Bigg Boss Kannada 8: ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?

Bigg Boss Kannada 8: ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?
ಸುದೀಪ್​

ಬಿಗ್​ ಬಾಾಸ್​ ಕನ್ನಡ 8: ಪ್ರತಿ ವರ್ಷದಂತೆ ಈ ಬಾರಿಯೂ ನಟ ಸುದೀಪ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ. ಪ್ರತಿ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಅವರ ಪರಿಚಯ ನೀಡಿ, ಮನೆ ಒಳಗೆ​ ಕಳುಹಿಸುವ ಕೆಲಸವನ್ನು ಸುದೀಪ್​ ಮಾಡಲಿದ್ದಾರೆ.

Rajesh Duggumane

| Edited By: Apurva Kumar Balegere

Feb 28, 2021 | 6:42 PM

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫೆಬ್ರವರಿಯಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದೇ ತಡ, ಪ್ರೇಕ್ಷಕರು ಮನೆ ಒಳಗೆ ಯಾರು ಹೋಗಲಿದ್ದಾರೆ? ಈ ಬಾರಿ ಮನೆ ಸೇರುವ ಸ್ಪರ್ಧಿಗಳೆಷ್ಟು? ಸುದೀಪ್​ ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಗ್ರ್ಯಾಂಡ್​ ಆಗಿ ಪ್ರಾರಂಭಗೊಳ್ಳಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಟ ಸುದೀಪ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ. ಪ್ರತಿ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಅವರ ಪರಿಚಯ ನೀಡಿ, ಮನೆ ಒಳಗೆ​ ಕಳುಹಿಸುವ ಕೆಲಸವನ್ನು ಸುದೀಪ್​ ಮಾಡಲಿದ್ದಾರೆ. ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಬಿಗ್​ ಬಾಸ್​ ಕಾರ್ಯಕ್ರಮ ನಡೆಯಲಿದೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದರ ಜತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ಗೆ ಭೇಟಿ ನೀಡಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿ, ಅಲ್ಲಿ ಬಿಗ್​ ಬಾಸ್ ವೀಕ್ಷಣೆ ಮಾಡಬಹುದು.

ಬಿಗ್​ ಬಾಸ್​ ಸಂಭಾವ್ಯರ ಪಟ್ಟಿ

ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಬಿಗ್​ಬಾಸ್​ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ. ಹಾಗಾದರೆ, ಈ ಬಾರಿ ಬಿಗ್​ ಬಾಸ್​ ಮನೆಗೆ ತೆರಳಲಿರುವವರು ಯಾರು ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

-ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ -ಕಾಮಿಡಿ ಕಿಲಾಡಿ ನಯನಾ -ನಿರ್ದೇಶಕ ರವಿ ಶ್ರೀವತ್ಸ -ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ -ರಘು ವೈನ್ ಸ್ಟೋರ್​ನ ರಘು ಗೌಡ -ಕಿರಣ್ ಶ್ರೀನಿವಾಸ್ -ಸುನಿಲ್ ರಾವ್ -‘ಲವ್ ಗುರು’ ರಾಜೇಶ್ -ಕಿರುತೆರೆ ನಟಿ ಸಮೀಕ್ಷಾ -ಅಗ್ನಿಸಾಕ್ಷಿಯ ಸುಕೃತಾ -ಅಮೃತವರ್ಷಿಣಿಯ ರಜಿನಿ -ತಬಲಾ ನಾಣಿ -ತರಂಗ ವಿಶ್ವ -ಸರಿಗಮಪ.. ಹನುಮಂತ -ನಿರೂಪಕ ಅಮರ್ ಪ್ರಸಾದ್

ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಯಾರು? ಇಲ್ಲಿದೆ ಸಂಭಾವ್ಯರ ಪಟ್ಟಿ!

ಬಿಗ್​ಬಾಸ್​ ಕನ್ನಡ ಲೈವ್​: Live Bigg Boss Kannada 8 Launch LIVE Updates: ಎರಡನೇ ಅಭ್ಯರ್ಥಿಯಾಗಿ ಶುಭಾ ಪೂಂಜಾ ಬಿಗ್​ ಬಾಸ್ ಮನೆಗೆ ಎಂಟ್ರಿ

Follow us on

Related Stories

Most Read Stories

Click on your DTH Provider to Add TV9 Kannada