ಥಿಯಾಗಿ ಬಿಗ್​ ಬಾಸ್​ ಸೀಸನ್​ 8ಗೆ ಶುಭಾ ಪೂಂಜಾ  ಕಾಲಿಟ್ಟಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಇವರು ಈಗ ಬಿಗ್​ ಬಾಸ್​ ಸ್ಪರ್ಧಿಯಾಗಿ ಕಾಲಿಡುತ್ತಿದ್ದಾರೆ.

 • 28 Feb 2021 06:24 PM (IST)

  ಯಾರು ಈ ಧನುಶ್ರೀ?

  Dhanushree Profile: ಕನ್ನಡ ಬಿಗ್​ ಬಾಸ್​ ಮನೆಗೆ ಟಿಕ್​ಟಾಕ್ ಸ್ಟಾರ್​ ಧನುಶ್ರೀ ಎಂಟ್ರಿ

 • 28 Feb 2021 06:20 PM (IST)

  ಬಿಗ್​ ಬಾಸ್​ ಮೊದಲ ಅಭ್ಯರ್ಥಿ ಧನುಶ್ರೀ

 • 28 Feb 2021 06:09 PM (IST)

  ಬಿಗ್​ ಬಾಸ್​-7 ಮನೆ ಒಳಗೆ ಸುದೀಪ್​!

  ಕನ್ನಡ ಬಿಗ್​ ಬಾಸ್​ 8ಗೆ ಕಿಚ್ಚ ಸುದೀಪ್​ ಚಾಲನೆ ನೀಡಿದ್ದಾರೆ. ಬಿಗ್​ ಬಾಸ್​ ಮನೆ ಒಳಗೆ ಸುದೀಪ್​ ತೆರಳಿ ಮನೆ ಹೇಗಿದೆ ಎಂದು ತೋರಿಸಿದ್ದಾರೆ. ಅಷ್ಟೇ ಅಲ್ಲ, ವಿಶೇಷ ಬಾಲ್​ಗಳನ್ನು ಕಿಚ್ಚ ಸುದೀಪ್​ ಮನೆ ಒಳಗೆಲ್ಲ ಇರಿಸಿದ್ದಾರೆ.  ಅಭ್ಯರ್ಥಿಗಳಾಗಿ ಯಾರೆಲ್ಲ ಬರಲಿದ್ದಾರೆ ಎನ್ನುವ ಕುತೂಹಲಕ್ಕೆ ಶೀಘ್ರವೇ ಉತ್ತರ ಸಿಗಲಿದೆ.

 • 28 Feb 2021 05:56 PM (IST)

  ಕನ್ನಡ ಬಿಗ್​ ಬಾಸ್​ ಸೀಸನ್​ 8ಗೆ ಕ್ಷಣಗಣನೆ ಆರಂಭ

  ಕನ್ನಡ ಬಿಗ್​ ಬಾಸ್​ ಸೀಸನ್​ 8ಗೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ಆರು ಗಂಟೆಗೆ ಬಿಗ್​ ಬಾಸ್​ ಪ್ರಾರಂಭವಾಗಲಿದೆ. ಯಾರೆಲ್ಲ ಅಭ್ಯರ್ಥಿಗಳು ಬಿಗ್​ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಸಂಜೆ ಆರು ಗಂಟೆಗೆ ಕಾರ್ಯಕ್ರಮ ಆರಂಭವಾದರೆ ರಾತ್ರಿ 11 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದೆ. ಇವುಗಳ ಮಧ್ಯೆ ಮನರಂಜನಾ ಕಾರ್ಯಕ್ರಮ ಕೂಡ ಇರಲಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Published On - Feb 28,2021 10:49 PM

Follow us on

Related Stories

Most Read Stories

Click on your DTH Provider to Add TV9 Kannada