ಪ್ರತಿಬಾರಿಯೂ ಬಿಗ್ಬಾಸ್ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಬಿಗ್ಬಾಸ್ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ಮನೆಗೆ ತೆರಳಲಿರುವವರು ಯಾರು (Bigg Boss Kannada 8 Contestants) ಎನ್ನುವ ಕೊನೇ ಕ್ಷಣದ ಸಂಭಾವ್ಯ ಪಟ್ಟಿ ಇಲ್ಲಿದೆ.
ಟಿಕ್ಟಾಕ್ ಸ್ಟಾರ್ ಧನುಶ್ರೀ
ಹಿರೋಯಿನ್ ಶುಭಾ ಪೂಂಜಾ
ನಟ ಅಶ್ವತ್ಥ್ ನಾರಾಯಣ್
ಕನ್ನಡ ಕೋಗಿಲೆ ಗಾಯಕ ವಿಶ್ವಾ
ಗಾಯಕ ಬ್ರೋ ಗೌಡಾ
ಬೈಕ್ ರೇಸರ್ ಅರವಿಂದ್
ಅಗ್ನಿಸಾಕ್ಷಿ ಧಾರಾವಾಹಿಯ ವೈಷ್ಣವಿ
ಮಜಾ ಭಾರತದ ಮಂಜು ಪಾವಗಡ
ಪುಟ್ಟಗೌರಿ ಮದುವೆ ಧಾರಾವಾಹಿಯ ‘ಅಜ್ಜಮ್ಮ’ ಕಲಾವಿದೆ ಚಂದ್ರಕಲಾ
ಕಿರುತೆರೆ ಕಲಾವಿದೆ ದಿವ್ಯಾ
ಬ್ರಹ್ಮಗಂಟು ಧಾರಾವಾಹಿಯ ಗೀತಾ
ಸಿಸಿಲ್ ಕ್ರಿಕೇಟರ್ ರಾಜೀವ್
ಧಾರಾವಾಹಿ ನಿರ್ಮಾಪಕಿ ನಿರ್ಮಲಾ ಚೆನ್ನಪ್ಪಾ
ನಟಿ ನಿಧಿ ಸುಬ್ಬಯ್ಯಾ
ಪ್ರಶಾಂತ್ ಸಂಬರ್ಗಿ
ಟಿಕ್ಟಾಕ್ ಸ್ಟಾರ್ ರಘು ಗೌಡ
ಕಿರುತೆರೆ ಕಲಾವಿದೆ ದೀಪಿಕಾ
ಸದ್ಯ ದೊರೆತಿರುವ ಅಧಿಕೃತ ಮಾಹಿತಿಯ ಪ್ರಕಾರ ಈ ಸ್ಪರ್ಧಿಗಳು ಬಿಗ್ ಬಾಸ್ 8ರ ಸ್ಪರ್ಧಾಳುಗಳು ಎಂದು ತಿಳಿದುಬಂದಿದೆ. ಏನೇ ಆದರೂ ಇಂದು ಸಂಜೆ 6 ಕ್ಕೆ ಆರಂಭವಾಗಲಿರುವ ಬಿಗ್ ಬಾಸ್ನಲ್ಲೇ ಕಿಚ್ಚ ಸುದೀಪ್ ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಿ ಬರಮಾಡಿಕೊಳ್ಳಲಿದ್ದಾರೆ.
ಬಿಗ್ ಬಾಸ್ ಆರಂಭದ ದಿನಾಂಕ ಘೋಷಣೆ ಮಾಡಲು ಜೋಯಿಸರ ಲುಕ್ನಲ್ಲಿ ಕಾಣಿಸಿಕೊಂಡಿದ್ದರು ಸುದೀಪ್. ಕೆಂಪು ಬಣ್ಣದ ಬಟ್ಟೆ ತೊಟ್ಟಿದ್ದ ಅವರು, ತಲೆಗೆ ಪೇಟ ಸುತ್ತಿದ್ದರು. ಹಣೆಯಲ್ಲಿ ದೊಡ್ಡ ತಿಲಕ, ಕೊರಳಲ್ಲಿ ದೊಡ್ಡ ದೊಡ್ಡ ಸರ, ಭುಜಕ್ಕೆ ಶಾಲು ತೊಟ್ಟು ಜೋಯಿಸರ ಅವತಾರದಲ್ಲಿ ಬಂದಿದ್ದರು. ಈಗಲೂ ಅದೇ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದ ಸುದೀಪ್, ಬಿಗ್ ಬಾಸ್ ಆರಂಭದ ದಿನಾಂಕ ಘೋಷಣೆ ಮಾಡಿದ್ದರು.
ಇದನ್ನೂ ಓದಿ: Bigg Boss Kannada 8: ಇಂದು ಸಂಜೆ 6 ಗಂಟೆಗೆ ಬಿಗ್ ಬಾಸ್ 8 ಪ್ರಾರಂಭ!; ಮನೆ ಒಳಗೆ ಹೋಗುವವರು ಇವ್ರೇನಾ?
Bigg Boss Kannada 8: ಕನ್ನಡ ಬಿಗ್ ಬಾಸ್ 8ಗಾಗಿ ಕೆಲಸ ಮಾಡುವ ತಂತ್ರಜ್ಞರ ಸಂಖ್ಯೆ ಕೇಳಿದ್ರೆ ಅಚ್ಚರಿ ಪಡ್ತೀರಾ!