Dhanushree Profile: ಕನ್ನಡ ಬಿಗ್​ ಬಾಸ್​ ಮನೆಗೆ ಟಿಕ್​ಟಾಕ್ ಸ್ಟಾರ್​ ಧನುಶ್ರೀ ಎಂಟ್ರಿ

Bigg Boss Kannada Season 8, Dhanushree Profile: ಇನ್​ಸ್ಟಾಗ್ರಾಂನಲ್ಲಿ ಇವರು ಬರೋಬ್ಬರಿ 2.34 ಲಕ್ಷ ಜನ ಹಿಂಬಾಲಕರನ್ನು ಹೊಂದಿದ್ದಾರೆ. ದೊಡ್ಡ ಫ್ಯಾನ್​ ಫಾಲೋವರ್​ ಇರುವುದರಿಂದ ಧನುಶ್ರೀ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ.

Dhanushree Profile: ಕನ್ನಡ ಬಿಗ್​ ಬಾಸ್​ ಮನೆಗೆ ಟಿಕ್​ಟಾಕ್ ಸ್ಟಾರ್​ ಧನುಶ್ರೀ ಎಂಟ್ರಿ
Follow us
ರಾಜೇಶ್ ದುಗ್ಗುಮನೆ
| Updated By: ganapathi bhat

Updated on:Feb 28, 2021 | 6:52 PM

Bigg Boss Kannada Season 8 Contestant Dhanushree Profile: ಟಿಕ್​ ಟಾಕ್​ ಭಾರತದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿತ್ತು. ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಹಾಕುವ ಮೂಲಕ ಸಾಕಷ್ಟು ಜನರು ಸ್ಟಾರ್​​ ಪಟ್ಟ ಗಿಟ್ಟಿಸಿಕೊಂಡಿದ್ದರು. ಅವರಿಗೆ ಟಿಕ್​ ಟಾಕ್​ ಸ್ಟಾರ್​ ಎನ್ನುವ ಹಣೆಪಟ್ಟಿ ಕೂಡ ನೀಡಲಾಗಿತ್ತು. ಈ ಸಾಲಿನಲ್ಲಿ ಧನುಶ್ರೀ ಕೂಡ ಇದ್ದಾರೆ. ಟಿಕ್​ ಟಾಕ್​ ಮೂಲಕವೇ ಖ್ಯಾತಿ ಗಳಿಸಿಕೊಂಡ ಇವರು ಈಗ ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್ 1ನೇ​ ಅಭ್ಯರ್ಥಿಯಾಗಿ ಮನೆ ಒಳಗೆ ತೆರಳುತ್ತಿದ್ದಾರೆ. ಗಾಜಿನಂತೆ ಹೊಳೆಯುವ ಸುಂದರ ಕಣ್ಗಳು. ಅದಕ್ಕೆ ಹದವಾಗುವಂತೆ ಹಚ್ಚಿದ ಕಾಡಿಗೆ. ಸರಿಯಾಗಿ ತಿದ್ದಿ ತೀಡಿದ ಹುಬ್ಬುಗಳು. ಗುಂಗರು ಕೂದಲು. ನೋಡೋಕೆ ಥೇಟು ಸ್ಯಾಂಡಲ್​ವುಡ್​ ನಟಿ ನಿತ್ಯಾ ಮೆನನ್​. ಇವರು ಟಿಕ್​ಟಾಕ್​ನಲ್ಲಿ ಮಾಡುತ್ತಿದ್ದ ವಿಡಿಯೋಗಳನ್ನು ಸಾವಿರಾರು ಮಂದಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಇನ್​ಸ್ಟಾಗ್ರಾಂನಲ್ಲಿ ಇವರು ಬರೋಬ್ಬರಿ 2.34 ಲಕ್ಷ ಜನ ಹಿಂಬಾಲಕರನ್ನು ಹೊಂದಿದ್ದಾರೆ. ದೊಡ್ಡ ಫ್ಯಾನ್​ ಫಾಲೋವರ್​ ಇರುವುದರಿಂದ ಧನುಶ್ರೀ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ರಾಜಕೀಯಗಳು ನಡೆಯುತ್ತವೆ. ಇದನ್ನೆಲ್ಲ ಬಿಟ್ಟು ಅವರು ಹೇಗಿರುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಬಿಗ್ ಬಾಸ್ ಮನೆಯ ಮೊದಲನೇ ಅಭ್ಯರ್ಥಿ ಧನುಶ್ರೀಯನ್ನು ನಿವೇದಿತಾ ಗೌಡ ನೃತ್ಯ ಮಾಡಿ ಸ್ವಾಗತಿಸಿದ್ದಾರೆ. ಅವರ ಶ್ವಾನ ಪ್ರೀತಿ, ಪುಸ್ತಕ ಪ್ರೇಮವನ್ನು ಪ್ರೋಮೊನಲ್ಲಿ ತೋರಿಸಾಗಿದೆ. ಯಾರಾದ್ರೂ ಶೋ ಆಫ್ ಮಾಡಿದ್ರೆ ಇಷ್ಟ ಆಗಲ್ಲ. ಗೌರವಯುತವಾಗಿ ಮಾತನಾಡಿಸಿದರೆ ಇಷ್ಟ ಆಗುತ್ತೆ. ಸಿಟ್ಟು ಸ್ವಲ್ಪ ಬೇಗ ಬರುತ್ತೆ. ಟಿಕ್​ಟಾಕ್ ಮುಗಿದಾಗ ಎಲ್ಲಾ ಮುಗೀತು ಅಂತ ಟೀಸ್ ಮಾಡಿದ್ರು ಎಂದು ಧನುಶ್ರೀ ಹೇಳಿದರು.

ಕಿಚ್ಚ ಸುದೀಪ್ ಕಂಡರೆ ಬಹಳ ಪ್ರೀತಿ, ಅಭಿಮಾನ ಎಂದು ತಿಳಿಸಿದ ಧನುಶ್ರೀ ತಮ್ಮ ಟಿಕ್​ಟಾಕ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು. ಮದುವೆ ಆಗಿರುವ ಹೆಣ್ಣು ಮಕ್ಕಳು ಕೂಡ ತಮ್ಮ ತೊಂದರೆ ಹೇಳಿಕೊಳ್ಳುತ್ತಿದ್ದರು. ತಮ್ಮ ಕಷ್ಟಗಳ ಬಗ್ಗೆ ನನ್ನಲ್ಲಿ ಮಾತನಾಡುತ್ತಿದ್ದರು ಎಂದು ವಿವರಿಸಿದರು. ಬಿಗ್​ಬಾಸ್ ಸೋಲು ಗೆಲುವು ದೇವರ ನಿರ್ಧಾರ ಎಂದು ಹೇಳಿದರು.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: ಮೊದಲ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಧನುಶ್ರೀ

Bigg Boss Kannada 8 Contestants: ಬಿಗ್ ಬಾಸ್ ಆರಂಭಕ್ಕೆ ಮೊದಲು ಸೋರಿಕೆಯಾಯ್ತು ಅಭ್ಯರ್ಥಿಗಳ ಹೊಸ ಪಟ್ಟಿ!

Published On - 6:19 pm, Sun, 28 February 21