Bigg Boss Kannada 8: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಯಾರು? ಇಲ್ಲಿದೆ ಸಂಭಾವ್ಯರ ಪಟ್ಟಿ!

Bigg Boss Kannada Season 8 Contestants List: ಅನುಶಾ ರಂಗನಾಥ್, ನಯನಾ, ಗೀತಾ ಭಾರತಿ ಭಟ್, ರಘು ಗೌಡ, ರಾಗಿಣಿ ದ್ವಿವೇದಿ, ಕಿರಣ್ ಶ್ರೀನಿವಾಸ್, ಸುನಿಲ್ ರಾವ್, ರಾಜೇಶ್, ಸಮೀಕ್ಷಾ, ಸುಕೃತಾ, ರಜಿನಿ, ತಬಲಾ ನಾಣಿ, ತರಂಗ ವಿಶ್ವ, ಹನುಮಂತ.

Bigg Boss Kannada 8: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು ಯಾರು? ಇಲ್ಲಿದೆ ಸಂಭಾವ್ಯರ ಪಟ್ಟಿ!
ಕನ್ನಡ ಬಿಗ್ ಬಾಸ್ 8 ಆರಂಭಕ್ಕೆ ಕ್ಷಣಗಣನೆ
Follow us
TV9 Web
| Updated By: ganapathi bhat

Updated on:Apr 06, 2022 | 7:46 PM

ಕನ್ನಡದ ಬಹುನಿರೀಕ್ಷಿತ, ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ನೋಡಲು ಕಾಯುತ್ತಿರುವ ‘ಬಿಗ್ ಬಾಸ್ ಸೀಸನ್ 8’ (Bigg Boss Season 8) ಆರಂಭಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಅಭಿನಯ ಚಕ್ರವರ್ತಿ, ಅಭಿಮಾನಗಳ ಪ್ರೀತಿಯ ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಉದ್ಘಾಟನೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ? ಯಾರೆಲ್ಲಾ ಗೆಸ್ಟ್​ಗಳಾಗಿ ಮನೆ ಪ್ರವೇಶ ಮಾಡುತ್ತಾರೆ? ಈ ಕುತೂಹಲ ಎಲ್ಲಾ ಬಿಗ್ ಬಾಸ್ ಅಭಿಮಾನಿಗಳಿಗಿದೆ. ಹೊಸ ಅತಿಥಿಗಳು ಎಷ್ಟು ಮನರಂಜನೆ ನೀಡಬಹುದು. ನಮ್ಮ ನೆಚ್ಚಿನ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಸೇರುತ್ತಾರಾ ಎಂಬ ಆಸಕ್ತಿಯೂ ಕಿರುತೆರೆ ನೋಡುಗರಿಗಿದೆ. ಇನ್ನೇನು ಫೆಬ್ರವರಿ 28 ಸಮೀಪಿಸಿಯೇ ಬಿಟ್ಟಿತು ಎನ್ನುವಾಗ ಬಿಗ್ ಬಾಸ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಓಡಾಡುತ್ತಿದೆ.

ಬಿಗ್ ಬಾಸ್ 7 ಸೀಸನ್​ಗಳನ್ನು ಪೂರೈಸಿ ಇನ್ನೇನು ಕೆಲದಿನಗಳಲ್ಲಿ 8ನೇ ಸೀಸನ್ (Bigg Boss Season 8) ಆರಂಭಿಸಲಿದೆ. ಸೀಸನ್ 8ಕ್ಕೆ ಪೂರ್ವತಯಾರಿಗಳು ಭರ್ಜರಿಯಾಗಿ ಸಾಗುತ್ತಿದೆ. ಪ್ರೋಮೋಗಳು ಬಿಡುಗಡೆಯಾಗಿದೆ. ದಿನಗಣನೆಯೂ ಶುರುವಾಗಿದೆ. ಎಂಟನೇ ಸೀಸನ್​ನ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ.

ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ ಕನ್ನಡದ ಹೆಸರಾಂತ ನಟಿ ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್ ಹೆಸರು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಓಡಾಡುತ್ತಿದೆ. ಲೈಫ್ 360 ಮತ್ತು ಅಂದವಾದ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅನುಶಾರನ್ನು ಬಿಗ್​ ಬಾಸ್ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಕಾಮಿಡಿ ಕಿಲಾಡಿ ನಯನಾ ಬಿಗ್ ಬಾಸ್ ನಯನಾ ಆಗುತ್ತಾರಾ? ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿಬಂದಿರುವ ಮತ್ತೊಂದು ಹೆಸರು ಕಾಮಿಡಿ ಕಿಲಾಡಿ ನಯನಾ ಅವರದು. ನಯನಾ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡನೇ ಮಾತಿಲ್ಲ. ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ನಕ್ಕುನಗಿಸಿ, ಪ್ರೇಕ್ಷಕರನ್ನು ರಂಜಿಸಿ, ಅಭಿಮಾನಿಗಳ ಮನಗೆದ್ದಿದ್ದ ನಯನಾ ಇನ್ನು ಬಿಗ್ ಬಾಸ್ ನಯನಾ ಆಗುತ್ತಾರಾ ಎಂದು ಕಾದುನೋಡಬೇಕಿದೆ.

ನಿರ್ದೇಶಕ ರವಿ ಶ್ರೀವತ್ಸ ಬಿಗ್ ಬಾಸ್ ಎಂಟ್ರಿ ಬಹುತೇಕ ಖಚಿತ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಿಗ್ ಬಾಸ್ ಅಭಿಮಾನಿಗಳು, ಏನಾಗುತ್ತೋ ಬಿಡುತ್ತೋ ರವಿ ಶ್ರೀವತ್ಸ ಬಿಗ್ ಬಾಸ್ ಮನೆಗೆ ಹೋಗೋದು ಮಾತ್ರ ಶೇ. 99.99 ರಷ್ಟು ಗ್ಯಾರೆಂಟಿ ಎನ್ನುತ್ತಿದ್ದಾರೆ.

ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗುಂಡಮ್ಮ ಬ್ರಹ್ಮಗಂಟು ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ಗೀತಾ ಭಾರತಿ ಭಟ್ ಹೆಸರು ಬಿಗ್ ಬಾಸ್ ಸೀಸನ್ 8ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. ಬ್ರಹ್ಮಗಂಟು ಧಾರಾವಾಹಿ ಮುಕ್ತಾಯ ಹಂತದಲ್ಲಿದೆ ಎಂಬ ಗುಲ್ಲಿದೆ. ಜತೆಗೆ, ಗೀತಾ ಭಾರತಿ ಭಟ್, ಬಿಗ್ ಬಾಸ್ ಇಂಟ್ರೊ ವೀಡಿಯೋ ಚಿತ್ರೀಕರಣವನ್ನು ಮುಗಿಸಿದ್ದಾರೆ ಎಂಬ ಸುದ್ದಿಯೂ ಅಲ್ಲಲ್ಲಿ ಕೇಳಿಬಂದಿದೆ.

ರಘು ವೈನ್ ಸ್ಟೋರ್​ನ ರಘು ಗೌಡ ಸಾಮಾಜಿಕ ಜಾಲತಾಣದಲ್ಲಿ ರಘು ವೈನ್ ಸ್ಟೋರ್ ಮೂಲಕ ಹವಾ ಸೃಷ್ಟಿಸಿದ್ದ ರಘು ಗೌಡ ಈ ಬಾರಿ ಬಿಗ್ ಬಾಸ್ ಮನೆಯ ಅತಿಥಿ ಎಂಬುದು ಬಿಗ್ ಬಾಸ್ ಅಭಿಮಾನಿಗಳ ಗಲ್ಲಿಯಲ್ಲಿ ಸುತ್ತಾಡುತ್ತಿರುವ ಸುದ್ದಿ. ರಘು ಗೌಡ ಚುಟುಕು ವೀಡಿಯೋಗಳಿಂದ ನೆಟ್ಟಿಗರ ಮನಗೆದ್ದಿದ್ದಾರೆ. ಹಲವರ ಸ್ಟೇಟಸ್​ನಲ್ಲಿ ಈಗಾಗಲೇ ಜಾಗ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದರೆ ರಘು ಗೌಡರಿಂದ ಭರ್ಜರಿ ಮನರಂಜನೆ ನಿರೀಕ್ಷಿಸಬಹುದು ಎಂಬ ನಿರೀಕ್ಷೆ ಅಭಿಮಾನಿಗಳದು.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬಿಗ್ ಬಾಸ್ ಮನೆಗೆ? ಬಿಗ್ ಬಾಸ್ ಕನ್ನಡ ಸೀಸನ್ 8 ಮನೆಗೆ ತುಪ್ಪದ ಬೆಡಗಿ, ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ ಕಾಲಿಡುತ್ತಾರೆ ಎಂಬ ಸುದ್ದಿ ಭರ್ಜರಿಯಾಗಿ ಸದ್ದುಮಾಡುತ್ತಿದೆ. ಡ್ರಗ್ ಪ್ರಕರಣದ ಆರೋಪದಲ್ಲಿ 140 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ನಟಿ, ಈಗ ಜಾಮೀನು ಪಡೆದಿದ್ದಾರೆ. ರಾಗಿಣಿ ದ್ವಿವೇದಿ ಬಗ್ ಬಾಸ್ ಮನೆಗೆ ಹೋಗುತ್ತಾರಾ ಎಂದು ಖಚಿತಪಡಿಸಿಕೊಳ್ಳಲು ವಾರಾಂತ್ಯದ ವರೆಗೆ ಕಾಯಬೇಕಿದೆ.

ಕಿರಣ್ ಶ್ರೀನಿವಾಸ್, ಸುನಿಲ್ ರಾವ್ ಬಿಗ್ ಬಾಸ್ ಮನೆ ಅತಿಥಿಗಳಾ? ಸ್ಯಾಂಡಲ್​ವುಡ್​ನ ನಟರಾದ ಕಿರಣ್ ಶ್ರೀನಿವಾಸ್ ಹಾಗೂ ಸುನಿಲ್ ರಾವ್ ಕೂಡ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಎಕ್ಸ್​ಕ್ಯೂಸ್ ಮಿ ನಟ ಸುನಿಲ್ ಅಂತೂ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಕಿರಣ್ ಫ್ಯಾನ್ ಫಾಲೋವರ್ಸ್ ಸಂಖ್ಯೆಗೂ ಕೊರತೆ ಏನಿಲ್ಲ.

‘ಲವ್ ಗುರು’ ರಾಜೇಶ್ ಮತ್ತು ಕಿರುತೆರೆ ನಟಿ ಸಮೀಕ್ಷಾ ಲವ್ ಗುರು ಖ್ಯಾತಿಯ ರಾಜೇಶ್ ಹಾಗೂ ಮೂರುಗಂಟು ನಟಿ ಸಮೀಕ್ಷಾ ಹೆಸರು ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ಓಡಾಡುತ್ತಿದೆ. ಇಬ್ಬರೂ ಕೂಡ ಬಿಗ್ ಬಾಸ್ ಮನೆಯಲ್ಲಿ ನೋಡುಗರ ಮನಸೂರೆಗೊಳ್ಳುತ್ತಾರೆ ಎಂಬ ನಿರೀಕ್ಷೆ ಜೋರಾಗಿದೆ.

ಅಗ್ನಿಸಾಕ್ಷಿಯ ಸುಕೃತಾ ಅಮೃತವರ್ಷಿಣಿಯ ರಜಿನಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿಯಾಗಿ ಮಿಂಚಿದ್ದ ಸುಕೃತಾ ಮತ್ತು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಬಿಗ್ ಬಾಸ್ ಮನೆಯ ಅತಿಥಿಗಳಾಗಲಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಮಿಡಿ ಕ್ವಾಟ್ಲೆ ಕೊಡುತ್ತಾರಾ ತಬಲಾ ನಾಣಿ, ತರಂಗ ವಿಶ್ವ? ಕಾಮಿಡಿ ನಟನೆಯಲ್ಲಿ ಹೆಸರು ಗಳಿಸಿರುವ ಅನುಭವಿ ನಟರಿಬ್ಬರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಮಾತು ಬಿಗ್ ಬಾಸ್ ಪ್ರಿಯರದು. ಹಾಗೆಯೇ ಆದರೆ, ತಬಲಾ ನಾಣಿ ಮತ್ತು ತರಂಗ ವಿಶ್ವ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.

ಸರಿಗಮಪ.. ಹನುಮಂತ ಆಗ್ತಾರಾ ಬಿಗ್ ಬಾಸ್! ಸರಿಗಮಪ ಮೂಲಕ ಜನರ ಮನೆ-ಮನದಲ್ಲಿ ಅಚ್ಚಳಿಯದೆ ಉಳಿದ ಹೆಸರು ಹನುಮಂತ. ಆತನ ಹಾಡು, ಭಾವ, ಮಾತು ಎಲ್ಲವೂ ಜನರಿಗೆ ಇಷ್ಟ. ಹಳ್ಳಿ ಹುಡುಗ ಹನುಮಂತ ಬಿಗ್ ಬಾಸ್ ಮನೆಗೆ ಹೋಗುತ್ತಾರೆ, ಭರಪೂರ ಮನರಂಜನೆ ನೀಡುತ್ತಾರೆ ಎಂಬ ನಿರೀಕ್ಷೆ ಪ್ರೇಕ್ಷಕರದ್ದು. ಉಳಿದಂತೆ ಸುದ್ದಿ ವಾಹಿನಿ ನಿರೂಪಕ ಅಮರ್ ಪ್ರಸಾದ್, ಹಿರಿಯ ನಟಿ ವಿನಯಾ ಪ್ರಸಾದ್ ಹೆಸರು ಕೂಡ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಇದನ್ನೂ ಓದಿ: Bigg Boss Kannada 8: ಕನ್ನಡ ಬಿಗ್​ ಬಾಸ್​-8ಕ್ಕೆ ಆಯ್ಕೆಯಾದ ಸ್ಪರ್ಧಿಗಳು ಸ್ಟಾರ್​ ಹೋಟೆಲ್​ಗಳಲ್ಲಿ ಕ್ವಾರಂಟೈನ್?

Bigg Boss Kannada: ಬಿಗ್​ ಬಾಸ್​ 8 ಆರಂಭಕ್ಕೆ ಕಿಚ್ಚ ಜೋಯಿಸರು ಕೊನೆಗೂ ನೀಡಿದ್ರು ಮುಹೂರ್ತ!

Published On - 5:49 pm, Tue, 23 February 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್