ಮೇಷ ರಾಶಿಯವರು ಬಹಳ ಖುಷಿ ಖುಷಿಯಾಗಿರ್ತಾರೆ, ಆದರೆ ಆತುರ ಜಾಸ್ತಿ. ಎಲ್ಲವೂ ತಕ್ಷಣವೇ ಆಗಿಹೋಗಿಬೇಕು. ಜತೆಗೆ ಸ್ವಲ್ಪ ಬೇಜವಾಬ್ದಾರಿ ಕೂಡ ಇರುತ್ತೆ. ಮೇಷರಾಶಿಯವರು ಮಕರ ರಾಶಿಯವರ ಜತೆ ಹೊಂದಿಕೊಳ್ಳುವುದು ಅಸಾಧ್ಯ. ಬಹಳ ಆಲೋಚಿಸುವ, ಎಲ್ಲದರಲ್ಲೂ ಒಂದು ಹತೋಟಿ ಇರಬೇಕು ಎಂದುಕೊಳ್ಳುವ ಮತ್ತು ಜವಾಬ್ದಾರಿಯ ಬಗ್ಗೆ ಸದಾ ಯೋಚಿಸುವವರು ಮಕರ ರಾಶಿಯವರು. ಈ ಎರಡು ರಾಶಿಯವರು ಉತ್ತರ ಧ್ರುವ- ದಕ್ಷಿಣ ಧ್ರುವ ಇದ್ದಂತೆ. ಏನು ಬರುತ್ತೋ ಬರಲಿ, ಅದಕ್ಕೆ ತಕ್ಕಂತೆ ಹೋದರಾಯಿತು ಅಂತ ಯೋಚಿಸುವವರು ಅಕ್ಕಪಕ್ಕ ಇದ್ದಲ್ಲಿ ಮಕರ ರಾಶಿಯವರಿಗೆ ನಖಶಿಖಾಂತ ಸಿಟ್ಟು ಬಂದುಬಿಡುತ್ತೆ. ಮೇಷ ರಾಶಿಯವರಿಗೆ ತಮ್ಮ ಸುತ್ತ ಇರುವವರು ಪ್ರಾಮಾಣಿವಾಗಿ ನಡೆದುಕೊಳ್ಳಬೇಕು, ಒಂದಿಷ್ಟು ರೊಮ್ಯಾಂಟಿಕ್ ಆಗಿರಬೇಕು. ಜತೆಗೆ ಏನೇ ವಿಚಾರ ಇದ್ದರೂ ಮುಕ್ತವಾಗಿ ಮಾತನಾಡಬೇಕು. ಆದರೆ ಮಕರ ರಾಶಿಯವರು ಹೀಗಿರಲಾರರು.
ಈ ವೃಷಭ ರಾಶಿಯವರು ಬಹಳ ಮೊಂಡು ಹಾಗೂ ಜತೆಗೆ ಚುರುಕು. ಇನ್ನು ಕುಂಭ ರಾಶಿಯವರು ಸದಾ ಉತ್ಸಾಹದಿಂದ ಚಟವಟಿಕೆಯಾಗಿ ಇರುತ್ತಾರೆ. ಈ ಎರಡು ರಾಶಿಯವರು ಪರಸ್ಪರರ ಒಳ್ಳೆ ಗುಣಗಳನ್ನು ಮೆಚ್ಚಿಕೊಳ್ಳುವ ಮಾತೇ ಆಡಲ್ಲ. ಕುಂಭ ರಾಶಿಯವರ ಸ್ವತಂತ್ರ ನಡತೆ ಮತ್ತು ಆಲೋಚನೆಗಳನ್ನು ಸಹಿಸುವುದಕ್ಕೆ ವೃಷಭದವರಿಗೆ ಕಷ್ಟವಾಗುತ್ತದೆ. ಅದರಲ್ಲೂ ಕುಟುಂಬ ಹಾಗೂ ಹಣಕಾಸು ವಿಷಯಗಳ ವಿಚಾರ ಬಂದಲ್ಲಿ ಅದು ಕೊನೆಯೇ ಮುಟ್ಟಲ್ಲ. ಸದಾ ಕಲ್ಪನೆಯಲ್ಲಿ ತೇಲಾಡುವ ಕುಂಭ ಹಾಗೂ ವಾಸ್ತವದಲ್ಲೇ ಇರುವ ವೃಷಭ ಎಂದೂ ಒಂದು ಹಾದಿಯಲ್ಲಿ ಸಾಗೋದು ಕಷ್ಟ.
What is Pach Mahapurush yoga explainer
ಕರ್ಕಾಟಕ ರಾಶಿಯವರು ಬಲು ಸೂಕ್ಷ್ಮ. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ. ಜೋರು ಜಗಳ- ಗಲಾಟೆ ಅಂದರೆ ಇವರಿಗೆ ಸ್ವಲ್ಪ ಹೆದರಿಕೆ. ಆದರೆ ಮೇಷ ರಾಶಿಯವರಿಗೆ ತಮ್ಮಂತೆಯೇ ಎಲ್ಲರೂ ಅತ್ಯುತ್ಸಾಹದಲ್ಲಿ ಇರಬೇಕು ಎಂಬ ಆಸೆ. ಪ್ರಶಾಂತವಾಗಿ, ಸಮಾಧಾನದಿಂದ ಇರಬಯಸುವ ಕರ್ಕಾಟಕಕ್ಕೆ ಮೇಷ ರಾಶಿಯವರ ಅಬ್ಬರ ತಡೆದುಕೊಳ್ಳುವುದೇ ಅಸಾಧ್ಯ ಆಗಿಬಿಡುತ್ತದೆ. ಮೇಷ ರಾಶಿಯವರ ಥ್ರಿಲ್ಲಿಂಗ್ ಸ್ವಭಾವಕ್ಕೆ ಹೊಂದಿಕೊಳ್ಳುವುದಕ್ಕೆ ಕರ್ಕಾಟಕ ರಾಶಿಯವರು ಕಂಫರ್ಟ್ ಝೋನ್ ಬಿಟ್ಟು ಬರಲು ಸಾಧ್ಯವೇ ಆಗಲ್ಲ.
ಸಿಂಹ ರಾಶಿಯವರು ಒಂದು ಕ್ಷಣ ಸುಮ್ಮನೆ ಇರುವವರಲ್ಲ. ಜತೆಗೆ ಸ್ವಲ್ಪ ಕಿಡಿಗೇಡಿಗಳು. ವೃಷಭ ಮೊದಲೇ ಹೇಳಿದ ಹಾಗೆ ವಾಸ್ತವವಾದಿ ಹಾಗೂ ಮೊಂಡು. ಇಬ್ಬರೂ ಭೇಟಿ ಆದಾಗೆಲ್ಲ ಕಿತ್ತಾಟ ಇದ್ದೇ ಇರುತ್ತದೆ. ಆರಾಮಾಗಿ ಓಡಾಡಿಕೊಂಡು ಇರುವ ವೃಷಭದ ಸ್ವಭಾವವನ್ನು ಸಹಿಸುವುದು ಸಿಂಹಕ್ಕೆ ಕಷ್ಟಕಷ್ಟ. ಹಿಡಿದಿದ್ದು, ಮುಟ್ಟಿದ್ದಕ್ಕೆಲ್ಲ ತಪ್ಪು ಹೇಳುತ್ತಲ್ಲಾ ಈ ಸಿಂಹ ಎಂಬ ಸಿಟ್ಟು ವೃಷಭಕ್ಕೆ, ಕೆಲಸಕ್ಕೆ ಬಾರದೆ ವೃಷಭ ಅಲೆದಾಡಿಕೊಂಡಿರುತ್ತದಲ್ಲಾ ಎಂಬ ಬೇಸರ ಸಿಂಹಕ್ಕೆ ಇರುತ್ತದೆ. ಹೀಗೆ ಈ ಎರಡು ರಾಶಿಯವರು ಒಟ್ಟಾದಲ್ಲಿ ಪ್ರೀತಿಯ ಮಾತಿಗಿಂತ ಆಕ್ಷೇಪವೇ ಹೆಚ್ಚಿರುತ್ತದೆ.
ಕನ್ಯಾ ರಾಶಿಯವರು ಪರ್ಫೆಕ್ಷನಿಸ್ಟ್ಗಳು. ಹೀಗಿರಬೇಕು ಅಂದರೆ ಹೀಗೇ ಇರಬೇಕು. ಜತೆಗೆ ವಿಪರೀತ ವಾಸ್ತವವಾದಿಗಳು. ತಮ್ಮ ಸಂಗಾತಿಯೂ ಡಿಟ್ಟೋ ತಮ್ಮಂತೆಯೇ ಇರಬೇಕು ಎಂದು ಬಯಸುತ್ತಾರೆ. ಈ ಮಿಥುನ ರಾಶಿಯವರಿಗೆ ಹೊಸ ಸಂಗತಿಗಳೆಂದರೆ ಬೆರಗು. ಕಲಿಕೆಯಲ್ಲಿ ಸಂತೋಷ. ಈ ಗುಣ ಕನ್ಯಾಗೆ ಸುತರಾಂ ಇಷ್ಟವಾಗಲ್ಲ. ಎಲ್ಲ ಗಮನ ತಮ್ಮ ಹಾಗೂ ಕೆಲಸದ ಮೇಲೆ ಮಾತ್ರ ಇರಬೇಕು ಎಂಬುದು ಇವರ ನಿರೀಕ್ಷೆ. ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಕೆಲವು ಸಲ ವ್ಯಕ್ತಪಡಿಸಿದಾಗ ಕನ್ಯಾ ಅದನ್ನು ಬಲವಾಗಿ ವಿರೋಧಿಸುತ್ತದೆ. ಈ ಸ್ವಭಾವ ಮಿಥುನಕ್ಕೆ ತುಂಬಾ ಸಿಟ್ಟು ತರಿಸುತ್ತದೆ.
Weekly horoscope in Kannada from 1st november to 7th november on Aries to Pisces know in Kannada
Ruler of zodiac signs on the basis of astrology
ಧನುಸ್ಸು ರಾಶಿಯವರು ಯಾವುದೇ ಒತ್ತಡವನ್ನು ತಲೆ ಮೇಲೆ ಹಾಕಿಕೊಳ್ಳುವರಲ್ಲ. ಬಂದದ್ದೆಲ್ಲ ಬರಲಿ, ನನ್ನಷ್ಟಕ್ಕೆ ನಾನಿರುತ್ತೇನೆ ಅನ್ನೋರು ಇವರು. ಇನ್ನು ಕನ್ಯಾ ರಾಶಿಯವರು ಸಣ್ಣ- ಪುಟ್ಟ ತಪ್ಪಗಳಾದರೂ ಇತರರಿಗೆ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಹೊಸ ಸ್ಥಳಗಳಿಗೆ ತೆರಳುವುದನ್ನು ಹಾಗೂ ಹೊಸ ಸಂಗತಿಗಳನ್ನು ಕಲಿಯುವುದನ್ನು ಧನುಸ್ಸು ರಾಶಿಯವರು ಬಲು ಇಷ್ಟ ಪಡುತ್ತಾರೆ. ಕನ್ಯಾ ರಾಶಿಯವರಿಗೆ ಸ್ಥಿರತೆ ಹಾಗೂ ಒಂದೇ ಥರದ ಬದುಕು ಬೇಕು. ಆದ್ದರಿಂದ ಇವರಿಬ್ಬರ ಮಧ್ಯೆ ಕಚ್ಚಾಟ ಕಾಮನ್.
ಮಕರ ರಾಶಿಯವರು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ. ಎಲ್ಲವನ್ನೂ ಮುಂಚಿತವಾಗಿ ಪ್ಲಾನ್ ಮಾಡಬೇಕು ಹಾಗೂ ಅಂದುಕೊಂಡಂತೆ ನಡೆಯಬೇಕು ಎಂದುಕೊಳ್ಳುತ್ತದೆ ಮಕರ. ಆದರೆ ಆರಾಮವಾಗಿ ಇರುವ ತುಲಾ ರಾಶಿಯವರಿಗೆ ಇದು ಒತ್ತಡ ಎನಿಸುತ್ತದೆ. ಇದೇನು ಈ ಮಕರ ತನ್ನ ಮೇಲೆ ಸವಾರಿ ಮಾಡಲು ಬರುತ್ತಿದೆ, ತನಗೆ ಸ್ವಾತಂತ್ರ್ಯ ಇಲ್ಲದಂತಾಗುತ್ತಿದೆ ಎಂದೆನಿಸುತ್ತದೆ. ಹೇಗಾದರೂ ಮಾಡಿ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಮಕರ ರಾಶಿಯವರು ಪ್ರಯತ್ನಿಸಿದರೆ ತುಲಾ ರಾಶಿಯವರು ರೋಬೋಟ್ನಂತೆ ಆಗಿಬಿಡುತ್ತಾರೆ. ಆ ಕಾರಣಕ್ಕೆ ಈ ಎರಡೂ ರಾಶಿಯವರು ಪರಸ್ಪರರ ತಂಟೆಗೆ ಹೋಗದಿರುವುದು ಉತ್ತಮ.
ಕುಂಭ ರಾಶಿಯವರಿಗೆ ತಮ್ಮದೇ ಜಗತ್ತು. ಅಲ್ಲಿ ಅವರದೇ ನಿಯಮಗಳು. ಸ್ವಾತಂತ್ರ್ಯ ಬಯಸುವ ಜಾಯಮಾನದವರು ಇವರು. ಈ ಸ್ವಭಾವ ಸಹಿಸಿಕೊಳ್ಳುವುದು ವೃಶ್ಚಿಕ ರಾಶಿಯವರಿಗೆ ಅಸಾಧ್ಯವಾಗಿಬಿಡುತ್ತದೆ. ಪ್ರೀತಿ-ಸಂಬಂಧಗಳಿಗೆ ಸಿಲುಕಿಕೊಳ್ಳುವುದಕ್ಕೆ ಈ ಕುಂಭ ಒಪ್ಪೋದಿಲ್ಲ. ಇದನ್ನು ಸಹಿಸುವುದಕ್ಕೆ ವೃಷಭಕ್ಕೆ ಆಗುವುದಿಲ್ಲ. ಇನ್ನು ವೃಶ್ಚಿಕ ರಾಶಿಯವರಿಗೆ ತಮಗೆ ಬೇಕಾದದ್ದು ದೊರೆಯುವ ತನಕ ನಿಲ್ಲಿಸುವ ಸ್ವಭಾವವೂ ಇರಲ್ಲ. ಈ ಕಾರಣಕ್ಕೆ ಇವರು ಸದಾ ಒಟ್ಟಿಗಿದ್ದಲ್ಲಿ ಕಠಿಣವಾದ ಶಾಲೆಯೋ- ಕಾಲೇಜಿನದೋ ವಾತಾವರಣ ಇದ್ದಂತೆ ಇರುತ್ತದೆ.
ಮೀನ ರಾಶಿಯವರು ಏನೇನೋ ಕಲ್ಪಿಸಿಕೊಳ್ಳುತ್ತಾ ತಮ್ಮದೇ ಊಹಾ ಲೋಕದಲ್ಲಿ ಇರುತ್ತಾರೆ. ಅವರು ಬಹಳ ಭಾವನಾ ಜೀವಿಗಳು, ಸೂಕ್ಷ್ಮ ಮತ್ತು ಆಧ್ಯಾತ್ಮಿಕ ಒಲವು ಇರುವಂಥವರು. ಧನುಸ್ಸು ರಾಶಿಯವರು ಸಹ ಕನಸು ಕಾಣುವುದನ್ನೇ ಬಯಸುತ್ತಾರೆ. ಆದರೆ ಅದು ವಾಸ್ತವ ನೆಲೆಗಟ್ಟಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಆದ್ದರಿಂದ ಮೀನ ರಾಶಿಯವರು ಹೇಗೆ ಅವರ ಗುರಿ ಏನು ಎಂದು ಅರ್ಥ ಮಾಡಿಕೊಳ್ಳುವುದೇ ಧನುಸ್ಸಿಗೆ ಕಷ್ಟವಾಗಿ ಬಿಡುತ್ತದೆ. ಪರಸ್ಪರರಿಗೆ ಬೆಂಬಲ ಸಿಗದೆ ನಿಧಾನಕ್ಕೆ ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ.
Published On - 2:32 pm, Mon, 1 March 21